ಉಚಿತ ವಿದ್ಯುತ್ ಘೋಷಣೆ ಬೆನ್ನಲ್ಲೇ ಮತ್ತೆ ದರ ಏರಿಕೆ ಶಾಕ್
ಸೆಸ್ಕಾಂ (ಮೈಸೂರು) ಗ್ರಾಹಕರು ಜುಲೈ 1 ರಿಂದ ಡಿಸೆಂಬರ್ 31 ರವರೆಗೆ ಪ್ರತಿ ಯೂನಿಟ್ಗೆ 41 ಪೈಸೆ ಹೆಚ್ಚು ಪಾವತಿಸಬೇಕಾಗುತ್ತದೆ. ಹೆಸ್ಕಾಂ (ಹುಬ್ಬಳ್ಳಿ-ಧಾರವಾಡ) ಗ್ರಾಹಕರು ಜುಲೈ 1 ರಿಂದ ಡಿಸೆಂಬರ್ 31 ರವರೆಗೆ ಪ್ರತಿ ಯೂನಿಟ್ಗೆ 50 ಪೈಸೆ ಹೆಚ್ಚು ಪಾವತಿಸಬೇಕಾಗುತ್ತದೆ. ಗೆಸ್ಕಾಂ (ಕಲಬುರಗಿ) ಗ್ರಾಹಕರು ಜುಲೈ 1 ರಿಂದ ಸೆಪ್ಟೆಂಬರ್ ವರೆಗೆ ಪ್ರತಿ ಯೂನಿಟ್ಗೆ 34 ಪೈಸೆ ಮತ್ತು ಅಕ್ಟೋಬರ್ 1 ರಿಂದ ಡಿಸೆಂಬರ್ 31 ರವರೆಗೆ ಪ್ರತಿ ಯೂನಿಟ್ಗೆ 33 ಪೈಸೆ ಹೆಚ್ಚು ಪಾವತಿಸಬೇಕಾಗುತ್ತದೆ.