ಅಂಗಾಂಗ ದಾನ ಮಾಡಿ ಆರು ಮಂದಿಯ ಬಾಳಿಗೆ ಬೆಳಕಾದ 23 ವರ್ಷದ ಯುವಕನ ಕುಟುಂಬ
ಬೆಂಗಳೂರು:ಭೀಕರ ರಸ್ತೆ ಅಪಘಾತದಲ್ಲಿ ಇಹಲೋಕ ತ್ಯಜಿಸಿದ್ದ 23 ವರ್ಷದ ಫರ್ದೀನ್ ಖಾನ್ ಎಂಬುವರ ಅಂಗಾಂಗಗಳನ್ನು ದಾನ ಮಾಡಿರುವ ಅವರ ಕುಟುಂಬಸ್ಥರು ಮಾನವೀಯತೆ ಮೆರೆಯುವ ಜತೆಗೆ ಯುವಕನ ಹೆಸರನ್ನು ಚಿರಸ್ಥಾಯಿಗೊಳಿಸಿದ್ದಾರೆ.
ಜೂನ್ 4, 2023 ರಂದು ಸಂಜೆ ಫರ್ದೀನ್ ಮತ್ತು ಅವರ ಕುಟುಂಬವು ತುಮಕೂರಿನ ಶಿರಾದಿಂದ ಕುಟುಂಬ ಸ್ನೇಹಿತರ ಮನೆಗೆ ಭೇಟಿ ಮಾಡಿ ಹಿಂದಿರು ಗುತ್ತಿದ್ದಾಗ ಅಪಘಾತ ಭೀಕರ ಅಫಘಾತಕ್ಕೆ ಒಳಗಾಗಿತ್ತು. ವಾಹನ ವೊಂದು ಅವರಿಗೆ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಘಟನೆಯಲ್ಲಿ ಫರ್ದೀನ್ಗೆ ಗಂಭೀರ ಗಾಯಗಳಾಗಿದ್ದವು. ತಕ್ಷಣ ಸಿರಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಅಲ್ಲಿಂದ ತುಮಕೂರು ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಅವರಿಗೆ ಆಗಿರುವ ಗಾಯಗಳ ಗಂಭೀರತೆಯನ್ನು ಅರಿತುಕೊಂಡ ತುಮಕೂರು ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ತಂಡವು ಫರ್ದೀನ್ ಅವರನ್ನು ಬೆಂಗಳೂರಿನ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯವುಳ್ಳ ಆಸ್ಪತ್ರೆಗೆ ಸ್ಥಳಾಂತರಿಸಲು ಸಲಹೆ ನೀಡಿತು. ಬಳಿಕ ಜೂನ್ 5, 2023ರಂದು ಮುಂಜಾನೆ 1:30ಕ್ಕೆ ಫರ್ದೀನ್ ಅವರನ್ನು ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಯಶವಂತಪುರದ ಸ್ಪರ್ಶ್ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ವೈದ್ಯಕೀಯ ತಂಡದ ಅವಿರತ ಪ್ರಯತ್ನಗಳ ಹೊರತಾಗಿಯೂ, ಜೂನ್ 7ರಂದು ಬೆಳಿಗ್ಗೆ 11.55ಕ್ಕೆ ಅವರನ್ನು ಮೆದುಳು ನಿಷ್ಕ್ರಿಯ ಎಂದು ಘೋಷಿಸಲಾಯಿತು.
ಈ ಕಷ್ಟದ ಸಮಯದಲ್ಲಿ, ಫರ್ದೀನ್ ಅವರ ಕುಟುಂಬ ಸದಸ್ಯರು, ಅಂಗಾಂಗ ದಾನದ ಮಹತ್ವವನ್ನು ಸಂಪೂರ್ಣವಾಗಿ ತಿಳಿದಿದ್ದರು, ಹೀಗಾಗಿ ಅವರು ಸ್ವಯಂಪ್ರೇರಿತರಾಗಿ ಫರ್ದೀನ್ ಅವರ ಅಂಗಾಂಗಗಳನ್ನು ದಾನ ಮಾಡುವ ನಿರ್ಧಾರವನ್ನು ತೆಗೆದುಕೊಂಡರು. ಫರ್ದೀನ್ ಅವರ ಅಂಗಗಳನ್ನು ಯಶಸ್ವಿಯಾಗಿ ಆರು ವ್ಯಕ್ತಿಗಳಿಗೆ ಕಸಿ ಮಾಡಲಾಯಿತು, ಅಂಗಗಳನ್ನು ಜೋಡಣೆ ಮಾಡಿದ ವ್ಯಕ್ತಿಗಳಿಗೆ ಹೊಸ ಜೀವನವನ್ನು ಕಲ್ಪಿಸಿತು . ಫರ್ದೀನ್ ಅವರ ಬಲ ಮೂತ್ರಪಿಂಡ ಮತ್ತು ಪಿತ್ತಜನಕಾಂಗವನ್ನು ಯಶವಂತಪುರದ ಸ್ಪರ್ಶ್ ಆಸ್ಪತ್ರೆಯ ರೋಗಿಗಳಿಗೆ ಯಶಸ್ವಿಯಾಗಿ ಕಸಿ ಮಾಡಲಾಯಿತು ಮತ್ತು ಅವರ ಹೃದಯವನ್ನು ನಾರಾಯಣ ಹೃದಯಾಲಯಕ್ಕೆ ಕಳುಹಿಸಲಾಯಿತು. ಅವರ ಎಡ ಮೂತ್ರಪಿಂಡ ಮತ್ತು ಮೇದೋಜ್ಜೀರಕಾಂಗನ್ನು ಬನ್ನೇರುಘಟ್ಟ ರಸ್ತೆಯ ಅಪೊಲೊ ಆಸ್ಪತ್ರೆಗೆ ಮತ್ತು ಕಾರ್ನಿಯಾವನ್ನು ನಾರಾಯಣ ನೇತ್ರಾಲಯಕ್ಕೆ ಕಳುಹಿಸಲಾಯಿತು.
ಬೆಂಗಳೂರಿನ ರಾಜಾಜಿನಗರ ನಿವಾಸಿ ಫರ್ದೀನ್ ಖಾನ್ ಕಾರುಗಳ ಅಕ್ಸೆಸರಿ ಅಂಗಡಿಯನ್ನು ನಡೆಸುತ್ತಿದ್ದರು, ಅವರ ತಂದೆ ಫಿರೋಜ್ ಖಾನ್ ನಾಲ್ಕು ಫೋರ್ ವೀಲ್ ವಾಹಗಳ ಡೀಲರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರ ತಾಯಿ ಗೃಹಿಣಿ. ಫರ್ದೀನ್ ಒಬ್ಬನೇ ಮಗನಾಗಿದ್ದು, ಇಬ್ಬರು ವಿವಾಹಿತ ಸಹೋದರಿಯರು ಸಹ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.
ಭಾರತದ ಪ್ರಸ್ತುತ ಅಂಗಾಂಗ ದಾನದ ಪ್ರಮಾಣವು ಕೇವಲ ಶೇಕಡಾ 0.01 ರಷ್ಟಿದೆ, ಇದು ಸ್ಪೇನ್ ಮತ್ತು ಕ್ರೊಯೇಷಿಯಾದಂತಹ ದೇಶಗಳಿಗೆ ವ್ಯತಿರಿಕ್ತ ವಾಗಿದೆ. ಅಲ್ಲಿ ಅಂಗಾಂಗ ದಾನದ ಪ್ರಮಾಣವು ಶೇಕಡಾ 35 ಕ್ಕಿಂತ ಹೆಚ್ಚಾಗಿದೆ. ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (ನೋಟೋ) ಪ್ರಕಾರ, 2022ರಲ್ಲಿ ಭಾರತದಲ್ಲಿ ಒಟ್ಟು 15,562 ಕಸಿಗಳನ್ನು ಮಾಡಲಾಗಿದೆ. ವ್ಯಾಪಕವಾದ ಮೂಢನಂಬಿಕೆಗಳು ಮತ್ತು ಕಳಂಕ, ಅಂಗಾಂಗ ಕಸಿ ಸಂಯೋಜಕರ ಅಲಭ್ಯತೆ ಮತ್ತು ಅಸಮರ್ಪಕ ಮೂಲಸೌಕರ್ಯ ಸೇರಿದಂತೆ ನಾನಾ ಕಾರಣಗಳಿಂದ ಭಾರತದಲ್ಲಿ ಅಂಗಾಗ ಕಡಿಮೆ ದಾನ ಮತ್ತು ಅಂಗಾಂಗ ಕಸಿಯ ಪ್ರಮಾಣ ಕುಸಿತಕ್ಕೆ ಕಾರಣವಾಗಿದೆ. ಈ ಸಮಸ್ಯೆಯನ್ನು ಪರಿಹರಿಸಲು, ನಿಯೋಜಿತ ಕಸಿ ಸಂಯೋಜಕರ ನೇಮಕವನ್ನು ಕೇಂದ್ರ ಆರೋಗ್ಯ ಸಚಿವಾಲಯ ಕಡ್ಡಾಯಗೊಳಿಸಿದೆ. ಸಂಭಾವ್ಯ ದಾನಿಗಳ ಕುಟುಂಬಗಳಿಗೆ ಮಾರ್ಗದರ್ಶನ ಮತ್ತು ಸಲಹೆ ನೀಡುವಲ್ಲಿ, ಅವರಲ್ಲಿ ಉಂಟಾಗುವ ಗೊಂದಲಗಳನ್ನು ಪರಿಹರಿಸುವಲ್ಲಿ ಮತ್ತು ಅಂಗಾಂಗ ದಾನ ಪ್ರಕ್ರಿಯೆಯನ್ನು ಸುಗಮಗೊಳಿಸುವಲ್ಲಿ ಕಸಿ ಸಂಯೋಜಕರು ನಿರ್ಣಾಯಕ ಪಾತ್ರ ವಹಿಸುತ್ತಾರೆ.
ಸ್ಪರ್ಶ್ ಆಸ್ಪತ್ರೆಯ ಅಧ್ಯಕ್ಷ ಡಾ.ಶರಣ್ ಶಿವರಾಜ್ ಪಾಟೀಲ್ ಮಾತನಾಡಿ, ಅಂಗಾಂಗ ದಾನಕ್ಕೆ ಸಲಹೆ ನೀಡುವಲ್ಲಿ ಮತ್ತು ದಾನಿಗಳು ಮತ್ತು ಅವರ ಕುಟುಂಬಗಳನ್ನು ಪ್ರೇರೇಪಿಸುವಲ್ಲಿ ಮಾಧ್ಯಮಗಳ ಪಾತ್ರವನ್ನು ಕಡೆಗಣಿಸಲಾಗುವುದಿಲ್ಲ. ಅವರ ಪ್ರಯತ್ನಗಳು ಭರವಸೆಯನ್ನು ಮೂಡಿಸಿವೆ ಮತ್ತು ಸಂಕಷ್ಟದ ಸಮಯದಲ್ಲೂ ಅಂಗಾಂಗಗಳನ್ನು ಉದಾರವಾಗಿ ದಾನ ಮಾಡಲು ಕುಟುಂಬಗಳನ್ನು ಪ್ರೋತ್ಸಾಹಿಸಿವೆ. ಸಂಸ್ಥೆಗಳು ದಾನಿಗಳು ಮತ್ತು ಅವರ ಕುಟುಂಬಗಳನ್ನು ಗೌರವಯುತವಾಗಿ ನಡೆಸಿಕೊಳ್ಳುವುದು ಅಂಗಾಂಗ ದಾನದಲ್ಲಿ ಹೆಚ್ಚಿನ ಭಾಗವಹಿಸುವಿಕೆಗೆ ನಿರಂತರವಾಗಿದೆ. ನಿರೀಕ್ಷಣಾ ಪಟ್ಟಿಗಳು ಮತ್ತು ಕಟ್ಟುನಿಟ್ಟಾದ ದೇಣಿಗೆ ಪ್ರೋಟೋಕಾಲ್ಗಳನ್ನು ಅನುಸರಿಸುವಲ್ಲಿ ಜೀವಸಾರ್ತಕಥೆ ಸಂಸ್ಥೆಯ ಗಮನಾರ್ಹ ಸಮನ್ವಯವು ಒಟ್ಟು ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸಿದೆ ಎಂದು ಅಭಿಪ್ರಾಯಪಟ್ಟರು.
ಅಂಗಾಂಗ ದಾನ ಪ್ರಕ್ರಿಯೆಯನ್ನು ತಡೆರಹಿತವಾಗಿ ಕಾರ್ಯಗತಗೊಳಿಸಿದ್ದಕ್ಕಾಗಿ ನಾನು ಜೀವಸಸಾರ್ಥಕಥೆಯನ್ನು ಶ್ಲಾಘಿಸುತ್ತೇನೆ. ಹಸಿರು ಕಾರಿಡಾರ್ಗಳನ್ನು ತ್ವರಿತವಾಗಿ ರಚಿಸಿದ್ದಕ್ಕಾಗಿ, ಸಮಯೋಚಿತ ಸಾಗಾಟ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟ ಸಂಚಾರ ಪೊಲೀಸರು ಪ್ರಶಂಸೆಗೆ ಅರ್ಹರು . ಅಂಗಾಂಗ ದಾನವು ಅನೇಕರ ಶ್ರಮವನ್ನು ಒಳಗೊಂಡಿರುತ್ತದೆ, ಮತ್ತು ಈ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ಪ್ರಮುಖ ಪಾತ್ರ ವಹಿಸುತ್ತಾರೆ. ಈ ವರ್ಷ ಮಾತ್ರ, ರಾಜ್ಯವು 195 ಕಸಿಗಳಿಗೆ ಸಾಕ್ಷಿಯಾಗಿವೆ, ಇದು ಅಂಗಾಂಗ ದಾನದ ಪ್ರಮಾಣವನ್ನು ಹೆಚ್ಚಿಸುವಲ್ಲಿ ಸಾರ್ವಜನಿಕರು, ಸರ್ಕಾರಗಳು, ಮಾಧ್ಯಮ ಗಳು, ಆಸ್ಪತ್ರೆಗಳು ಮತ್ತು ಪ್ರಮುಖ ನಿರ್ಧಾರ ತೆಗೆದುಕೊಳ್ಳುವವರ ಸಾಮೂಹಿಕ ಪ್ರಯತ್ನಗಳಿಗೆ ಉತ್ತಮ ಉದಾಹರಣೆ.
ಈ ಎಲ್ಲ ಉಪಕ್ರಮ ಗಳು ಪ್ರಶಂಸನೀಯವಾಗಿದ್ದರೂ, ಮಾಡಬೇಕಾದ ಕೆಲಸ ಇನ್ನೂ ಬಹಳಷ್ಟಿವೆ. ಪಾಶ್ಚಿಮಾತ್ಯ ಜಗತ್ತಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ದಾನಿಗಳ ಸಂಖ್ಯೆ ಗಮನಾರ್ಹವಾಗಿ ಕಡಿಮೆ. ದಾನಗಳ ಪ್ರಮಾಣವನ್ನು ಹತ್ತು ಪಟ್ಟು ಹೆಚ್ಚಿಸಲು ಮತ್ತು ಈ ಅದರ ಪ್ರಮಾಣವನ್ನು ಕಾಪಾಡಿಕೊಳ್ಳಲು ನಾವು ಪ್ರಯತ್ನಿಸಬೇಕು. ಈ ಒಂದು ಹೃದಯಪೂರ್ವಕ ಸಂಕೇತವು ಭಾರತದಲ್ಲಿ ಅಂಗಾಂಗ ದಾನದ ತುರ್ತು ಅಗತ್ಯವನ್ನು ನೆನಪಿಸುತ್ತದೆ. ನಮ್ಮಲ್ಲಿ ಪ್ರತಿಯೊಬ್ಬರಿಗೂ ಬದಲಾವಣೆ ಮಾಡುವ ಶಕ್ತಿ ಇದೆ. ಒಟ್ಟಾಗಿ, ಅಂಗಾಂಗ ದಾನಕ್ಕೆ ನಮ್ಮ ಬೆಂಬಲ ನೀಡುವ ಪ್ರತಿಜ್ಞೆ ಮಾಡೋಣ ಮತ್ತು ಜೀವನವನ್ನು ಬದಲಾಯಿಸೋಣ ಎಂದು ಅವರು ಹೇಳಿದರು.
ಸ್ಪರ್ಶ್ ಆಸ್ಪತ್ರೆಯ ಗ್ರೂಪ್ ಸಿಒಒ ಜೋಸೆಫ್ ಪಸಂಘ ಮಾತನಾಡಿ, ಫರ್ದೀನ್ ಕುಟುಂಬ ತೆಗೆದುಕೊಂಡ ನಿರ್ಧಾರ ನಿಜಕ್ಕೂ ಶ್ಲಾಘನೀಯ. ಅಂಗಾಂಗ ದಾನವು ಸಹಾನುಭೂತಿಯ ಪ್ರಬಲ ಕ್ರಿಯೆಯಾಗಿದೆ, ಮತ್ತು ಇದು ಜೀವನವನ್ನು ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದೆ. ಅಂಗಾಂಗ ಕಸಿಯ ಪ್ರಕ್ರಿಯೆಯಲ್ಲಿ ಅವರ ಔದಾರ್ಯ ಮತ್ತು ನಂಬಿಕೆಗಾಗಿ ನಾವು ಕುಟುಂಬಕ್ಕೆ ತುಂಬಾ ಕೃತಜ್ಞರಾಗಿರುತ್ತೇವೆ. ಈ ಜೀವ ಉಳಿಸುವ ಕಾರ್ಯವು ಬೆಂಗಳೂ ರಿನ ಜನರ ಅದಮ್ಯ ಮನೋಭಾವವನ್ನು ಎತ್ತಿ ತೋರಿಸುವುದಲ್ಲದೆ, ಅಂಗಾಂಗ ದಾನದ ಬಗ್ಗೆ ಜಾಗೃತಿ ಮತ್ತು ಶಿಕ್ಷಣದ ನಿರ್ಣಾಯಕ ಅಗತ್ಯವನ್ನು ಒತ್ತಿಹೇಳುತ್ತದೆ. ಸ್ಪರ್ಶ್ ಗ್ರೂಪ್ ಆಫ್ ಹಾಸ್ಪಿಟಲ್ಸ್ ಅಂಗಾಂಗ ದಾನವನ್ನು ಪ್ರತಿಪಾದಿಸುವ ಬದ್ಧತೆಯಲ್ಲಿ ದೃಢವಾಗಿ ಉಳಿದಿದೆ ಮತ್ತು ಕಸಿ ಸ್ವೀಕರಿಸು ವವರು ಮತ್ತು ಅವರ ಕುಟುಂಬಗಳಿಗೆ ಸಮಗ್ರ ಆರೈಕೆ ಮತ್ತು ಬೆಂಬಲವನ್ನು ನೀಡುವುದನ್ನು ನಾವು ಮುಂದುವರಿಸುತ್ತೇವೆ ಎಂದು ಹೇಳಿದರು.
ಅಂಗಾಂಗ ದಾನ ಪ್ರೋಟೋಕಾಲ್ಗಳ ಪ್ರಕಾರ, ಕರ್ನಾಟಕ ರಾಜ್ಯದಲ್ಲಿ ಮೃತಪಟ್ಟ ವ್ಯಕ್ತಿಯ ಅಂಗಾಂಗ ದಾನದ ಮೇಲ್ವಿಚಾರಣೆ ನಡೆಸುವ ಸರ್ಕಾರಿ ಸಂಸ್ಥೆಯಾದ ಎಸ್ಒಟಿಟಿಒ (ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ) ಅಧಿಕಾರಿಗಳು ಅಂಗಾಂಗ ದಾನದ ಪ್ರಕ್ರಿಯೆಯನ್ನು ಪ್ರಾರಂಭಿಸಿದರು ಮತ್ತು ಕುಟುಂಬ ಸದಸ್ಯರಿಂದ ಲಿಖಿತ ಒಪ್ಪಿಗೆಯನ್ನು ಪಡೆದರು. ಕಾಯುವಿಕೆ ಪಟ್ಟಿಯ ಪ್ರಕಾರ ಸ್ವೀಕರಿಸುವವರನ್ನು ಆಯ್ಕೆ ಮಾಡಲಾಯಿತು ಮತ್ತು ಅಂಗಗಳನ್ನು ಕಸಿ ಮಾಡಲಾಯಿತು.
ಫರ್ದೀನ್ ಖಾನ್ ಅವರ ಅಂಗಾಂಗಗಳನ್ನು ದಾನ ಮಾಡುವ ಅವರ ಕುಟುಂಬದ ಉದಾರ ನಿರ್ಧಾರದ ಬಗ್ಗೆ ತಿಳಿದ ನಂತರ, ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಅವರು ತಕ್ಷಣವೇ ಕುಟುಂಬವನ್ನು ಸಂಪರ್ಕಿಸಿ ಕೃತಜ್ಞತೆ ಮತ್ತು ಮೆಚ್ಚುಗೆ ಯನ್ನು ವ್ಯಕ್ತಪಡಿಸಿದ್ದಾರೆ