ಐರನ್ ಲೆಗ್ ಅಂದರೆ ಅದು ಪ್ರಧಾನಿ‌ ಮೋದಿ: ವಿ.ಎಸ್. ಉಗ್ರಪ್ಪ ಲೇವಡಿ
ಬೆಂಗಳೂರು:ಐರನ್ ಲೆಗ್ ಅಂದರೆ ಅದು ಪ್ರಧಾನಿ‌ ಮೋದಿ. ಅವರು ಹೋದ ಕಡೆಯಲ್ಲೆಲ್ಲಾ ಬಿಜೆಪಿಗೆ ಸೋಲಾ ಗಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಚಿವ ಹೆಚ್. ಎಂ. ರೇವಣ್ಣ ಮಾತನಾಡಿ, ಪ್ರಧಾನಿ ಮೋದಿ ಪಶ್ಚಿಮ ಬಂಗಾಳಕ್ಕೆ ಹೋದರು, ಸೋತರು. ತಮಿಳುನಾಡಿಗೆ ಹೋದರು, ಅಲ್ಲಿ ಸೋತರು. ಹಿಮಾಚಲ ಪ್ರದೇಶಕ್ಕೆ ಹೋದರು, ಅಲ್ಲಿಯೂ ಸೋತರು. ಐರನ್ ಲೆಗ್ ಏನಾದರೂ ಇದ್ದರೆ ಅದು ಮೋದಿ ಎಂದು ಲೇವಡಿ ಮಾಡಿದರು.
ನಾವು ಐದು ಗ್ಯಾರಂಟಿಗಳನ್ನ ಕೊಟ್ಟಿದ್ದೆವು. ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಸೌಲಭ್ಯ ಕಲ್ಪಿಸುವ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಗೆ ಚಾಲನೆ ದೊರೆಕಿದೆ. 5.71 ಲಕ್ಷ ಮಹಿಳಾ ಪ್ರಯಾಣಿಕರು ಇದರ ಸೌಲಭ್ಯ ಪಡೆದಿದ್ದಾರೆ. ಐದೂ ಕಾರ್ಯಕ್ರಮಗಳನ್ನು ಟೈಂ ಬಾಂಡ್​ನಲ್ಲಿ ತಂದಿದ್ದೇವೆ. ಕೊಟ್ಟ ವಚನವನ್ನ ಕಾಂಗ್ರೆಸ್ ಪಾಲಿಸಿದೆ. ಬಿಜೆಪಿ ಪದೇ ಪದೆ ಡಬಲ್ ಎಂಜಿನ್ ಅಂತಿದ್ರು. ಈಗ ಜನ ಒಂದು ಎಂಜಿನ್ ಶೆಡ್ಡಿಗೆ ಕಳಿಸಿ ದ್ದಾರೆ.
ತಮಿಳುನಾಡಿನಲ್ಲಿ ಅಮಿತ್ ಶಾ, ತಮಿಳುನಾಡಿನವರು ಎರಡು ಬಾರಿ ಪ್ರಧಾನಿ ಆಗಬೇಕಿತ್ತು ಎಂದು ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಹೇಳಿದ್ದಾರೆ. ನೀವು ಅಡ್ವಾಣಿಯವರನ್ನೇ ಪ್ರಧಾನಿ ಮಾಡಲಿಲ್ಲ. ಬಂಗಾರು ಲಕ್ಷ್ಮಣ್ ಅವರನ್ನ ಪ್ರಧಾನಿ ಮಾಡಲಿಲ್ಲ. ನೀವು ದಕ್ಷಿಣ ಭಾರತದವರನ್ನ ಪ್ರಧಾನಿ ಮಾಡ್ತೀರ? ಖಂಡಿತವಾಗಿ ಮಾಡುವುದಿಲ್ಲ ಎಂದು ಟೀಕಿಸಿದರು.