91 ವರ್ಷದ ಅತ್ಯಂತ ಹಿರಿಯ ವ್ಯಕ್ತಿಗೆ ಯಶಸ್ವಿಯಾಗಿ ಹೃದಯದ ಮಹಾಪಧಮನಿ ಕವಾಟ ಬದಲಾವಣೆ
ಬೆಂಗಳೂರು:ಹೃದಯದ ಮಹಾಅಪಧಮನಿ ಕವಟದಲ್ಲಿ ದೀರ್ಘಕಾಲದ ಸಮಸ್ಯೆ ಹೊಂದದ್ದ 91 ವರ್ಷದ ಅತ್ಯಂತ ಹಿರಿಯ ವ್ಯಕ್ತಿಗೆ ಫೋರ್ಟಿಸ್‌ ಆಸ್ಪತ್ರೆ ವೈದ್ಯರು ಟ್ಯಾನ್ಸ್‌ಕ್ಯಾಥೆಟರ್‌ ಮಹಾಪಧಮನಿ ಕವಾಟವನ್ನು () ಯಶಸ್ವಿಯಾಗಿ ಅಳವಡಿಸಿದ್ದಾರೆ.
ಈ ಕುರಿತು ಮಾತನಾಡಿದ ಫೋರ್ಟಿಸ್‌ ಆಸ್ಪತ್ರೆಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿಯ ನಿರ್ದೇಶಕ ರಾಜ್‌ಪಾಲ್ ಸಿಂಗ್, 91 ವರ್ಷದ ವೃದ್ಧರೊಬ್ಬರಿಗೆ ಹೃದಯದಲ್ಲಿ ರಕ್ತದ ಹರಿಯುವಿಕೆಯ ಪ್ರಮಾಣ ಕಡಿಮೆಯಾಗಿ ಉಸಿರಾಟದ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದರು. ಪರೀಕ್ಷಿಸಿದ ಬಳಿಕ ಇವರಿಗೆ ತೀವ್ರ ಕ್ಯಾಲ್ಸಿಫಿಕ್ ಮಹಾಪಧಮನಿಯ ಸ್ಟೆನೋಸಿಸ್ ಸಮಸ್ಯೆ ಇರುವುದು ಪತ್ತೆಯಾಯಿತು.
ರೋಗಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡುವುದು ಹೆಚ್ಚಿನ ಅಪಾಯವಿದ್ದ ಕಾರಣ ಟ್ರಾನ್ಸ್‌ಕ್ಯಾಥೆಟರ್ ಮಹಾಪಧಮನಿಯ ಕವಾಟದ ಬದಲಾವಣೆ ಮಾಡುವುದೇ ಸೂಕ್ತವೆಂದು ಪರಿಗಣಿಸಿ ಈ ವಿಧಾನ ಆಯ್ಕೆ ಮಾಡಲಾಯಿತು.
ಮಹಾಪಧಮನಿಯ ಸ್ಟೆನೋಸಿಸ್ ಸಮಸ್ಯೆ ಇದ್ದಲ್ಲಿ, ಎಡಭಾಗದ ಹೃದಯ ಕವಾಟ ಕಿರಿದಾಗಿ ದೇಹಕ್ಕೆ ರಕ್ತ ಪೂರೈಕೆ ಸಮರ್ಪಕವಾಗಿ ಆಗುವುದಿಲ್ಲ. ವಯಸ್ಸಾಗುತ್ತಿದ್ದಂತೆ ಕವಾಟಕ್ಕೆ ಹಾನಿಯಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಸಾಮಾನ್ಯವಾಗಿ ಇಂತಹ ಕಾಯಿಲೆ ಕಾಣಿಸಿಕೊಂಡಾಗ ಹಾನಿಗೊಳಗಾದ ಕವಾಟಗಳನ್ನು ತೆರೆದ ಹೃದಯ ಶಸ್ತ್ರಚಿಕಿತ್ಸೆ ಮೂಲಕ ಬದಲಾಯಿಸಲಾಗುತ್ತದೆ. ಆದರೆ, ಇವರಿಗೆ 91 ವರ್ಷ ವಯಸ್ಸಾದ ಕಾರಣ, ಅತ್ಯಾಧುನಿಕ ತಂತ್ರಜ್ಞಾನವಾದ  ವಿಧಾನದ ಮೂಲಕ ಚಿಕಿತ್ಸೆ ನೀಡಲಾಯಿತು ಎಂದು ವಿವರಿಸಿದರು.
ಈ ಕಾರ್ಯವಿಧಾನದ ಮತ್ತೊಂದು ವಿಶೇಷವೆಂದರೆ, ರೋಗಿಯು ಪ್ರಜ್ಞೆ ಇರುವಾಗಲೇ ಸಂಪೂರ್ಣ ಅಳವಡಿಕೆಯ ಮಾಡಲಾಗಿದೆ.  ವಿಧಾನದ ಮರುದಿನವೇ ರೋಗಿಯನ್ನು ಬಿಡುಗಡೆಗೊಳಿಸಲಾಗಿದ್ದು, ಅವರು ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದರು.