ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟ
ಬೆಂಗಳೂರು:ವೃತ್ತಿಪರ ಕೋರ್ಸ್​ಗಳ ಪ್ರವೇಶಾತಿಗೆ ನಡೆದ ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್ ಫಲಿತಾಂಶ ಪ್ರಕಟಿಸಿದ್ದಾರೆ.
ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.
ಇಂಜಿನಿಯರಿಂಗ್ ಕೋರ್ಸ್​ ಪ್ರವೇಶ ಪರೀಕ್ಷೆಯ ಟಾಪ್ 10 ನಲ್ಲಿ ಬೆಂಗಳರಿನ 8 ವಿದ್ಯಾರ್ಥಿಗಳು ರ‍್ಯಾಂಕ್‌ ಗಳಿಸಿದ್ದಾರೆ. ಇನ್ನು, ಧಾರವಾಡ ಹಾಗೂ ಬಳ್ಳಾರಿಗೆ ಒಂದೊಂದು ರ‍್ಯಾಂಕ್‌ ಬಂದಿದೆ. ಹಾಗೆಯೇ ಯೋಗ ಮತ್ತು ನ್ಯಾಚುರೋಪತಿ ಕೋರ್ಸ ನಲ್ಲಿ ಬೆಂಗಳೂರಿಗೆ 5 ರ‍್ಯಾಂಕ್‌ ಬಂದಿದ್ದು, ಮಂಗಳೂರಿಗೆ 2, ಹುಬ್ಬಳ್ಳಿ 1, ರಾಜಸ್ಥಾನ -1 , ದಾವಣಗೆರೆಯ ಓರ್ವ ವಿದ್ಯಾರ್ಥಿ ರ‍್ಯಾಂಕ್‌ ಪಡೆದಿದ್ದಾರೆ.
2023ರ ಪರೀಕ್ಷೆಯಲ್ಲಿ ಒಟ್ಟು 2,44,345 ವಿದ್ಯಾರ್ಥಿಗಳು ಎಕ್ಸಾಂಗೆ ಹಾಜರಾಗಿದ್ದರು. ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶುಸಂಗೋಪನೆ, ಯೋಗ ಮತ್ತು ನ್ಯಾಚುರೋಪತಿ, ಡಿ ಫಾರ್ಮ,​ ಬಿಎಸ್​​​ಸಿ ನರ್ಸಿಂಗ್​ ಕೋರ್ಸ್​ಗಳಿಗೆ ಪ್ರವೇಶ ಪರೀಕ್ಷೆ ಯನ್ನು ನಡೆಸಲಾಗಿತ್ತು. ಕಳೆದ ಬಾರಿಯಂತೆ ಈ ಬಾರಿಯೂ ಬಾಲಕೀಯರು ಮೇಲುಗೈ ಸಾಧಿಸಿದ್ದಾರೆ.