ಬೆಂಗಳೂರು- ಹುಬ್ಬಳ್ಳಿ ವಂದೇ ಭಾರತ ರೈಲು ಸೇವೆಗೆ ಸಂತಸ
ಬೆಂಗಳೂರು:ಕರ್ನಾಟಕದ ಎರಡನೆಯ ಬೆಂಗಳೂರು- ಹುಬ್ಬಳ್ಳಿ ವಂದೇ ಭಾರತ ರೈಲು ಸೇವೆಗೆ ಸಂತಸವಾಗಿದೆ.
ಪಿ.ಕೃಷ್ಣಮೂರ್ತಿ, ನೈರುತ್ಯ ರೈಲ್ವೆ ವಲಯದ ಗ್ರಾಹಕ ಬಳಕೆದಾರರ ಸಲಹಾ ಸಮಿತಿ ಸದಸ್ಯರು ಬೆಂಗಳೂರು ಮತ್ತು ಹುಬ್ಬಳ್ಳಿ ನಡುವಿನ ಸೆಮಿ ಹೈ ಸ್ಪೀಡ್ ವಂದೇ ಭಾರತ್ ರೈಲು ಸೇವೆಗೆ ಸನ್ಮಾನ್ಯ ಭಾರತದ ಪ್ರಧಾನ ಮಂತ್ರಿಗಳಿಂದ ಚಾಲನೆ ಸಿಗುತ್ತಿರುವುದು ಸಂತೋಷದ ವಿಷಯವಾಗಿದೆ.
ಇದರಿಂದ ಕರ್ನಾಟಕವು ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಯನ್ನು ಸಾಧಿಸಲು ಒಂದು ಪ್ರಗತಿಪರ ಹೆಜ್ಜೆಯಾಗಿ ಮಾರ್ಪ ಡುವುದರಲ್ಲಿ ಸಂದೇಹವಿಲ್ಲ, ಇದೇ ರೀತಿ ಕರ್ನಾಟಕಕ್ಕೆ ಬೆಂಗಳೂರು- ವಿಜಾಪುರ, ಬೆಂಗಳೂರು- ಗೋವಾ, ಬೆಂಗಳೂರು- ಕಾರವಾರ, ಬೆಂಗಳೂರು- ಬಳ್ಳಾರಿ ಹೀಗೆ ಹಲವು ಮಾರ್ಗಗಳಲ್ಲಿ ವಂದೇ ಭಾರತ ರೈಲು ಸೇವೆಗಳಿಗೆ ಚಾಲನೆ ಸಿಕ್ಕರೆ ಕರ್ನಾಟಕವು ಒಂದು ಮಾದರಿ ರಾಜ್ಯವಾಗಿ ಬೆಳವಣಿಗೆ ಹೊಂದುವುದು ಶತಸಿದ್ಧ.
ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯತೆಯಿಂದ ಕೆಲಸ ಮಾಡುವುದು ಇಂದಿನ ದಿನಗಳಲ್ಲಿ ಅವಶ್ಯಕ ವಾಗಿದೆ. ಈ ವಂದೇ ಭಾರತ ರೈಲು ಬೆಂಗಳೂರು ಮತ್ತು ಹುಬ್ಬಳ್ಳಿ ನಡುವಿನ ಅಂತರವನ್ನು ಕಡಿಮೆ ಮಾಡುವುದಲ್ಲದೆ ಎರಡು ಮಹಾನಗರಗಳ ಜನರನ್ನು ಸಂಪರ್ಕಿಸುವ ಪ್ರಮುಖ ಮಾಧ್ಯಮವಾಗಿ ಕೆಲಸ ಮಾಡುತ್ತದೆ ಎಂದು ಹೇಳಲು ಸಂತಸವಾಗುತ್ತಿದೆ.