ನಾನ್ ಸ್ಟಾಪ್ ಬಸ್​ಗೆ ಮಹಿಳೆ ಕಲ್ಲೆಸೆತ: 5000 ರೂ. ದಂಡ
ಕೊಪ್ಪಳ:ತನ್ನ ಊರಿಗೆ ತೆರಳಲು ಯಾವುದೊಂದು ಬಸ್​ ನಿಲ್ಲಿಸದ ಕಾರಣ, ಕೊಪ್ಪಳದಿಂದ – ಹೊಸಪೇಟೆಗೆ ಹೊರಟಿದ್ದ ನಾನ್ ಸ್ಟಾಪ್ ಬಸ್​ಗೆ ಮಹಿಳೆಯೊಬ್ಬರು ಕಲ್ಲೆಸೆದ ಘಟನೆ ಕೊಪ್ಪಳದಲ್ಲಿ ಜರುಗಿದೆ.
ಇಲಕಲ್ಲ ಬಳಿಯ ಪಾಪನಳ್ಳಿ ನಿವಾಸಿ ಲಕ್ಷ್ಮಿ ಎಂಬಾಕೆ ಕೊಪ್ಪಳದ ಹುಲಿಗಿಯ ಹುಲಿಗೆಮ್ಮ ದೇವಿ ದರ್ಶನಕ್ಕೆ ಬಂದಿದ್ದರು. ಹುಲಿಗೆಮ್ಮನ ದರ್ಶನ ಪಡೆದು ಲಿಂಗಾಪುರ ಬಳಿ ಬಸ್​ಗಾಗಿ ಮಳೆಯಲ್ಲಿ ಕಾದು ಕುಳಿತಿದ್ದ ಲಕ್ಷ್ಮಿಗೆ ತನ್ನ ಊರಿಗೆ ತೆರಳಲು ಬಸ್ ನಿಲ್ಲಿಸದ ಕಾರಣ ಕೋಪ ಬಂದು ಬಸ್​ಗೆ ಕಲ್ಲೆಸೆದಿದ್ದಾರೆ.
ಕೊಪ್ಪಳ ಘಟಕದ ಬಸ್​ನ ಗ್ಲಾಸ್ ಡ್ಯಾಮೇಜ್ ಆದ ಕಾರಣ, ಕೊಪ್ಪಳದ ಮುನಿರಾಬಾದ್ ಪೊಲೀಸ್ ಠಾಣೆಗೆ ಬಸ್​ ನಿರ್ವಾಹಕರು ಬಸ್​ ಅನ್ನು ಪ್ಯಾಸೆಂಜರ್ ಸಮೇತ ಬಸ್ ನಿಲ್ಲಿಸಿ ದೂರು ನೀಡಲು ಮುಂದಾಗಿದ್ದರು. ಆದರೆ ಡಿಪೋ ಮ್ಯಾನೇಜರ್ 5000ರೂ. ದಂಡ ಕೇಳಿದ್ದಾರೆ. ಇಲ್ಲವಾದಲ್ಲಿ ಎಫ್ ಐ ಆರ್ ಮಾಡುವುದಾಗಿ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಬಳಿಕ ಮಾಡಿದ ತಪ್ಪಿಗೆ ಕ್ಷಮೆ ಕೇಳಿ ಪೊಲೀಸರಿಗೆ ಮನವಿ ಮಾಡಿ ಕೊನೆಗೆ 5000 ದಂಡ ಕಟ್ಟಿ ಅದೇ ಬಸ್​ಲ್ಲಿ ಲಕ್ಷ್ಮಿ ತೆರಳಿದ್ದಾರೆ.
ಹಾವೇರಿ ನಿಲ್ದಾಣದಲ್ಲಿ ಡ್ರೈವರ್​ ಸೀಟ್​ನ ಡೋರ್​ನ ಮೂಲಕವೇ ಪುರುಷರು ಬಸ್​ ಏರಿದ ಘಟನೆ ನಡೆದಿದೆ. ಬಸ್ ಸಂಖ್ಯೆ ಕಡಿಮೆ ಇರುವ ಹಿನ್ನೆಲೆ ಯಲ್ಲಿ ಪ್ರಯಾಣಿಕರು ಪರದಾಡಿದ್ದಾರೆ. ಅದರಲ್ಲೂ ಪುರುಷ ಪ್ರಯಾಣಿಕರು ಬಸ್​ನಲ್ಲಿ ಆಸನಕ್ಕಾಗಿ ಪೈಪೋಟಿ ನಡೆಸುವ ಪರಿಸ್ಥಿತಿ ಇದೆ. ಬಸ್​ನ ಬಾಗಿಲ ಬಳಿಯೂ ಮಹಿಳೆಯರೇ ತುಂಬಿದ್ದರಿಂದ ತಾಳ್ಮೆ ಕಳೆದುಕೊಂಡ ಪುರುಷರು ಬಸ್​ ಒಳಗೆ ಹೋಗಲು ಬಸ್​ನ ಡ್ರೈವರ್​ ಸೀಟ್​ನಿಂದ ಬಸ್​ ಹತ್ತಿದ್ದಾರೆ.