ಡೆಲಿವರಿ ಉದ್ಯೋಗಿಗಳಿಗೆ 4 ಲಕ್ಷಗಳ ಜೀವ ಮತ್ತು ಅಪಘಾತ ವಿಮೆ
ಹೊಟ್ಟೆ ಪಾಡಿಗೆ ದಿನವಿಡೀ ಕಷ್ಟ ಪಟ್ಟು ದುಡಿಯುತ್ತಿರುವ ವರ್ಗ ಅಂದ್ರೆ ಅದು ಡೆಲಿವರಿ ಮಾಡುವ ಕೆಲಸಗಾರರು ಅಂದರೆ ತಪ್ಪಾಗಲ್ಲ. ಅದರಲ್ಲೂ ಈ ಸ್ವಿಗ್ಗಿ, ಜೊಮ್ಯಾಟೋ ದಲ್ಲಿ ಎಷ್ಟು ಗಂಟೆಗೆ ಆರ್ಡರ್‌ ಮಾಡಿದ್ರೂ ನಿಮ್ಮ ಮನೆ ಬಾಗಿಲಿಗೆ ಬಿಸಿ ಬಿಸಿ ಆಹಾರ ವನ್ನು ತಂದು ಕೊಡುವವರು ಡೆಲಿವರಿ ಬಾಯ್ಸ್. ಇತ್ತೀಚೆಗೆ ರಾತ್ರಿ ಸಮಯದಲ್ಲಿ ಡೆಲಿವರಿ ಬಾಯ್ಸ್‌ ಡೆಲಿವರಿ ಮಾಡುವಾಗ ಅಪಘಾತವಾಗಿರುವ ಘಟನೆಗಳು ಹೆಚ್ಚಾಗುತ್ತಲೇ ಇದೆ.
ಈ ಕಾಮರ್ಸ್ ಸಂಸ್ಥೆಗಳ ಡೆಲಿವರಿ ಬಾಯ್ಸ್‌ಗೆ 4 ಲಕ್ಷಗಳ ಜೀವ ಮತ್ತು ಅಪಘಾತ ವಿಮೆಯನ್ನು ನೀಡುವುದಾಗಿ ಸರ್ಕಾರ ಘೋಷಿಸಿದೆ.