ವಂಡರ್‌ಲಾದಲ್ಲಿ ಬುಧವಾರವೂ ಸಿಗಲಿದೆ ಶೇ.25ರಷ್ಟು ರಿಯಾಯಿತಿ
ಬೆಂಗಳೂರು:ಮನರಂಜನಾ ಪ್ರಿಯರಿಗಾಗಿ ವಂಡರ್‌ಲಾ ಇದೀಗ ಬುಧವಾರ ಕೂಡ ವಿಶೇಷ ಕೊಡುಗೆಯನ್ನು ಘೋಷಿಸಿದೆ.
ಪ್ರತಿ ಬುಧವಾರ ಪಾರ್ಕ್‌ನ ಪ್ರವೇಶ ಟಿಕೆಟ್‌ಗಳ ಮೇಲೆ ಶೇ. 25 ರಷ್ಟು ರಿಯಾಯಿತಿ ಘೋಷಿಸಿದ್ದು, ಆನ್‌ಲೈನ್‌ನಲ್ಲಿ ಬುಕ್‌ ಮಾಡುವ ಮೊದಲ 1000 ಟಿಕೆಟ್‌ಗಳ ಮೇಲೆ ಈ ಕೊಡುಗೆ ಅನ್ವಯವಾಗಲಿದೆ.
ಆನ್‌ಲೈನ್‌ನಲ್ಲಿ ಟಿಕೆಟ್‌ ಖರೀದಿದಾರರಿಗೆ ಈ ಆಫರ್‌ನ ಅನುಭವ ಸಿಗಲಿದೆ. ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಟಿಕೆಟ್‌ಗಳನ್ನು ಕಾಯ್ದಿರಿಸಲು ಅನುವು ಮಾಡಿಕೊಡುತ್ತದೆ. ವಿಶೇಷ ಕೊಡುಗೆಯು ವಂಡರ್ಲಾ – ಬೆಂಗಳೂರು, ಹೈದರಾಬಾದ್ ಮತ್ತು ಕೊಚ್ಚಿಯ ಎಲ್ಲಾ ಮೂರು ಪಾರ್ಕ್‌ಗಳಲ್ಲಿ ಆನ್‌ಲೈನ್ ಟಿಕೆಟ್‌ಗಳಿಗೆ ಮಾತ್ರ ಮಾನ್ಯವಾಗಿರಲಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ವಂಡರ್‌ಲಾ ಹಾಲಿಡೇಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆಚಿಟ್ಟಿಲಪ್ಪಿಳ್ಳಿ, ಪ್ರತಿ ಬುಧವಾರದಂದು ಈ ವಿಶೇಷ ರಿಯಾಯಿತಿ ನೀಡಿರುವುದು ಸಾಕಷ್ಟು ಜನರಿಗೆ ಅನುಕೂಲವಾಗಲಿದ್ದು, ವಾರದ ಮಧ್ಯದದಲ್ಲೂ ವಂಡರ್‌ಲಾದಲ್ಲಿ ಮನರಂಜನೆ ಪಡೆಯಲು ಸಾಧ್ಯವಾಗಲಿದೆ. ಈ ಅದ್ಭುತ ಕೊಡುಗೆಯು ನಮ್ಮ ನಿಷ್ಠಾವಂತ ಪೋಷಕರಿಗೆ ಧನ್ಯವಾದ ಸಲ್ಲಿಸುವ ಒಂದು ಮಾರ್ಗವಾಗಿದೆ ಎಂದು ಹೇಳಿದರು.
ವಂಡರ್‌ಲಾ ತಮ್ಮ ಆನ್‌ಲೈನ್ ಪೋರ್ಟಲ್ ://../. ಮೂಲಕ ತಮ್ಮ ಪ್ರವೇಶ ಟಿಕೆಟ್‌ಗಳನ್ನು ಮುಂಚಿತವಾಗಿ ಕಾಯ್ದಿರಿಸಬಹುದು.ಹೆಚ್ಚಿನ ಮಾಹಿತಿಗಾಗಿ ://..//-25-----. ಗೆ ಭೇಟಿ ನೀಡಿ ಅಥವಾ ಕರೆ ಮಾಡಿ:
ಬೆಂಗಳೂರು: +91 80372 30333, +91 80350 73966ಹೈದರಾಬಾದ್: 0841 4676333, +91 91000 63636ಕೊಚ್ಚಿ: 0484-3514001, 7593853107