ನಿರಂತರ ಅಭ್ಯಾಸ ನಡೆಸಿದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಬಹುದು
ಚಿಕ್ಕನಾಯಕನಹಳ್ಳಿ :ಗುರಿ ಶ್ರದ್ದೆ ಜವಾಬ್ದಾರಿಗಳನ್ನು ಅರಿತು ವಿದ್ಯಾರ್ಥಿಗಳು ನಿರಂತರ ಅಭ್ಯಾಸ ನಡೆಸಿದಲ್ಲಿ ಮುಂದಿನ ದಿನಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಬಹುದು ಎಂದು ಶಾಸಕ ಸಿ.ಬಿ.ಸುರೇಶಬಾಬು ಹೇಳಿದರು.
ಪಟ್ಟಣದ ತೀನಂಶ್ರೀ ಭವನದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಆಯೋಜಿಸಿದ್ದ ಸಾಂಸ್ಕೃತಿಕ ಕ್ರೀಡೆ, ರಾಷ್ಟಿçÃಯ ಸೇವಾ ಯೋಜನೆ, ರೇಂಜರ್ ಮತ್ತು ರೋವರ್ ಚಟು ವಟಿಕೆಗಳ ಉದ್ಘಾಟನೆ, ಹಾಗು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವ್ಯಕ್ತಿಯೊಬ್ಬ ಯಾವುದೇ ವಿಷಯದಲ್ಲಿ ಪರಿಪೂರ್ಣನಾಗಬೇಕಾದರೆ ನಿರಂತರ ಅಭ್ಯಾಸ ಅಗತ್ಯ ಏಕಾಗ್ರತೆಯಿಂದ ಕೂಡಿದ ಪ್ರಯತ್ನದಿಂದ ಮಾತ್ರ ಯಶಸ್ಸು ಸಿದ್ದಿಸುತ್ತದೆ. ಮಾನವೀಯ ಮೌಲ್ಯಗಳನ್ನು ಶಿಕ್ಷಣದ ಜೊತೆಗೆ ಮೈಗೂಡಿಸಿಕೊಳ್ಳಿ, ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹುಳಿಯಾರು ಕೆಂಕೆರೆ ಕಾಲೇಜಿನ ಕನ್ನಡ ಉಪನ್ಯಾಸಕ ನಟರಾಜು ಸೇವಾ ಮನೋಭಾವ, ಸಾಮಾಜಿಕ ಜವಾಬ್ದಾರಿ, ನಾಯಕತ್ವ ಗುಣ, ಎನ್.ಎಸ್.ಎಸ್, ಶಿಬಿರಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಪ್ರಾಂಶುಪಾಲರು ಶಿವಾನಂದ್ ಪ್ರಸ್ತಾವಿಕವಾಗಿ ಮಾತನಾಡಿದರು. ಕಾಲೇಜು ಅಭಿವೃದ್ದಿ ಸಮಿತಿಯ ಚಿದಾನಂದಬಾಬು, ಉಮೇಶ ಉಪಸ್ಥಿತರಿದ್ದರು.
ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಸರಕಾರಿ ಪದವಿ ಕಾಲೇಜಿನ ಪ್ರಾಂಶು ಪಾಲರು ಶಿವಕುಮಾರ್, ಉಪನ್ಯಾಸಕ ಧನಂಜಯಮೂರ್ತಿ ಸ್ವಾಗತಿಸಿದರು. ಇದೇ ವೇಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.