ಹಲಸಿನಲ್ಲಿ ಉತ್ಪಾದನಾ ತಾಂತ್ರಿಕತೆಗಳು ಹಾಗೂ ಮೌಲ್ಯವರ್ಧಿತ ಉತ್ಪನ್ನಗಳ ಪ್ರಾತ್ಯಕ್ಷಿಕೆ
ತಿಪಟೂರು:ಹಲಸಿನಹಣ್ಣಿನ ಸೀಸನ್ ಈಗಾಗಲೇ ಬಂದಾಗಿದೆ, ನಾಲಿಗೆಗೆ ರುಚಿ ನೀಡುವ ಈ ಹಲಸಿನ ಹಣ್ಣಿನಲ್ಲಿ ಅತ್ಯದ್ಬುತ ವಾದ ಔಷಧೀಯ ಗುಣಗಳು ಕೂಡ ಅಡಗಿವೆ. ಹಿಂದೆ ಹಳ್ಳಿಗಳಲ್ಲಿ ವಾಸಿಸುತ್ತಿರು ವವರಿಗೆ ಮಾತ್ರ ಸೀಮಿತವಾಗಿದ್ದ ಹಲಸಿನ ಹಣ್ಣಿನ ಸೇವನೆ ಇದೀಗ ಪಟ್ಟಣಗಳಲ್ಲಿ ಸೂಪರ್ ಮಾರ್ಕೆಟ್‌ ನಲ್ಲಿ ದೊರಕುತ್ತದೆ. ಹಲಸಿನ ಹಣ್ಣಿನಲ್ಲಿರುವ ಪೋಷಕಾಂಶಗಳು ಅನೇಕ ಸಮಸ್ಯೆಗಳಿಗೆ ರಾಮಬಾಣವಾಗಿದೆ ಸಿರಿ ಸಂಘದ ಸಂಸ್ಥಾಪಕರಾದ ಪದ್ಮರಾಜು ಎಂದರು.
ಕೃಷಿ ವಿಜ್ಞಾನ ಕೇಂದ್ರ, ಕೊನೇಹಳ್ಳಿ, ತಿಪಟೂರು ಹಾಗೂ ಹಳ್ಳಿ ಸಿರಿ ಸಂಘ ತೋವಿನಕೆರೆ, ಕೊರಟಗೆರೆ ತಾ., ಇವರ ಸಂಯುಕ್ತ ಆಶ್ರಯದಲ್ಲಿ ತಡಸೂರು ಗ್ರಾಮದಲ್ಲಿ ಹಲಸಿನ ಉತ್ಪಾದನಾ ತಾಂತ್ರಿಕತೆಗಳು ಹಾಗೂ ಮೌಲ್ಯವರ್ಧಿತ ಉತ್ಪನ್ನಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಆಯೋಚನೆ ಮಾಡಿ ಈ ಕಾರ್ಯಕ್ರಮವನ್ನು ಹಲಸಿನಹಣ್ಣನ್ನು ಕಟಾವು ಮಾಡುವ ಮುಖಾಂತರ ಉದ್ಘಾಟಿಸಲಾಯಿತು.
ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥ ಡಾ .ವಿ.ಗೋವಿಂದಗೌಡ ರೈತರು ಹಲಸು ಬೆಳೆಯನ್ನು ಉಪ ಬೆಳೆಯಾಗಿ ಪರಿಗಣಿಸಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಹೊಸ-ಹೊಸ ವಿವಿಧ ಬಗೆಯ ಹಲಸು ಬೆಳೆಯನ್ನು ಬೆಳೆಯುವವರ ಜೊತೆಗೆ ಮೌಲ್ಯವರ್ಧಿತ ಪದಾರ್ಥಗಳನ್ನು ತಯಾರಿಸಿ ಮಾರಾಟ ಮಾಡುವ ಮೂಲಕ ಆರ್ಥಿಕ ಅಭಿವೃದ್ಧಿ ಹೊಂದ ಬಹುದೆ0ದು ತಿಳಿಸಿಕೊಟ್ಟರು.
ತಿಪಟೂರು ರೈತ ಉತ್ಪಾದಕರ ಸಂWದ ಆರ್ಥಿಕ ಸಲಹಗಾರರು ಹಾಗೂ ನಿರ್ದೇಶಕರಾದ ಶ್ರೀಮತಿ ರೇಖಾಮಂಜುನಾಥ್ ಮಾತನಾಡಿ ಬ್ಯಾಂಕ್‌ಗಳ ಹಣಕಾಸಿನ ನೆರವಿನ ಮಾಹಿತಿಯನ್ನು ನೀಡಿದರು.
ಭಾರತೀಯ ಕಿಸಾನ್ ಸಂಘದ ತುಮಕೂರು ಜಿಲ್ಲಾ ಘಟಕ ಮಹಿಳಾ ಪ್ರಮಖ್ ಶ್ರೀಮತಿ ನವೀನಸದಾಶಿವಯ್ಯ ಮಾತನಾಡಿ ರೈತರು ಮುಖ್ಯಬೆಳೆಗೆ ಸಿಗುವ ಬೆಳೆಯ ಬಗ್ಗೆ ಯೋಚಿಸಿ ಉಳಿದ ಬೆಳೆಗಳನ್ನು ನಿರ್ಲಕ್ಷಿಸುವುದು ಬೇಡ, ಪ್ರತಿ ಯೊಂದರ ಮೌಲ್ಯವರ್ಧನೆ ಯನ್ನು ಮಾಡಿ ಹಣಗಳಿಸಬಹುದು ಎಂದು ತಿಳಿಸಿಕೊಟ್ಟರು.
ಕೊನೆಹಳ್ಳಿ ಆಯಷ್ ಹಿರಿಯ ವೈಧ್ಯಾಧಿಕಾರಿ ಡಾ. ಸುಮನಾ, ಮಾತನಾಡಿ ಹಲಸಿನ ಹಣ್ಣಿನಲ್ಲಿ ಹೇರಳವಾಗಿರುವ ಜೀವಸತ್ವಗಳು ದೇಹಕ್ಕೆ ತುಂಬಾ ಒಳ್ಳೆಯದು. ಹಲಸಿನ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಎ ಹೇರಳ ವಾಗಿ ಕಂಡುಬರುತ್ತದೆ. ಇದು ದೇಹದಲ್ಲಿ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ, ಇದನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಹಲಸಿನ ಹಣ್ಣು ಮತ್ತು ಬೀಜಗಳಿಂದ ತಯಾರಿಸಿದ ತಿನಿಸಿಗಳು ನೋಡುಗರ ಬಾಯಲ್ಲಿ ನಿರೂರುವಂತೆಮಾಡಿದವು. ಹಲಸಿನ ಪಕೋಡ/ಬೋಂಡ, ಹಲಸಿನ ದೋಸೆ, ಹಲಸಿನ ಹೋಳಿಗೆ, ಹಲಸಿನ ಹಪ್ಪಳ, ಹಲಸಿನ ಸೊಗೆಯಿಂದ ತಯಾರಿಸಿದ ಮಿಕ್ಸರ್, ಹಲಸಿನ ಸಾವಿಗೆ, ಹಲಸಿನ ಕೇಸರಿ ಬಾತ್, ಹಲಸಿನ ಬೀಜದ ಸೂಪ್ ತಯಾರುಸುವ ತರಬೇತಿ ನೀಡ ಲಾಯಿತು. ಹಳ್ಳಿ ಸಿರಿ ಸಿರಿ ಸಂಘದ ಮಂಜಮ್ಮ, ಸವಿತ, ಪುಷ್ಪಲತಾ ಮತ್ತು ಶಾನುವಾಜ್ ಹಲಸಿನ ಹಣ್ಣು ಮೌಲ್ಯ ವರ್ಧಿತ ಪದಾರ್ಥಗಳ ಪ್ರಾತ್ಯಕ್ಷಿಕೆಯನ್ನು ನೆರೆವೆರಿಸಿಕೂಟ್ಟರು.
ಈ ಕಾರ್ಯಕ್ರಮದಲ್ಲಿ ತಡಸೂರು ಶಾಲಾ ಮಕ್ಕಳಿಗೆ ಅರಿವು ಮೂಡಿಸುವ ಪ್ರಯತ್ನವನ್ನು ಕೂಡ ಮಾಡಲಾಯಿತು. ಕಾರ್ಯ ಕ್ರಮದಲ್ಲಿ ತಿಪಟೂರು ಗ್ರಾಮಾಂತರ ಪೋಲಿಸ್ ವೃತ್ತ ನಿರೀಕ್ಷಕರು ಸಿದ್ಧರಾಮೇಶ್ವರ ಭಾಗವಹಿಸಿದ್ದರು. ಕೆ.ವಿ.ಕೆ ವಿಜ್ಞಾನಿಗಳಾದ ಡಾ. ನಿತ್ಯಾಶ್ರೀ ಕೆ., ಶ್ರೀ ದರ್ಶನ್, ಡಾ. ಕೀರ್ತಿಶಂಕರ್ ಕೆ, ಶ್ರೀ ಮನೋಜ್ ಹಾಗೂ ಇತರ ಸಿಬ್ಬಂದಿವರ್ಗದವರು ಹಾಗೂ ತಡಸೂರಿನ ನಾಗರಾಜು, ಯೋಗನಂದ ಮೂರ್ತಿ, ತ್ರಿವೇಣಿ ಮತ್ತು ಇತರೆ ಗ್ರಾಮ ಸ್ಥರು ಭಾಗವಹಿಸಿದರು.
*
ನಮ್ಮ ಪೂರ್ವಜರು ತೋಟದಲ್ಲಿ ಹಲಸು ಹಾಗೂ ಮಾವಿನ ಮರಗಳನ್ನು ಬೆಳಸುತ್ತಿದ್ದು, ಹಣ್ಣುಗಳನ್ನು ಹಂಚಿ ತಿನ್ನುವ ಸಂಸ್ಕೃತಿಯನ್ನು ಕಲಿಸಿದ್ದು, ಎಲ್ಲರ ಜೊತೆ ಅಂಟಿನೊAದಿಗೆ ಬಾಂಧವ್ಯವನ್ನು ವೃದ್ದಿಸುವ ಕೆಲಸವನ್ನು ಹಣ್ಣುಗಳ ಮುಖಾಂತರ ಹಿರಿಯರು ಮಾಡುತ್ತಿದ್ದರು ಜೊತೆಯಲ್ಲಿ ಹಲಸಿನ ಹಣ್ಣಿನಲ್ಲಿ ಉತ್ತಮವಾದ ಆರ್ಯುವೇದ ಉತ್ತಮ ಗುಣವಿದ್ದು, ಯಾವುದೇ ರಾಸಾಯನಿಕ ವಸ್ತುಗಳ ಮಿಶ್ರಣವಿಲ್ಲದೆಯಿರುವುದರಿಂದ ಆರೋಗ್ಯಕ್ಕೆ ಉತ್ತಮ ಆಹಾರವಾಗಿದ್ದು, ಪಚನಕ್ರೀಯೆ ಸೇರಿದಂತೆ ಸಿ, ಎ ವಿಟಮಿನ್ ಅಂಶವಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಡಾ. ಸುಮನಾ ಹಿರಿಯ ವೈದ್ಯಾಧಿಕಾರಿ ಆಯುಷ್ ಇಲಾಖೆ ತಿಪಟೂರು.