ಹರಪನಹಳ್ಳಿ ಸಾರ್ವಜನಿಕ ಆಸ್ಪತ್ರೆಗೆ ನ್ಯಾಯಾಧೀಶರ ದಿಢೀರ್ ಭೇಟಿ
ಹರಪನಹಳ್ಳಿ:ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಸಿವಿಲ್ ನ್ಯಾಯಾ ಧೀಶರಾದ ಫಕ್ಕೀರವ್ವ ಕೆಳಗೇರಿ ಸೋಮವಾರ ದಿಢೀರ್ ಭೇಟಿ ನೀಡಿ ಸ್ಪಚ್ಚತೆ ನಿರ್ವಹಣೆ, ಆರೋಗ್ಯ ಸೇವೆ ಕುರಿತು ಪರಿಶೀಲನೆ ನಡೆಸಿದರು.
ಆಸ್ಪತ್ರೆ, ಶೌಚಾಲಯ ವ್ಯವಸ್ಥೆ, ಡಯಾಲಿಸಿಸ್ ಕೇಂದ್ರ ವಾರ್ಡ್ ನಿರ್ವಹಣೆ, ಆರೋಗ್ಯ ಸೇವೆ, ವೈದ್ಯಕೀಯ ಸಿಬ್ಬಂದಿ, ಕುಡಿಯುವ ನೀರು ಇತರೆ ಮೂಲ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು.
ಆಸ್ಪತ್ರೆ ಉಗ್ರಾಣಕ್ಕೆ ಭೇಟಿ ನೀಡಿ ಔಷಧಿ ದಾಸ್ತಾನು ಬಗ್ಗೆ ಮಾಹಿತಿ ಕೇಳಿದಾಗ ಸಿಬ್ಬಂದಿ ತಡಬಡಿಸಿದರು. ಹೀಗಾಗಿ ಸಂಬAಧಿಸಿದ ಸಿಬ್ಬಂದಿಗೆ ಪ್ರತಿನಿತ್ಯ ಸಾರ್ವಜನಿಕ ಬಗ್ಗೆ ಕಾಳಜಿವಹಿಸಿ ಉತ್ತಮವಾದ ಆರೋಗ್ಯ ತಪಾಸಣೆ ನಿರ್ವಹಿಸಬೇಕು ಎಂದು ವೈದ್ಯಾಧಿಕಾರಿಗಳಿಗೆ ಸಲಹೆ ನೀಡಿದರು.
ಪ್ರತಿನಿತ್ಯಾ ಸಾರ್ವಜನಿಕ ಆಸ್ಪತ್ರೆ ಬರುವ ಬಡ ರೋಗಿಗಳ ಜತೆ ಸೌಜನ್ಯಯುತವಾಗಿ ವರ್ತಿಸಿ ಮಾನವೀಯತೆ ದೃಷ್ಟಿಯಿಂದ ಗುಣಮಟ್ಟದ ಆರೋಗ್ಯ ಸೇವೆ ನೀಡಬೇಕು ಎಂದರು ಸೂಚಿಸಿದರು. ಈ ಸಂದರ್ಭದಲ್ಲಿ ಡಾ|| ಶಂಕರ್ ನಾಯ್ಕ,ಸೇರಿದಂತೆ ಇತರೆ ಸಾರ್ವಜನಿಕರ ಆಸ್ಪತ್ರೆಯ ಸಿಬ್ಬಂಧಿಗಳು ಹಾಜರಿದ್ದರು.