ಟೆಕ್ಕಿಯಿಂದ 1.14 ಕೋಟಿ ರೂ. ದೋಚಿದ ಮಹಿಳೆ…!
ಬೆಂಗಳೂರು :ಮ್ಯಾಟ್ರಿಮೊನಿಯಲ್ಲಿ ಪರಿಚಯವಾದ ಮಹಿಳೆಯೊಬ್ಬಳು ಟೆಕ್ಕಿಯೊಬ್ಬರಿಂದ 1.14 ಕೋಟಿ ದೋಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
41 ವರ್ಷದ ಟೆಕ್ಕಿಯೊಬ್ಬರು ನೀಡಿರುವ ದೂರಿನನ್ವಯ ವೈಟ್ ಫೀಲ್ಡ್ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾ ಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಕಾರ್ಯ ಪ್ರವೃತ್ತರಾದ ಪೊಲೀಸರು ಆರೋಪಿಯ ಖಾತೆಯಿಂದ 84 ಲಕ್ಷ ರೂ. ಹಣವನ್ನು ತಡೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಯುಕೆ ಮೂಲದ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ದೂರುದಾರ, ಸಾಫ್ಟ್‌ವೇರ್‌ವೊಂದರ ತರಬೇತಿ ಪಡೆಯಲು ಬೆಂಗಳೂರಿಗೆ ಬಂದಿದ್ದರು. ಇದೇ ಸಂದರ್ಭದಲ್ಲಿ ಮದುವೆಯಾಗುವ ಉದ್ದೇಶದಿಂದ ಮ್ಯಾಟ್ರಿಮೊನಿ ಯಲ್ಲಿ ನೋಂದಣಿಯಾಗಿದ್ದರು. ಅದೇ ಮ್ಯಾಟ್ರಿಮೊನಿಯಲ್ಲಿ ಸಾನ್ವಿ ಅರೋರಾ ಎಂಬ ಹೆಸರಿನಲ್ಲಿ ಪರಿಚಯ ವಾದ ಮಹಿಳೆ ಜುಲೈ 7ರಂದು ದೂರುದಾರರಿಗೆ ವಿಡಿಯೋ ಕರೆ ಮಾಡಿದ್ದಾಳೆ.
ಕರೆ ಸ್ವೀಕರಿಸಿದಾಗ ಆರೋಪಿಯು ನಗ್ನವಾಗಿದ್ದು, ದೂರುದಾರನಿಗೆ ತಿಳಿಯ  ದಂತೆ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾಳೆ. ಬಳಿಕ ಬ್ಲ್ಯಾಕ್‌ಮೇಲ್ ಮಾಡಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದು, ಇಲ್ಲವಾದಲ್ಲಿ ವಿಡಿಯೋವನ್ನು ದೂರುದಾರನ ಪೋಷಕರಿಗೆ ಕಳಿಸುವುದಾಗಿ ಬೆದರಿಕೆಯೊಡ್ಡಿದ್ದಾಳೆ. ಇದರಿಂದ ಬೆದರಿದ ದೂರು ದಾರರು ಆರೋಪಿಯು ತಿಳಿಸಿದಂತೆ ಆಕೆಯ ಬ್ಯಾಂಕ್ ಖಾತೆಗಳು, ಯುಪಿಐಗಳಿಗೆ ಹಂತ ಹಂತವಾಗಿ ಒಟ್ಟು 1 ಕೋಟಿ 14 ಲಕ್ಷ 18 ಸಾವಿರದ 121 ರೂಪಾಯಿ ವರ್ಗಾಯಿಸಿದ್ದಾರೆ. ಬಳಿಕ ವೈಟ್ ಫೀಲ್ಡ್ ಠಾಣೆಗೆ ದೂರು ನೀಡಿದ್ದಾರೆ.