ಯುವತಿಗೆ ಯಶಸ್ವಿ ಚಿಕಿತ್ಸೆ: ಹಣಕಾಸಿನ ಬೆಂಬಲ
ಬೆಂಗಳೂರು:ಸ್ಪರ್ಶ್ ಫೌಂಡೇಶನ್, ಡ್ರೀಮ್ ಇಂಡಿಯಾ ನೆಟ್ವರ್ಕ್ (ಡಿಐಎನ್) ಸಹಯೋಗದೊಂದಿಗೆ ಗಂಭೀರ ಸ್ವರೂಪದ ಪ್ಯಾಂಕ್ರಿಯಾಟೈಟಿಸ್​ ರೋಗದಿಂದ ಬಳಲುತ್ತಿದ್ದ 18 ವರ್ಷದ ರೋಸಿ ಮೇರಿ ಎಂಬ ಯುವತಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡವು ದರೊಂದಿಗೆ ಜೀವ ಉಳಿಸಿದೆ. ಅವರ ಆರ್ಥಿಕ ಬಿಕ್ಕಟ್ಟು ಮತ್ತು ಗಂಭೀರ ಸ್ಥಿತಿಯನ್ನು ಅರಿತುಕೊಂಡ, ಸ್ಪರ್ಶ್ ಫೌಂಡೇಶನ್ ಅವರಿಗೆ ಜೀವ ಉಳಿಸುವ ಚಿಕಿತ್ಸೆ ಕಲ್ಪಿಸುವ ಜತೆಗೆ ಚಿಕಿತ್ಸೆಗಾಗಿ ಹಣಕಾಸಿನ ಬೆಂಬಲವನ್ನು ಒದಗಿಸಿದೆ .
ಚಿಕ್ಕ ವಯಸ್ಸಿನಲ್ಲಿಯೇ ತನ್ನ ಹೆತ್ತವರನ್ನು ದುರಂತವೊಂದರಲ್ಲಿ ಕಳೆದುಕೊಂಡಿದ್ದ ರೋಸಿ ಮೇರಿ, ಅನಾಥಾಶ್ರಮವೊಂದರಲ್ಲಿ ಸನ್ಯಾಸಿನಿಯರ ಸಹಾನುಭೂತಿಯ ಆರೈಕೆಯಲ್ಲಿ ಬೆಳೆದಿದ್ದರು. ಅನಾಥಾಶ್ರಮದ ಹಾಸ್ಟೆಲ್​ ರೋಸಿಯ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿತಲ್ಲದೆ, ಪ್ರೌಢಶಾಲಾ ಅಧ್ಯಯನವನ್ನು ಪೂರ್ಣಗೊಳಿಸಲು ನೆರವು ಮಾಡಿಕೊಟ್ಟಿತು. ಪ್ರಸ್ತುತ ರೋಸಿ ಬಸವನಗುಡಿಯ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅಲ್ಲಿ ಅವರು ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ಸಮಾಜಶಾಸ್ತ್ರದಲ್ಲಿ ಪದವಿ ಪಡೆಯಲು ಮುಂದಾಗಿದ್ದಾರೆ. ಹೋಟೆಲ್ ಮ್ಯಾನೇಜ್ಮೆಂಟ್​ ಕಲಿತು ವೃತ್ತಿಜೀವನವನ್ನು ಅನ್ವೇಷಿಸುವ ಅಥವಾ ಬ್ಯೂಟಿಷಿ ಯನ್ ಆಗಬೇಕೆಂಬ ಆಕಾಂಕ್ಷೆ ರೋಸಿಯದ್ದು, ರೋಸಿ ಜೂನ್ 2023ಕ್ಕೆ 19 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.
ಬಾಲ್ಯದಿಂದಲೂ ರೋಸಿಗೆ ಹೊಟ್ಟೆ ನೋವಿನ ಸಮಸ್ಯೆ ಕಂಡು ಬರುತ್ತಿತ್ತು. ನಿರಂತರ ಮತ್ತು ತೀವ್ರವಾದ ನೋವು ಅನುಭವಿಸು ತ್ತಿದ್ದಳು. ನೋವಿನಿಂದಾಗಿ ಅವರಿಗೆ ತನ್ನ ದೈನಂದಿನ ಚಟುವಟಿಕೆಗಳನ್ನು ಪೂರೈಸಲೂ ಸಮಸ್ಯೆ ಆಗುತ್ತಿತ್ತು. ಕೆಲವೊಂದು ತರಗತಿಗಳಲ ಪರೀಕ್ಷೆಗಳನ್ನು ಬರೆಯುವುವುದಕ್ಕೂ ಅವರಿಗೆ ಸಮಸ್ಯೆ ಆಗಿತ್ತು. ನೋವಿಗೆ ಜಠರಗರುಳಿನ ಸಮಸ್ಯೆಗಳು ಕಾರಣ ವೆಂದು ರೋಸಿ ಆರಂಭದಲ್ಲಿ ಭಾವಿಸಿದ್ದರು. ಸಣ್ಣ ಚಿಕಿತ್ಸಾಲಯಗಳು ಮತ್ತು ಆಸ್ಪತ್ರೆಗಳಲ್ಲಿನ ಅನೇಕ ವೈದ್ಯರಿಂದ ವೈದ್ಯಕೀಯ ಸಲಹೆಯನ್ನು ಪಡೆದುಕೊಂಡ ಹೊರತಾಗಿಯೂ ನೋವಿನ ತೀವ್ರತೆ ಹೆಚ್ಚಾಯಿತೇ ಹೊರತು ಕಡಿಮೆಯಾಗಲಿಲ್ಲ. ಬಳಿಕ ಹಾಸ್ಟೆಲ್​ನ ಅವರ ಪಾಲಕರು ಮೂಲ ಕಾರಣವನ್ನು ಕಂಡುಹಿಡಿಯಲು ಸ್ಕ್ಯಾನ್ ಮಾಡಿಸುವಂತೆ ಸೂಚಿಸಿದರು. ಈ ವೇಳೆ ತೀವ್ರವಾದ ಪ್ಯಾಂಕ್ರಿಯಾಟೈಟಿಸ್ ಸಮಸ್ಯೆ ಇರುವುದು ಬಹಿರಂಗಗೊಂಡಿತು. ಈ ಸ್ಥಿತಿಯಿಂದಾಗಿ ಮೇದೋಜ್ಜೀರಕ ಗ್ರಂಥಿಯು ಅಲ್ಪಾವಧಿಯಲ್ಲಿ ಉರಿಯೂತಕ್ಕೆ ಒಳಗಾಗುತ್ತಿತ್ತು.
ಅನೇಕ ವೈದ್ಯರೊಂದಿಗಿನ ಸಂದರ್ಶಿಸಿ ಸಮಾಲೋಚನೆಗಳನ್ನು ನಡೆಸಿ ಔಷಧ ತೆಗೆದುಕೊಂಡರೂ ರೋಸಿಯ ಆರೋಗ್ಯ ಸ್ಥಿತಿ ಸುಧಾರಿಸಲಿಲ್ಲ. ಆಗಾಗ ಆಸ್ಪತ್ತೆಗೆ ಹೋಗಬೇಕಾಗಿ ಬಂದ ಕಾರಣ ಆಕೆಗೆ ಆರ್ಥಿಕ ಒತ್ತಡ ಸೃಷ್ಟಿಯಾಯಿತು. ಅನಾರೋಗ್ಯದ ತೀವ್ರತೆಯನ್ನು ಗುರುತಿಸಿದ ರೋಸಿಯ ಮೇಲ್ವಿಚಾರಕರು ಹಾಗೂ ಆಕೆಯ ಚರ್ಚ್​​ನ ಫಾದರ್ ಎಡ್ವರ್ಡ್ ಅವರು, ಸ್ಪರ್ಶ್ ಆಸ್ಪತ್ರೆ ಬಂದು ಹೆಚ್ಚಿನ ಚಿಕಿತ್ಸೆ ಪಡೆಯಲು ಮುಂದಾದರು.
ಫೆಬ್ರವರಿ 2023ರಲ್ಲಿ, ರೋಸಿಯನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಆರ್​​ಆರ್ ನಗರದ ಸ್ಪರ್ಶ್ ಆಸ್ಪತ್ರೆಯ ತುರ್ತು ವಿಭಾಗಕ್ಕೆ ಕರೆ ತರಲಾಯಿತು. ಡಾ.ದೇವೇಂದ್ರ ನಾಯಕ್ ಅವರ ಮಾರ್ಗದರ್ಶನದಲ್ಲಿ, ವೈದ್ಯಕೀಯ ವೃತ್ತಿಪರರ ತಂಡವು ಆಕೆಯ ಸ್ಥಿತಿಯನ್ನು ಗಂಭೀರವಾಗದಂತೆ ನೋಡಿಕೊಂಡು ಸ್ಥಿರಗೊಳಿಸಿತು. ಅಲ್ಲದೆ ಆಕೆಗೆ ತ್ವರಿತವಾಗಿ ಚಿಕಿತ್ಸೆ ಪ್ರಾರಂಭಿಸಿದರು.. ರೋಸಿಯ ದೈಹಿಕ ಆರೋಗ್ಯ ಮತ್ತು ಸ್ಥಿತಿಯ ತೀವ್ರತೆಯನ್ನು ಅರಿತ ವೈದ್ಯರ ತಂಡ ತಕ್ಷಣದಲ್ಲೇ ಅವರಿಗೆ ಚಿಕಿತ್ಸೆಯನ್ನು ಪ್ರಾರಂಭಿಸುವ ನಿರ್ಧಾರ ಕೈಗೊಂಡರು. ಆದರೆ, ರೋಸಿಯ ಆರ್ಥಿಕ ಪರಿಸ್ಥಿತಿಯು ಚಿಕಿತ್ಸೆಗೆ ಅಡಚಣೆ ಉಂಟುಮಾಡುವ ಪರಿಸ್ಥಿತಿ ಸೃಷ್ಟಿ ಮಾಡಿತು. ರೋಗಿಯ ಆರ್ಥಿಕ ಸಾಮರ್ಥ್ಯದ ಆಧಾರದ ಮೇಲೆ ಚಿಕಿತ್ಸೆ ನಿರಾಕರಿಸಬಾರದು ಎಂಬುದು ಸ್ಪರ್ಶ್ ಆಸ್ಪತ್ರೆ ಸಮೂಹದ ಸಿದ್ಧಾಂತ. ಅದಕ್ಕೆ ಬದ್ಧವಾಗಿ, ಸ್ಪರ್ಶ್ ಫೌಂಡೇಶನ್, ಡ್ರೀಮ್ ಇಂಡಿಯಾ ನೆಟ್ವರ್ಕ್ ಸಹಯೋಗದೊಂದಿಗೆ ರೋಸಿಯ ಜೀವ ವನ್ನು ಉಳಿಸಲು ಮುಂದಾಗಲಾಯಿತು.
ಜಠರಗರುಳಿನ ಶಸ್ತ್ರಚಿಕಿತ್ಸಕ ( ) ಡಾ.ಪ್ರಣವ್ ಹೊನ್ನಾವರ ಶ್ರೀನಿವಾಸನ್ ಅವರ ನೇತೃತ್ವದಲ್ಲಿ ರೋಸಿ 8 ಗಂಟೆಗಳ ದೀರ್ಘ ಅವಧಿಯ ಚಿಕಿತ್ಸೆಗೆ ಒಳಗಾದರು. ಈ ರೀತಿಯ ದೀರ್ಘ ಅವಧಿಯ ಶಸ್ತ್ರ ಚಿಕಿತ್ಸೆಗೆ ಅರಿವಳಿಕೆಯ ( ) ನಿರ್ವಹಣೆಗೆ ನಿಖರತೆಯ ಅಗತ್ಯವಿತ್ತು. ಅಂತೆಯೇ ಅರಿವಳಿಕೆ ತಜ್ಞರಾದ ಡಾ.ಲೋಕೇಶ್ ಮತ್ತು ಡಾ.ನೂತನ್ ಅವರು ಯಶಸ್ವಿಯಾಗಿ ಆ ಪ್ರಕ್ರಿಯೆ ನಡೆಸಿ ತಡೆ ರಹಿತ ಶಸ್ತ್ರ ಚಿಕಿತ್ಸೆಗೆ ಅನುವು ಮಾಡಿಕೊಟ್ಟರು. ಶ್ವಾಸಕೋಶಶಾಸ್ತ್ರಜ್ಞ ಡಾ.ರಜನಿ ಭಟ್ ಅವರು ರೋಸಿಯ ಪುನಶ್ಚೇತನ ಕಾರ್ಯವನ್ನು ಸಮರ್ಥವಾಗಿ ಮೇಲ್ವಿಚಾರಣೆ ಮಾಡಿದರು, ಸೂಕ್ತ ಪೌಷ್ಟಿ ಕಾಂಶ, ಆಹಾರ ಯೋಜನೆಗಳು ಮತ್ತು ವ್ಯಾಯಾಮಗಳ ಮೂಲಕ ಅವರ ಶ್ವಾಸಕೋಶದ ಕಾರ್ಯವನ್ನು ಸುಧಾರಿಸುವಂತೆ ಮಾಡಿದರು.
ದೀರ್ಘ ಕಾಲದ ಚಿಕಿತ್ಸೆಗೆ ಒಳಗಾಗದ ರೋಸಿಯ ಸ್ಥಿತಿ ಸುಧಾರಿಸಿತು ಮತ್ತು ಆಕೆಯನ್ನು ವಾರ್ಡ್​ಗೆ ವರ್ಗಾಯಿಸಲಾಯಿತು. ಬ್ಯೂಟಿಷಿಯನ್ ಅಥವಾ ಹೋಟೆಲ್ ಮ್ಯಾನೇಜ್ಮೆಂಟ್ ಪದವೀಧರೆಯಾಗುವ ಆಕಾಂಕ್ಷೆ ಹೊಂದಿರುವ ರೋಸಿ ಚೇತರಿಕೆಯ ಅವಧಿಯಲ್ಲಿ ತನ್ನ ದ್ವಿತೀಯ ಪಿಯುಸಿ ಪರೀಕ್ಷೆಗಳಿಗೆ ಅಧ್ಯಯನ ಮುಂದುವರಿಸಿದಳು. ಕೆಲವು ವಾರಗಳ ನಂತರ ರೋಸಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಇದೀಘ ರೋಸಿತ ಅನುಸರಣಾ ಸಮಾಲೋಚನೆಗಳಿಗಾಗಿ ಸ್ಪರ್ಶ್ ಗೆ ನಿಯಮಿತ ವಾಗಿ ಭೇಟಿ ನೀಡುತ್ತಿದ್ದಾರೆ.
ಸ್ಪರ್ಶ್ ಫೌಂಡೇಶನ್ ನ ಕಾರ್ಯಕಾರಿ ಸಮಿತಿ ಸದಸ್ಯೆ ಅಂತರಾ ಭಾರ್ಗವ ಮಾತನಾಡಿ, “ಸ್ಪರ್ಶ್ ನಲ್ಲಿ, ಪ್ರತಿಯೊಬ್ಬ ವ್ಯಕ್ತಿಯು ತನ್ನ ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ ಗುಣಮಟ್ಟದ ಆರೋಗ್ಯ ರಕ್ಷಣೆಯನ್ನು ಸುಲಭವಾಗಿ ಪಡೆಯಬೇಕು ಎಂಬುದು ನಮ್ಮ ಆಶಯ. ನಮ್ಮ ಅಡಿಪಾಯವು ನಂಬಿಕೆ, ಭರವಸೆ ಮತ್ತು ಪ್ರೀತಿಯ ಸಂಕೇತವಾಗಿ ಬೆಳೆದು ನಿಂತಿದೆ. ಅಗತ್ಯವಿರುವವರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಸೃಷ್ಟಿಸಲು ಸಮರ್ಪಿತವಾಗಿದೆ. ಸ್ಪರ್ಶ್ ಆಸ್ಪತ್ರೆಯಲ್ಲಿ ನಮ್ಮ ವೈದ್ಯರು ಮತ್ತು ದಾದಿಯರ ತಂಡವು ಒದಗಿಸಿದ ಅಸಾಧಾರಣ ಆರೈಕೆಯಲ್ಲಿ ರೋಸಿ ಚೇತರಿಸಿಕೊಳ್ಳುತ್ತಿರುವುದನ್ನು ನೋಡಲು ನಮಗೆ ಅತ್ಯಂತ ಹೆಮ್ಮೆ ಯಾಗುತ್ತಿದೆ. ರೋಸಿಯ ಶಕ್ತಿ ಮತ್ತು ದೃಢನಿಶ್ಚಯಕ್ಕೆ ಸಾಕ್ಷಿಯಾಗಿರುವುದು ನಿಜವಾಗಿಯೂ ಸ್ಫೂರ್ತಿದಾಯಕ. ಚೇತರಿಕೆಯ ಹಾದಿಯಲ್ಲಿ ಅವಳನ್ನು ಬೆಂಬಲಿಸಲು ನಾವು ಹೆಮ್ಮೆಪಡುತ್ತೇವೆ ಎಂದು ಹೇಳಿದರು.