 - ಪೋತಂಗಲ: ಸಾಲಬಾಧೆ ತಾಳಲಾರದೇ ಬೆಂಕಿ ಹಚ್ಚಿಕೊಂಡು ರೈತ ಆತ್ಮಹತ್ಯೆ
ಚಿಂಚೋಳಿ (ಕಲಬುರಗಿ ಜಿಲ್ಲೆ):ಸೇಡಂ ವಿಧಾನಸಭೆ ಮತಕ್ಷೇತ್ರದ ಚಿಂಚೋಳಿ ತಾಲೂಕಿನ ಪೋತಂಗಲ ಗ್ರಾಮದ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಪಾಂಡಪ್ಪ ತಂದೆ ತಿಪ್ಪಣ್ಣ ಕೊರ್ವನ್ (45) ಆತ್ಮ ಹತ್ಯೆಗೆ ಶರಣಾದ ರೈತ. ರೈತ ತಾಲೂಕಿನ ನಿಡಗುಂದಾ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನಲ್ಲಿ 1 ಲಕ್ಷ (ಒಂದು ಲಕ್ಷ ) ರು ಮತ್ತು ಹೊರ ಕೈ ಸಾಲ ಪಡೆದಿದ್ದ ಎಂದು ಹೇಳಲಾ ಗುತ್ತಿದೆ. ಮಳೆಯಿಂದ ಹೊಲದಲ್ಲಿ ಬೆಳೆದ ಬೆಳೆ ಹಾಳಾಗಿದ್ದು ಬ್ಯಾಂಕಿನವರು ಪಡೆದ ಸಾಲ ಮರು ಪಾವತಿಸಲು ಬೆನ್ನು ಬಿದ್ದಿದ್ದರಿಂದ ಕೊನೆಗೆ ಸಾಲ ಕಟ್ಟಲಾಗದೇ ರೈತ ಮೈಗೆ ಬೆಂಕಿ ಹಚ್ಚಿಕೊಂಡು ಸಾವಿನಪ್ಪಿದಾನೆ ಎಂದು ಹೇಳಲಾಗುತ್ತಿದೆ.
ಮೃತ ರೈತನಿಗೆ ಪತ್ನಿ 2 ಗಂಡು, 1 ಹೆಣ್ಣು ಮಗಳಿಗೆ ಅಗಲಿದ್ದಾನೆ. ನಿಡಗುಂದಾ ಪ್ರಾಥಮಿಕ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಸೇಡಂ ತಾಲೂಕು ಆಸ್ಪತ್ರೆಗೆ ಕೊಂಡೋಯಲಾಗಿತ್ತು. ವೈದ್ಯರ ಸೂಚನೆಯ ಮೇರೆಗೆ ಕಲಬುರಗಿ ತೆರೆಳಿದಾಗ ಸಾವಿನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: : ಉತ್ಸವಕ್ಕೆ ಹೋಗಬೇಡ ಎಂದಿದ್ದಕ್ಕೆ ಬಾಲಕ ಆತ್ಮಹತ್ಯೆ