ಶ್ರೀರಾಮ್ ಪ್ರಾಪರ್ಟಿಸ್ ಲಿಮಿಟೆಡ್‌ನಿಂದ ಆಯೋಜಿಸಲಾದ `5ಕೆ ವೂಫ್-ಫ್ರೆಂಡ್ಲಿ ರನ್’
ಬೆಂಗಳೂರು:ಬೆಂಗಳೂರು ಮೆರಥಾನ್ ಜೊತೆಗೆ ಸಹಯೋಗದಲ್ಲಿ ಶ್ರೀರಾಮ್ ಪ್ರಾಪರ್ಟಿಸ್ ಲಿಮಿಟೆಡ್(ಎಸ್‌ಪಿಎಲ್) ವತಿಯಿಂದ ಅಕ್ಟೋಬರ್ 08, 2023ರಂದು ನಗರದಲ್ಲಿ ನಡೆಯಲಿರುವ ಬೆಂಗಳೂರು ಮೆರಥಾನ್ 2023ಕ್ಕೆ ಮುನ್ನ ಅಭ್ಯಾಸವಾಗಿ ಇಂದು 5ಕೆ ಟ್ರೇನಿಂಗ್ ರನ್ ಅನ್ನು ಆಯೋಜಿಸಲಾಗಿತ್ತು.
`5ಕೆ ವೂಫ್-ಫ್ರೆಂಡ್ಲಿ ರನ್’ ಕಾರ್ಯಕ್ರಮವನ್ನು ದೊಡ್ಡಬಳ್ಳಾಪುರ ಮುಖ್ಯರಸ್ತೆಯಲ್ಲಿನ ಶ್ರೀರಾಮ್ ಪ್ರಿಸ್ಟೀನ್ ಎಸ್ಟೇಟ್ಸ್ನಲ್ಲಿ ನಡೆಸಲಾಯಿತು. ಈ ಓಟದಲ್ಲಿ 350ಕ್ಕೂ ಹೆಚ್ಚಿನ ಓಟಗಾರರು ಭಾಗವಹಿಸಿದ್ದು, ಇವರಲ್ಲಿ ಸಾಕುಪ್ರಾಣಿಗಳ ಪಾಲಕರು ಸೇರಿದ್ದರು. ಎಸ್‌ಪಿಎಲ್ ಸಿಇಇಡಿ(ಕಲೆಕ್ಟಿವ್ ಎಂಪ್ಲಾಯಿ ಎಂಗೇಜ್‌ಮೆoಟ್ ಡ್ರೆöÊವ್)ನ ಭಾಗವಾಗಿ ನಡೆಸಲಾದ ಈ ಓಟದಲ್ಲಿ ಶ್ರೀರಾಮ್ ಪ್ರಾಪರ್ಟಿಸ್ ಬೆಂಗಳೂರುವಿನ ಉದ್ಯೋಗಿಗಳು ಭಾಗವಹಿಸಿದ್ದರು.
ಇವರಲ್ಲಿ ನೇರ ಉದ್ಯೋಗಿಗಳು ಮತ್ತು ಗುತ್ತಿಗೆ ಉದ್ಯೋಗಿಗಳು ಸೇರಿದ್ದರು. ವೂಫ್ ಫ್ರೆಂಡ್ಲಿ ರನ್ ಸಾಮಾನ್ಯ ರೀತಿಯ ಓಟವಾಗಿ ರುವುದಿಲ್ಲ. ಆರೋಗ್ಯ, ಒಡನಾಟ ಮತ್ತು ಸಹಾನುಭೂತಿಗಳ ಸಂಭ್ರಮಾಚರಣೆ ಇದಾಗಿತ್ತು. ಹೆಚ್ಚುವರಿಯಾಗಿ, ಆಟದ ಪ್ರದೇಶ ಮತ್ತು ಸಾಕುಪ್ರಾಣಿಗಳ ಆರೈಕೆಯೊಂದಿಗೆ ಸಾಕುಪ್ರಾಣಿ ಪ್ರೇಮಿಗಳು ಮತ್ತು ಸಾಕುಪ್ರಾಣಿ ಪಾಲಕರಿಗೆ ಅದ್ಭುತ ಅನುಭವವನ್ನು ಈ ಕಾರ್ಯಕ್ರಮ ನೀಡಿತ್ತು.
ಈ ಸಂದರ್ಭದಲ್ಲಿ ಶ್ರೀರಾಮ್ ಪ್ರಾಪರ್ಟಿಸ್ ಲಿಮಿಟೆಡ್‌ನ ಚರ‍್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಮುರಳಿ ಮಲಯಪ್ಪನ್ ಅವರು ಮಾತನಾಡಿ, “ಗುತ್ತಿಗೆ ಉದ್ಯೋಗಿಗಳು ಮತ್ತು ನೇರ ಉದ್ಯೋಗಿಗಳು ಸೇರಿದಂತೆ ನಮ್ಮ ಎಲ್ಲ ಉದ್ಯೋಗಿಗಳ ಜೊತೆಗೆ ಈ ಓಟದ ಉಪಕ್ರಮದ ಭಾಗವಾಗಿರಲು ನಾವು ರೋಮಾಂಚನಗೊoಡಿದ್ದೇವೆ. ಸಾಕುಪ್ರಾಣಿಗಳು ಮತ್ತು ಅವರ ಪಾಲಕರ ನಡುವೆ ಬಾಂಧವ್ಯ ಮತ್ತು ದೈಹಿಕ ದೃಢತೆಯನ್ನು ಸಂಭ್ರಮಿಸಲು ಆನಂದದಾಯಕ ಮಾರ್ಗ ಇದಾಗಿದೆ. ಸುಂದರ ಪ್ರಾಕೃತಿಕ ಹಿನ್ನೆಲೆಯ ನಮ್ಮ ಯೋಜನೆಯಾದ ಶ್ರೀರಾಮ್ ಪ್ರಿಸ್ಟೀನ್ ಎಸ್ಟೇಟ್‌ನಲ್ಲಿ ನಡೆಸಲಾದ ಈ ಓಟ ಬೆಂಗಳೂರು ಮೆರಥಾನ್ 2023ಕ್ಕೆ ಸಿದ್ಧತೆ ಕೈಗೊಳ್ಳುವುದರಲ್ಲಿ ಅನನ್ಯ ಮತ್ತು ತಾಜಾತನದ ಬದಲಾವಣೆ ನೀಡಿದೆ. ಸಾಕುಪ್ರಾಣಿಗಳ ಯೋಗಕ್ಷೇಮ ಕುರಿತು ಕಲಿತುಕೊಳ್ಳÄ ವುದಕ್ಕೆ ಒಂದಾಗಿ ಸೇರಲು ಸಾಕುಪ್ರಾಣಿಗಳ ಪ್ರೇಮಿಗಳಿಗೆ ಇದು ವೇದಿಕೆಯನ್ನು ಸಾದರಪಡಿಸಿತು’ಎಂದರು.
ಸಾಕುಪ್ರಾಣಿಗಳ ಆರೋಗ್ಯ ಸುಧಾರಿಸಲು ಮಾರ್ಗಭಂಜಕ ಪ್ರಯಾಣವನ್ನು ಅರ್ಬನ್ ಎನಿಮಲ್ ಕೈಗೊಂಡಿದೆ. ಇದರಲ್ಲಿ ನಾಯಿಗಳಲ್ಲಿನ ಅತ್ಯಂತ ಸಾಮಾನ್ಯ ವಂಶವಾಹಿ ರೋಗಗಳಿಗೆ ಪರೀಕ್ಷೆಯನ್ನು ಸರಳವಾದ ನೀವೆ ಮಾಡಬಹುದಾದ(ಡಿಐವೈ) ಸ್ವಾಬ್ ಟೆಸ್ಟ್ ಮೂಲಕ ನಡೆಸಬಹುದಾಗಿದೆ. ಪಾವಸಾನ ಎಂಬುದು ಅನನ್ಯ ಚಿಂತನೆಯಾಗಿದ್ದು, ಭಾರತದ ಇಂಡಿ ಡಾಗ್ಸ್ಗಳನ್ನು ಕುರಿತು ಜಾಗೃತಿ ಹರಡುವ ಕೆಲಸ ಮಾಡುತ್ತಿದೆ. ಈ ನಾಯಿಗಳು ಮನೆಯೊಂದನ್ನು ಕಂಡುಕೊಳ್ಳಲು ನೆರವಾಗುತ್ತಿದೆ.