ವಿದ್ಯುತ್ ಸ್ಪರ್ಶಿಸಿ ಯುವಕ ಸಾವು
ಚಿಕ್ಕನಾಯಕನಹಳ್ಳಿ :ವಿದ್ಯುತ್ ಸ್ಪರ್ಶವಾಗಿ ಯುವಕನೊಬ್ಬ ಮೃತಪಟ್ಟಿರುವ ಧಾರುಣ ಘಟಣೆ ತಾಲ್ಲೂಕಿನ ಸೊಂಡೆನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗೋಡೆಕೆರೆ ಗೊಲ್ಲರಹಟ್ಟಿ ಗ್ರಾಮದ ಗುರುಮೂರ್ತಿ (೩೫) ಮೃತ ದುರ್ದೈವಿ. ತೋಟಕ್ಕೆ ನೀರು ಹಾಯಿಸಲು ನೀರಿನ ಮೋಟಾರ್ ಸ್ವಿಚ್ ಹಾಕಲು ತೆರಳಿದ್ದ ವೇಳೆ ವಿದ್ಯುತ್ ಸ್ಪರ್ಶವಾಗಿದೆ ಎಂದು ತಿಳಿದುಬಂದಿದೆ. ಪತ್ನಿ ಹಾಗು ಇಬ್ಬರು ಪುಟ್ಟ ಮಕ್ಕಳು ಚಿಂತಕ್ರಾ0ತರಾಗಿದ್ದು ಜೀವನ ಹೇಗೆ ಮಾಡಲಿ ಎಂದು ಅಳಲು ತೋಡಿಕೊಂಡರು. ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದರು.
ಪಟ್ಟಣದ ಪೋಲೀಸ್ ಠಾಣೆಯಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲಾಗಿದೆ.