ಬೋರನ ಕಣಿವೆ ಜಲಾಶಯದಿಂದ ಕಾಲುವೆಗೆ ನೀರು ಬಿಡದಂತೆ ರೈತರ ಮನವಿ
ಚಿಕ್ಕನಾಯಕನಹಳ್ಳಿ :ಬೋರನಕಣಿವೆ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರನ್ನು ಕಾಲುವೆಗಳ ಮುಖಾಂತರ ಹರಿಸಲು ತೀರ್ಮಾನ ಕೈಗೊಂಡಿರುವ ತಾಲ್ಲೂಕು ಆಡಳಿತದ ನಿರ್ಧಾರ ಸರಿಯಲ್ಲ ಎಂದು ಸಾಮಾಜಿಕ ಜಾಲತಾಣ ಹುಳಿಯಾರು ಸುತ್ತಮುತ್ತ ಕಂಡಿದ್ದು-ಕೇಳಿದ್ದು-ನೋಡಿದ್ದು ಗ್ರೂಪ್ ನಲ್ಲಿ ಪ್ರಶ್ನಿಸಲಾಗುತ್ತಿದೆ.
ಈ ವರ್ಷ ಬರಗಾಲವಾಗಿರುವುದರಿಂದ ಜಲಾಶಯವನ್ನೇ ನಂಬಿ ಜನ-ಜಾನುವಾರುಗಳು ಬದುಕುತ್ತಿವೆ. ಡ್ಯಾಂನಲ್ಲಿ ನೀರಿನ ಸಂಗ್ರಹ ಕುಸಿದಿದೆ. ಈಗಿರುವ ನೀರು ಕುಡಿಯುವ ನೀರಿಗಷ್ಟೇ ಸೀಮಿತ ಮಾಡಲು ಸಾಧ್ಯ. ಹಿಂದೆ ನೀರು ಖಾಲಿಯಾಗಿ ಸಾಕಷ್ಟು ರೈತರು ತೊಂದರೆ ಅನುಭವಿಸಿದ್ದಾರೆ. ಮೇವು ಬೆಳೆ ಬೆಳೆಯಲು ಮಾತ್ರ ನೀರು ಹರಿಸಲಾಗುತ್ತದೆ ಎಂದು ಹೇಳಿದರೂ ತೆಂಗು, ಅಡಿಕೆಗೆ ನೀರು ಹಾಯಿಸಿಕೊಳ್ಳುತ್ತಾರೆ. ಅಂತಹ ಸಮಸ್ಯೆ ಬರುವ ಮುನ್ನ ಎಚ್ಚೆತ್ತುಕೊಂಡು ನೀರು ಹರಿಸುವ ನಿರ್ಧಾರವನ್ನು ಹಿಂಪಡೆದು ಜನ- ಜಾನುವಾರುಗಳಿಗೆ ಅನುಕೂಲ ಮಾಡಿಕೊಡಲು ಮನವಿ ಮಾಡಲಾಗಿದೆ.
ಮುಖ್ಯ ಕಾಲುವೆಗಳ ದುರಸ್ಥಿ ಹಾಗು ಹೂಳು ಎತ್ತುವ ಕೆಲಸ, ಜಂಗಲ್ ಕಟಿಂಗ್ ಕಾಮಾಗಾರಿ ನೆನಗುದಿಗೆ ಬಿದ್ದಿದೆ. ಈಗ ಕಾಮಾ ಗಾರಿ ಕೈಗೊಂಡರು ಅಧಿಕಾರಿ ದುರಸ್ಥಿ ನೆಪದಲ್ಲಿ ಹಣ ಪೋಲು ಮಾಡುತ್ತಾರೆ. ನೀರು ಹರಿಸಿದರೆ ಅಂತರ್ಜಲ ಮಟ್ಟ ಕುಸಿತ ಗೊಂಡು ರೈತರ ಕುತ್ತಿಗೆ ಹಿಸುಕಿದಂತಾಗುತ್ತದೆ. ಪ್ರಭಾವಿಗಳ ಹಿತ ಕಾಯಲು ನೀರು ಹರಿಸುವ ತೀರ್ಮಾನಕ್ಕೆ ಬರಲಾಗಿದೆ ಎಂದು ಕುಟುಕಲಾಗಿದೆ. ಜನವರಿ ಕೊನೆಯ ವಾರದಿಂದ ಡ್ಯಾಂನಿAದ ನೀರು ಹರಿಸಲು ನೀರಾವರಿ ಸಲಹಾ ಸಮಿತಿ ತೀರ್ಮಾನಿಸಿರುವು ದನ್ನು ಇಲ್ಲಿ ಸ್ಮರಿಸಬಹುದು.
ಡ್ಯಾಂ ನೀರು ಮಾರಾಟ ?ಜಲಾಶಯದ ನೀರಿಗೆ ಅಧಿಕಾರಿಗಳು ಕನ್ನ ಹಾಕುತ್ತಿದ್ದಾರೆ. ನೀರನ್ನು ಅಕ್ರಮವಾಗಿ ಹರಿಸಿ ಪೋಲು ಮಾಡುವ ಹುನ್ನಾರ ನಡೆದಿದೆ. ಡ್ಯಾಂ ನೀರನ್ನು ಹರಿಸಲು ಅಧಿಕಾರಿಗಳೇ ಶಾಮೀಲಾಗಿದ್ದಾರೆ ಎಂಬ ಆರೋಪಗಳನ್ನು ಗುರುತಿಸಲಾಗಿದೆ. ಈ ರೀತಿ ಆರೋಪ ಕೇಳಿ ಬರುವುದಕ್ಕೂ ಕಾರಣವಿದೆ. ಸುಳ್ಳು ಲೆಕ್ಕಾಚಾರ ಸೃಷ್ಟಿಸಿ ಕಾಲುವೆಗಳಿಗೆ ನೀರು ಬಿಟ್ಟು ಡ್ಯಾಂ ಖಾಲಿ ಮಾಡಿದ ನಂತರ ಡ್ಯಾಂನಿ0ದ ನೂರಾರು ಲೋಡ್ ಮಣ್ಣು ಹಾಗು ಮರಳನ್ನು ಅಕ್ರಮವಾಗಿ ಸಾಗಿಸಿ ಪಟ್ಟಭದ್ರರು ಲಾಭ ಮಾಡುತ್ತಾರೆ. ಇದಕ್ಕೆ ಅಧಿಕಾರಿಗಳು ನೆರವು ನೀಡುತ್ತಿದ್ದಾರೆ ಎಂಬ ಗುಮಾನಿ ವ್ಯಕ್ತಪಡಿಸಲಾಗಿದೆ.