ದೇಗುಲವು ಹಾಗಲವಾಡಿ ಸಂಸ್ಥಾನದ ಪಾಳೇಗಾರರ ಕಾಲದಲ್ಲಿ ಸ್ಥಾಪಿತವಾದದ್ದು
ಚಿಕ್ಕನಾಯಕನಹಳ್ಳಿ:ಪುರಾತನವಾದ ಮಹಂತಿಮಠದ ನಂದೀಶ್ವರನ ದೇವಾಲಯವನ್ನು ನೂತನವಾಗಿ ನಿರ್ಮಿಸಲಾಗುವುದು ಎಂದು ದೊಡ್ಡಗುಣಿ ಮಠದ ರೇವಣಸಿದ್ಧೇಶ್ವರ ಶಿವಾಚಾರ್ಯಸ್ವಾಮೀಜಿ ಹೇಳಿದರು.
ಪಟ್ಟಣದ ಧರ್ಮವರ ಬೀದಿಯಲ್ಲಿರುವ ಮಂಹತಿಮಠದ ನಂದೀಶ್ವರನ ದೇಗುಲಕ್ಕೆ ಬೇಟಿ ನೀಡಿ ಮಾತನಾಡಿದರು. ವೀರಶೈವ ಮಠಗಳ ಪೈಕಿ ಮಹಂತಿ ಮಠವು ಒಂದಾಗಿದ್ದು ದೇಗುಲವು ಹಾಗಲವಾಡಿ ಸಂಸ್ಥಾನದ ಪಾಳೇಗಾರರ ಕಾಲದಲ್ಲಿ  ಸ್ಥಾಪಿತವಾದುದ್ದು ಎಂದು ದೊಡ್ಡಗುಣಿ ಹಿರೇಮಠದ ಹಿರಿಯ ಲಿಂಗೈಕ್ಯ ಶ್ರೀಗಳು ಹೇಳುತ್ತಿದ್ದರು.