ಭವಿಷ್ಯದ ಮಾಲಿನ್ಯಮುಕ್ತ ಸಾರಿಗೆ ವ್ಯವಸ್ಥೆಯತ್ತ ಟಾಟಾ ಮೋಟರ್ಸ್ ದಾಪುಗಾಲು
ಬೆಂಗಳೂರು:ಭಾರತದಲ್ಲಿ ಹೆಚ್ಚುತ್ತಿರುವ ನಗರೀಕರಣ ಮತ್ತು ಸುಸ್ಥಿರ ಸಾರಿಗೆ ವ್ಯವಸ್ಥೆಗೆ ಆದ್ಯತೆ ಪ್ರಮಾಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಶುದ್ಧ ಸಾರಿಗೆ ಆಯ್ಕೆಗಳು ನಿರ್ಣಾಯಕವಾಗಿ ಪರಿಣಮಿಸಿವೆ. ದೇಶದಲ್ಲಿ ಎಲೆಕ್ಟ್ರಿಕ್ ಮತ್ತು ಹೈಡ್ರೋಜನ್ ಆಧಾರಿತ ವಾಹನಗಳತ್ತ ಹೆಚ್ಚು ಗಮನಹರಿಸು ತ್ತಿರುವುದರಿಂದ ಮಾಲಿನ್ಯವನ್ನು ಕಡಿಮೆ ಮಾಡುವ ಮಧ್ಯಂತರ ಪರಿಹಾರದ ಅಗತ್ಯತೆ ಇದೆ. ತನ್ನ ಪರಿಣತಿ ಮತ್ತು ನಾವೀನ್ಯತೆಯನ್ನು ಬಳಸಿಕೊಂಡು ಟಾಟಾ ಮೋಟರ್ಸ್ ಭಾರತದಲ್ಲಿ ಸುಸ್ಥಿರ ಸಾರಿಗೆ ಪರಿವರ್ತನೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
ನೀತಿ ಆಯೋಗದ ವರದಿಯ ಅಂದಾಜಿನ ಪ್ರಕಾರ ಭಾರತದಲ್ಲಿ 2050 ರ ವೇಳೆಗೆ ಟ್ರಕ್ ಗಳ ಸಂಖ್ಯೆಯಲ್ಲಿ ನಾಲ್ಕುಪಟ್ಟು ಹೆಚ್ಚಳ ಕಂಡುಬರಲಿದೆ. ಈ ಹಿನ್ನೆಲೆಯಲ್ಲಿ ನೈಸರ್ಗಿಕ ಅನಿಲ ಆಧಾರಿತ ಇಂಧನಕ್ಕೆ ಪರಿವರ್ತನೆಯಾಗುವ ಅಗತ್ಯತೆಯನ್ನು ವರದಿ ಹೇಳಿದೆ. ಈ ಪರಿವರ್ತನೆಯು ಪರಿಸರ ರಕ್ಷಣೆ, ಸಾರ್ವಜನಿಕ ಆರೋಗ್ಯ ಮತ್ತು ವಾಣಿಜ್ಯ ವಾಹನಗಳ ಉದ್ಯಮದಲ್ಲಿ ಆರ್ಥಿಕ ಸುಸ್ಥಿರತೆಯಲ್ಲಿ ನಿರ್ಣಾಯಕ ಪಾತ್ರವಹಿಸಲಿದೆ. ನಾವೀನ್ಯತೆ ಮತ್ತು ಸುಸ್ಥಿರ ಸಾರಿಗೆ ಪರಿಹಾರಗಳಿಗೆ ಮೀಸಲಾಗಿರುವ ಟಾಟಾ ಮೋಟರ್ಸ್ ಹೆಚ್ಚು ಪರಿಸರ ಸ್ನೇಹಿ ಮತ್ತು ಪರಿಣಾಮಕಾರಿ ಸಾರಿಗೆ ವ್ಯವಸ್ಥೆಯ ಬಗ್ಗೆ ಭಾರತ ಸರ್ಕಾರ ಇಟ್ಟುಕೊಂಡಿರುವ ನಿರೀಕ್ಷೆಯಂತೆ ವಾಣಿಜ್ಯ ವಾಹನ ವಲಯದಲ್ಲಿ  ಅಳವಡಿಕೆಯನ್ನು ಉತ್ತೇಜಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಿದೆ.
2030 ರ ವೇಳೆಗೆ ದೇಶದಲ್ಲಿ 27,000 ಕ್ಕೂ ಅಧಿಕ  ಕೇಂದ್ರಗಳನ್ನು ಕಾರ್ಯಾಚರಣೆ ಮಾಡುವ ಯೋಜನೆಯನ್ನು ಹೊಂದಿದೆ. ಗ್ಯಾಸ್ ಗ್ರಿಡ್, ಹೆಚ್ಚುವರಿ  ಟರ್ಮಿನಲ್ ಗಳು ಮತ್ತು ಬಯೋ-ಸಿಎನ್ ಜಿ ಕಾರ್ಯಕ್ರಮಕ್ಕಾಗಿ  ಯಂತಹ ರಾಷ್ಟ್ರೀಯ ಉಪಕ್ರಮಗಳೊಂದಿಗೆ ವಿಸ್ತಾರವಾಗಿ ನೈಸರ್ಗಿಕ ಅನಿಲ ಲಭ್ಯವಾಗುವಂತೆ ಮಾಡುವ ಯೋಜನೆಗಳನ್ನು ರೂಪಿಸಲಾಗಿದೆ.
ಟಾಟಾ ಮೋಟರ್ಸ್ ನ ಟ್ರಕ್ಸ್ ವಿಭಾಗದ ಉಪಾಧ್ಯಕ್ಷ ಮತ್ತು ಬ್ಯುಸಿನೆಸ್ ಹೆಡ್ ರಾಜೇಶ್ ಕೌಲ್ ಅವರು ಮಾತನಾಡಿ, “ಟಾಟಾ ಮೋಟರ್ಸ್ ನಲ್ಲಿ ನಾವು ಸುಸ್ಥಿರ ಇಂಧನಗಳ ಪರಿವರ್ತನೆಯಲ್ಲಿ ಮುಂಚೂಣಿಯಲ್ಲಿದ್ದೇವೆ. ನಮ್ಮ ವಿಸ್ತಾರವಾದ  ಚಾಲಿತ ವಾಣಿಜ್ಯ ವಾಹನಗಳು ಮತ್ತು 2045 ರ ವೇಳೆಗೆ ನಿವ್ವಳ ಶೂನ್ಯ ಮಾಲಿನ್ಯದ ಗುರಿ ತಲುಪುವ ನಿಟ್ಟಿನಲ್ಲಿ ಹೊಂದಿರುವ ನಮ್ಮ ಬದ್ಧತೆಯಿಂದ ಸುಸ್ಥಿರ ಲಾಜಿಸ್ಟಿಕ್ ಅನ್ನು ಹೆಚ್ಚಳ ಮಾಡುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದೇವೆ. ಈ ದಿಸೆಯಲ್ಲಿ ನಾವು ಒಟ್ಟಾಗಿ ಹಸಿರು ಮತ್ತು ಹೆಚ್ಚು ಪರಿಣಾಮಕಾರಿಯಾದ ಭವಿಷ್ಯದತ್ತ ದಾಪುಗಾಲು ಇಟ್ಟಿದ್ದೇವೆ’’ ಎಂದರು.