ಬೆಂಗಳೂರು ಸ್ಲೀಪರ್‌ ಕೋಚ್‌ ಬಸ್‌ ಓಡಿಸುವಂತೆ ಆಗ್ರಹಿಸಿ ಡಿಟಿಒ ಡಿ.ಎ.ಬಿರಾದಾರರಿಗೆ ಮನವಿ
ಇಂಡಿ:ಜಿಲ್ಲಾ ಕೇಂದ್ರ ರಚನೆಯ ಮುಂಚೂಣಿಯಲ್ಲಿರುವ ಇಂಡಿ ಬಸ್‌ ನಿಲ್ದಾಣದಿಂದ ಪ್ರತಿ ನಿತ್ಯ ಬೆಂಗಳೂರಿಗೆ ಸ್ಲೀಪರ್‌ ಕೋಚ್‌ ಬಸ್‌ ಓಡಿಸಬೇಕು. ಶಾಲೆ,ಕಾಲೇಜಿಗೆ ಹೋಗುವ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಿರಗಿ ಗ್ರಾಮಕ್ಕೆ ಪ್ರತಿ ನಿತ್ಯ ಬೆಳಿಗ್ಗೆ ೯ ಗಂಟೆಗೆ ಹಾಗೂ ಸಾಯಂಕಾಲ ೪ ಗಂಟೆಗೆ ಬಸ್‌ ಓಡಿಸಬೇಕು ಹಾಗೂ ತಾಲೂಕಿನ ಗ್ರಾಮೀಣ ಪ್ರದೇಶಗಳಿ ಇನ್ನೂ ಹೆಚ್ಚಿನ ಬಸ್ ಸೌಕರ‍್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಕರವೇ ತಾಲೂಕು ಅಧ್ಯಕ್ಷ ಬಾಳು ಮುಳಜಿ ಹಾಗೂ ದಲಿತ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸಾಲೋಟಗಿ ನೇತ್ರತ್ವದಲ್ಲಿ ಕೆಕೆಆರ್‌ಟಿಸಿ ವಿಜಯಪುರ ಡಿಟಿಒ ಡಿ.ಎ.ಬಿರಾದಾರ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಈ ಸಂರ‍್ಭದಲ್ಲಿ ಮಾತನಾಡಿದ ಕರವೇ ತಾಲೂಕು ಅಧ್ಯಕ್ಷ ಬಾಳು ಮುಳಜಿ ಅವರು, ಇಂಡಿ ಪಟ್ಟಣದಿಂದ ಪ್ರತಿ ನಿತ್ಯ ಸುಮಾರು ೫ ರಿಂದ ೬ ಖಾಸಗಿ ಬಸ್‌ಗಳು ಬೆಂಗಳೂರಿಗೆ ಓಡಾಡುತ್ತವೆ. ಇವುಗಳಿಗೆ ಯಾವುದೇ ಆರ್ಥಿಕ ಹಾನಿ ಆಗಿರುವುದಿಲ್ಲ. ಕೆಕೆಆರ್‌ಟಿಸಿ ಸಂಸ್ಥೆಯಿಂದಲೇ ಬೆಂಗಳೂರಿಗೆ ಸ್ಲೀಪರ್‌ ಕೋಚ್‌ ಬಸ್‌ ಓಡಿಸಿದರೆ,ಪ್ರಯಾಣಿಕರಿಗೆ ಅನುಕೂಲವಾಗುವುದಿಲ್ಲ. ಬದ್ರತೆಯೂ ದೊರೆತಂತಾಗುತ್ತವೆ ಎಂದು ಹೇಳಿದ ಅವರು, ಮಿರಗಿ ಗ್ರಾಮ ತಾಲೂಕಿನ ಕೊನೆಯ ಹಳ್ಳಿಯಾಗಿದ್ದು, ಮಿರಗಿ ಗ್ರಾಮದಲ್ಲಿ ಪ್ರೌಢ ಶಾಲೆ,ರ‍್ಕಾರಿ ಪ್ರಾಥಮಿಕ ಶಾಲೆಗಳು ಇವೆ. ಈ ಶಾಲೆಗಳಿಗೆ ಪ್ರತಿನಿತ್ಯ ಸುಮಾರು ೨೦ ರಿಂದ ೨೫ ಜನ ಶಿಕ್ಷಕರು ಹಾಗೂ ಹಲವು ಜನ ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳಿಗೆ ಹೋಗುತ್ತಾರೆ. ಬೆಳಿಗ್ಗೆ ಶಾಲೆ ಅವಧಿಯಲ್ಲಿ ಬಸ್ಸಿನ ಅನುಕೂಲ ಇಲ್ಲದಕ್ಕಾಗಿ ಟಂಟಂ ಬಾಡಿಗೆ ಮಾಡಿಕೊಂಡು ನಿತ್ಯ ಹೋಗುತ್ತಿದ್ದಾರೆ. ಹೀಗಾಗಿ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪ್ರತಿನಿತ್ಯ ಬೆಳಿಗ್ಗೆ ೯ ಗಂಟೆ, ಸಾಯಂಕಾಲ ೪ ಗಂಟೆಗೆ ಇಂಡಿಯಿಂದ ಮಿರಗಿಗೆ ಬಸ್‌ ಓಡಿಸಬೇಕು ಎಂದು ಅವರು ಮನವಿ ಮಾಡಿಕೊಂಡರು.
ಮನವಿಗೆ ಸ್ಪಂದಿಸಿದ ಡಿಟಿಒ ಡಿ.ಎ.ಬಿರಾದಾರ ಹಾಗೂ ಘಟಕ ವ್ಯವಸ್ಥಾಪಕ ಬಿರಾದಾರ ಅವರು ಎರಡ್ಮೂರು ದಿನದಲ್ಲಿ ಮಿರಗಿ ಗ್ರಾಮಕ್ಕೆ ಬೆಳಿಗ್ಗೆ ೯ ಗಂಟೆಗೆ ಬಸ್ಸಿನ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಬೆಂಗಳೂರಿಗೆ ಸ್ಲೀಪರ್‌ ಕೋಚ್ ಬಸ್‌ ಬಿಡಲು ಈಗಾಗಲೆ ತಯಾರಿ ನಡೆಸಿದ್ದೇವೆ. ಒಂದು ವಾರ ದೊಳಗಾಗಿ ಬೆಂಗಳೂರಿಗೆ ಇಂಡಿಯಿಂದ ಸ್ಲೀಪರ್‌ ಕೋಚ್‌ ಬಸ್ ಓಡಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಕರವೇ ಮುಖಂಡರಾದ ಬಾಳು ಮುಳಜಿ, ರ‍್ಮರಾಜ ಸಾಲೋಟಗಿ, ಖಾಜು ಸಿಂಗೆಗೋಳ, ಮಹೇಶ ಹೂಗಾರ, ಶಿವಪ್ಪ ಐರೋಡಗಿ, ಚನ್ನಬಸಪ್ಪ ಏವೂರ, ಸಿದ್ದು ಖೇಡ ಮೊದಲಾದವರು ಈ ಸಂರ‍್ಭದಲ್ಲಿ ಇದ್ದರು.