: ಶೇ 7.50ರಷ್ಟು ಬಡ್ಡಿ ದರದ 9 ತಿಂಗಳ ಸ್ಥಿರ ಠೇವಣಿ ಪರಿಚಯಿಸಿದ ಉಜ್ಜೀವನ್‌
• ಈ ಪರಿಷ್ಕೃತ ಅವಧಿಯೊಂದಿಗೆ, 9 ತಿಂಗಳ ಹೂಡಿಕೆ ಮೇಲಿನ ಲಾಭವು (ಬಡ್ಡಿದರ- ಆರ್‌ಒಐ) ಈ ಹಿಂದಿನ ಶೇ 7.00 ರಿಂದ ಶೇ 7.50 ಕ್ಕೆ ಹೆಚ್ಚಳ• ನಿಯಮಿತ ಮತ್ತು ಹಿರಿಯ ನಾಗರಿಕರಿಗೆ 12 ತಿಂಗಳ ಅವಧಿಯ ಸ್ಥಿರ ಠೇವಣಿಗಳಿಗೆ ಕ್ರಮವಾಗಿ ಶೇ 8.25 ಮತ್ತು ಶೇ 8.75ರಷ್ಟು ಗರಿಷ್ಠ ಬಡ್ಡಿ ದರ ಮುಂದುವರಿಕೆ• ಪ್ಲ್ಯಾಟಿನಾ ಎಫ್‌ಡಿ-ಗೆ (ಸ್ಥಿರ ಠೇವಣಿ) ಶೇ 0.20ರಷ್ಟು ಹೆಚ್ಚುವರಿ ಬಡ್ಡಿದರ
ಬೆಂಗಳೂರು:ದೇಶದ ಪ್ರಮುಖ ಸಣ್ಣ ಹಣಕಾಸು ಬ್ಯಾಂಕ್ ಆಗಿರುವ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ (ಉಜ್ಜಿವನ್‌), ಸ್ಥಿರ ಠೇವಣಿ ವಿಭಾಗದಲ್ಲಿ ಹೊಸದಾಗಿ ಶೇ 7.50 ಬಡ್ಡಿದರದ 9 ತಿಂಗಳ ಅವಧಿ ಪರಿಚಯಿಸಿದೆ. ನಿಯಮಿತ ಸ್ಥಿರ ಠೇವಣಿಗಳಿಗೆ ಹಿರಿಯ ನಾಗರಿಕರು ಶೇ 0.50ರಷ್ಟು ಹೆಚ್ಚುವರಿ ಬಡ್ಡಿ ಪಡೆಯುವುದನ್ನು ಮುಂದುವರೆಸಿದೆ.
ಸಾಮಾನ್ಯ ಗ್ರಾಹಕರಿಗೆ 12 ತಿಂಗಳ ಅವಧಿಯ ಸ್ಥಿರ ಠೇವಣಿಗೆ ಶೇ 8.25 ರಷ್ಟು ಹೆಚ್ಚಿನ ಬಡ್ಡಿದರವನ್ನು ನೀಡುವುದನ್ನು ಉಜ್ಜೀವನ್‌ ಮುಂದುವರೆಸಿದೆ. ಇದೇ ಅವಧಿಯ ಸ್ಥಿರ ಠೇವಣಿಗೆ ಹಿರಿಯ ನಾಗರಿಕರು ಶೇ 8.75% ರಷ್ಟು ಆಕರ್ಷಕ ಬಡ್ಡಿದರದ ಪ್ರಯೋಜನ ಪಡೆಯಲಿದ್ದಾರೆ.
ವ್ಯಕ್ತಿಗಳು ಮತ್ತು ವೈಯಕ್ತಿಕವಲ್ಲದ ಗ್ರಾಹಕರು ಮತ್ತು ಅನಿವಾಸಿ ಭಾರತೀಯ (ಎನ್‌ಆರ್‌) ಗ್ರಾಹಕರಿಗೆ ಲಭ್ಯವಿರುವ ಪ್ಲ್ಯಾಟಿನಾ ಠೇವಣಿಗಳು ಶೇ 0.20ರಷ್ಟು ಹೆಚ್ಚುವರಿ ಬಡ್ಡಿ ದರ ಗಳಿಸುವುದನ್ನು ಮುಂದುವರಿಸಲಿವೆ.
ಉಜ್ಜೀವನ್ ಎಸ್‌ಎಫ್‌ಬಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜೀವ್ ನೌಟಿಯಾಲ್ ಅವರು ಪ್ರತಿಕ್ರಿಯಿಸಿ, “ಅಲ್ಪಾವಧಿಯ ಸ್ಥಿರ ಠೇವಣಿಗಳಿಗೆ ಹೆಚ್ಚಿನ ಬಡ್ಡಿ ದರ ಬಯಸುವ ನಮ್ಮ ಗ್ರಾಹಕರ ಪ್ರಯೋಜನಕ್ಕಾಗಿ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಪರಿಷ್ಕರಿಸಲು ನಾವು ಸಂತೋಷ ಪಡುತ್ತೇವೆ. ಸ್ಥಿರ ಠೇವಣಿಗಳ (ಎಫ್‌ಡಿ) ಮೇಲಿನ ಇತ್ತೀಚಿನ ಈ ಬಡ್ಡಿ ದರ ಹೆಚ್ಚಳವು, ಸ್ಥಿರ ಠೇವಣಿಗಳ ಮೇಲೆ ಗರಿಷ್ಠ ಬಡ್ಡಿ ದರ ನೀಡುವ ಬ್ಯಾಂಕ್‌ಗಳ ಸಾಲಿನಲ್ಲಿ