ಮಕ್ಕಳಲ್ಲಿ ಆರಂಭಿಕ ಕ್ಯಾನ್ಸರ್ ರೋಗ ಪತ್ತೆಯಿಂದ ಉತ್ತಮ ಫಲಿತಾಂಶ ಸಾಧ್ಯ: ಕ್ಯಾನ್ಸರ್ ತಜ್ಞರ ಅಭಿಮತ
• ಭಾರತದಲ್ಲಿ ಪ್ರತಿ ರ‍್ಷ ೫೦,೦೦೦ ಕ್ಕೂ ಅಧಿಕ ಮಕ್ಕಳು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ
ಬೆಂಗಳೂರು, ಫೆಬ್ರವರಿ ೧೪, ೨೦೨೪:ಭಾರತದಲ್ಲಿ ಮಾರಕ ಕ್ಯಾನ್ಸರ್ ರೋಗವು ಪ್ರತಿ ಒಂದು ಮಿಲಿಯನ್ ಮಕ್ಕಳಲ್ಲಿ ೩೮-೧೨೪ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಪ್ರತಿ ರ‍್ಷ ಸುಮಾರು ೫೦,೦೦೦ ಮಕ್ಕಳು ರೋಗದಿಂದ ಬಳಲುತ್ತಿದ್ದಾರೆ. ಇಂತಹ ಮಕ್ಕಳ ಸಂಖ್ಯೆಯು ಕಳೆದ ಎರಡು-ಮೂರು ದಶಕಗಳಲ್ಲಿ ಹೆಚ್ಚಾಗುತ್ತಿದೆ ಎಂದು ಬೆಂಗಳೂರಿನ ಸಂಪ್ರದ ಆಸ್ಪತ್ರೆಯ ತಜ್ಞ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಸಂಪ್ರದ ಆಸ್ಪತ್ರೆಯ ಪೀಡಿಯಾಟ್ರಿಕ್ಸ್ ಆಂಕಾಲಾಜಿ ಅಂಡ್ ಹೆಮಟಾಲಾಜಿಯ ಕನ್ಸಲ್ಟೆಂಟ್ ಡಾ.ಇಂತೆಝಾರ್ ಮೇಹ್ದಿ ಅವರು ಈ ಮಾರಕ ರೋಗದ ಬಗ್ಗೆ ಮಾತನಾಡಿ, “ಮಕ್ಕಳಲ್ಲಿ ಉಂಟಾಗುತ್ತಿರುವ ಕ್ಯಾನ್ಸರ್ ಪ್ರಕರಗಳಿಗೆ ಮೂಲ ಅಥವಾ ಕಾರಣವೇನೆಂಬುದು ಇನ್ನೂ ಪತ್ತೆ ಯಾಗಿಲ್ಲ. ಕೆಲವು ಪ್ರಕರಣಗಳಲ್ಲಿ ಅನುವಂಶೀಯತೆ, ಪರಿಸರ ಮತ್ತು ಸೋಂಕುಗಳು ಹರಡಿರುವುದು ಈ ರೋಗಕ್ಕೆ ಕಾರಣವಾಗಿವೆ. ಒಂದು ಖುಷಿಯ ವಿಚಾರವೇನೆಂದರೆ, ವಯಸ್ಕ ಕ್ಯಾನ್ಸರ್ ರೋಗಿಗಳಿಗಿಂತ ರೋಗ ಪೀಡಿತ ಮಕ್ಕಳಲ್ಲಿ ಗುಣಮುಖರಾಗುವ ಪ್ರಮಾಣ ಹೆಚ್ಚಾಗಿದೆ. ಏಕೆಂದರೆ ರೋಗದ ಲಕ್ಷಣ ವ್ಯತ್ಯಾಸವಿರುತ್ತದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಶೇ.೮೦-೮೫ ರಷ್ಟು ಮಕ್ಕಳು ಈ ರೋಗದಿಂದ ಗುಣಮುಖರಾಗುತ್ತಿದ್ದಾರೆ. ಭಾರತದಲ್ಲಿ ಕಳೆದ ಕೆಲವು ದಶಕಗಳಿಂದ ಗುಣಮುಖರಾಗುವ ಪ್ರಮಾಣ ಸುಧಾರಣೆಯಾಗುತ್ತಿದೆ. ಇನ್ನೂ ಉತ್ತಮ ಫಲಿತಾಂಶ ಬರಬೇಕೆಂದರೆ, ರೋಗವನ್ನು ಆರಂಭ ದಲ್ಲಿಯೇ ಪತ್ತೆ ಮಾಡಿ, ಸುಲಭ ಮರ‍್ಗದಲ್ಲಿ ಚಿಕಿತ್ಸೆಯನ್ನು ಕೊಡಿಸಬೇಕಾಗುತ್ತದೆ’’ ಎಂದು ಸಲಹೆ ನೀಡಿದರು.
ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್ ರೋಗದ ಗಂಭೀರತೆ ಮತ್ತು ಲಕ್ಷಣಗಳ ಬಗ್ಗೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಲಕ್ಷಣಗಳು ಗೊತ್ತಾದ ತಕ್ಷಣ ಸೂಕ್ತ ಚಿಕಿತ್ಸೆ ಆರಂಭಿಸುವುದನ್ನು ಮರೆಯಬಾರದು ಎಂಬ ಸಲಹೆ ನೀಡಿದರು.
“ಸಾಮಾನ್ಯವಾಗಿ ಬಾಲ್ಯದಲ್ಲಿ ಕಾಣಿಸಿಕೊಳ್ಳುವ ಕ್ಯಾನ್ರ‍್ನ ಚಿಹ್ನೆಗಳು ಮತ್ತು ಲಕ್ಷಣಗಳು ನರ‍್ದಿಷ್ಟವಲ್ಲದ ಮತ್ತು ಸೂಕ್ಷ್ಮವಾಗಿರುತ್ತವೆ. ಅನುಮಾನದ ಹೆಚ್ಚಿನ ಸೂಚ್ಯಂಕವು ಆರಂಭಿಕ ರೋಗನರ‍್ಣಯದಲ್ಲಿ ಪ್ರಮುಖವಾಗಿರುತ್ತದೆ. ಎಡೆಬಿಡದೇ ಬರುವ ಜ್ವರ, ತೂಕದಲ್ಲಿ ನಷ್ಟ ಉಂಟಾಗುವುದು, ರಾತ್ರಿಯಲ್ಲಿ ಬೆವರುವುದು, ಕುತ್ತಿಗೆ, ರ‍್ಮ್ ಪಿಟ್ ಅಥವಾ ತೊಡೆಸಂದುಗಳಲ್ಲಿ ಗಂಟುಗಳು ಕಾಣಿಸಿಕೊಳ್ಳುವುದು, ತಲೆನೋವು, ವಾಂತಿ ಮತ್ತು ಅನಾ ರೋಗ್ಯಕ್ಕೆ ತುತ್ತಾಗುವುದು, ಊತ ಮತ್ತು ರಕ್ತಸ್ರಾವ ಆಗುವುದರ ಬಗ್ಗೆ ಪೋಷಕರು ಗಮನಹರಿಸಬೇಕು. ಈ ರೋಗಲಕ್ಷಣಗಳು ಮಕ್ಕಳಲ್ಲಿ ಕ್ಯಾನ್ಸರ್ ನ ಆರಂಭಿಕ ಎಚ್ಚರಿಕೆಯ ಸೂಚನೆಯಾಗಿರಬಹುದು’’ ಎಂದು ಅವರು ಹೇಳಿದರು.
ಮಕ್ಕಳಲ್ಲಿ ಲುಕೆಮಿಯಾ, ಲಿಂಫೋಮಾಗಳು ಮತ್ತು ಮೆದುಳಿನಲ್ಲಿ ಗೆಡ್ಡೆಗಳು ಕಂಡು ಬರುವ ಕ್ಯಾನ್ಸರ್ ಗಳಾಗಿವೆ. ವಿಲ್ಮ್ಸ್ಟ್ಯೂಮರ್, ನ್ಯೂರೋ ಬ್ಲಾಸ್ಟೊಮಾ, ಬೋನ್ ಟ್ಯೂಮರ್, ಸಾಫ್ಟ್ ಟಿಶ್ಯೂ ಟ್ಯೂಮರ್ ಮತ್ತು ಲಿವರ್, ಐ ಟ್ಯೂಮರ್ ಗಳು ಇತರೆ ಸಾಮಾನ್ಯ ಕ್ಯಾನ್ಸರ್ ಗಳಾಗಿವೆ.
ಬೆಂಗಳೂರಿನ ಸಂಪ್ರದ ಆಸ್ಪತ್ರೆಯ ಪೀಡಿಯಾಟ್ರಿಕ್ಸ್ ಆಂಕಾಲಾಜಿ ಕನ್ಸಲ್ಟೆಂಟ್ ಡಾ.ಸುಮಾ ಅವರು ಮಾತನಾಡಿ, “ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿ ಸೇವೆಗಳ ಲಭ್ಯತೆಯ ನಡುವೆ ವ್ಯಾಪಕ ಕಾಳಜಿಯ ಅಂತರವಿದೆ. ಈ ಅಂತರವನ್ನು ನೀಗಿಸಬೇಕಾಗಿದೆ. ಮಕ್ಕಳ ಕ್ಯಾನ್ಸರ್ ಚಿಕಿತ್ಸೆಗಾಗಿ ರ‍್ಕಾರದ ಯೋಜನೆಗಳು ಅತ್ಯಗತ್ಯವಾಗಿವೆ. ರ‍್ಕಾರ ಮತ್ತು ಖಾಸಗಿ ವಲಯದ ನಡುವೆ ಈ ನಿಟ್ಟಿನಲ್ಲಿ ಸಹಯೋಗ ರ‍್ಪಡಬೇಕು ಮತ್ತು ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಏಜೆನ್ಸಿಗಳ ನಡುವಿನ ಉತ್ತಮ ಸಹಯೋಗವು ದೇಶದಲ್ಲಿ ಕ್ಯಾನ್ಸರ್ ಹೊಂದಿರುವ ಮಕ್ಕಳ ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ಬಹಳ ದೂರ ಹೋಗುತ್ತದೆ. ಪರೋಪಕಾರಿ ಎನ್ ಜಿಒಗಳು ಪ್ರತಿ ರ‍್ಷ ಸಾವಿರ ಮಕ್ಕಳಿಗೆ ಚಿಕಿತ್ಸೆ ಕೊಡಿಸುವಲ್ಲಿ ಬಹು ಪ್ರಮುಖವಾದ ಪಾತ್ರ ನರ‍್ವಹಿಸುತ್ತಿವೆ’’ ಎಂದರು.