ದೆಹಲಿ ಕ್ಯಾಪಿಟಲ್ಸ್ ಮಹಿಳಾ ಕ್ರಿಕೆಟ್ ತಂಡಕ್ಕೆ ಡಿಪಿ ವರ್ಲ್ಡ್ ಹೊಸ ಟೈಟಲ್ ಪಾಲುದಾರ
• ದೆಹಲಿ ಕ್ಯಾಪಿಟಲ್ಸ್ ತಂಡದ ಪ್ರಾಯೋಜಕ ಸಂಸ್ಥೆ ಡಿಪಿ ವರ್ಲ್ಡ್ ನಿಂದ ಮತ್ತೊಂದು ದಿಟ್ಟ ಪಾಲುದಾರಿಕೆ ಘೋಷಣೆ
ಬೆಂಗಳೂರು:ಡಿಪಿ ವರ್ಲ್ಡ್ ಮತ್ತು ದೆಹಲಿ ಕ್ಯಾಪಿಟಲ್ ಇಂದು ಹೊಸ ದೀರ್ಘಾವಧಿಯ ಪಾಲುದಾರಿಕೆಯನ್ನು ಘೋಷಿಸಿವೆ. ಸ್ಮಾರ್ಟ್ ಎಂಡ್-ಟು-ಎಂಡ್ ಸಪ್ಲೈ ಚೇನ್ ಪರಿಹಾರಗಳನ್ನು ಪೂರೈಕೆ ಮಾಡುವಲ್ಲಿ ಮುಂಚೂಣಿಯಲ್ಲಿರುವ ಡಿಪಿ ವರ್ಲ್ಡ್ ಇದೀಗ 2024 ರಿಂದ ದೆಹಲಿ ಕ್ಯಾಪಿಟಲ್ ಮಹಿಳಾ ತಂಡದ ಟೈಟಲ್ ಪಾರ್ಟ್ನರ್ ಆಗಲಿದೆ.
ಇದೊಂದು ಬಹುವರ್ಷಗಳ ಪಾಲುದಾರಿಕೆಯಾಗಿದ್ದು, ಇಂದು ಬೆಂಗಳೂರಿನ ಜೆಡಬ್ಲ್ಯೂ ಮ್ಯಾರಿಯೆಟ್ ನಲ್ಲಿ ಈ ಪಾಲುದಾರಿಕೆಯನ್ನು ಘೋಷಣೆ ಮಾಡಲಾಯಿತು. ಈ ಮೂಲಕ ಡಿಪಿ ವರ್ಲ್ಡ್ ಫ್ರಾಂಚೈಸಿಯೊಂದಿಗಿನ ತನ್ನ ಸಂಬಂಧವನ್ನು ಮತ್ತಷ್ಟು ಶಕ್ತಿಯುತಗೊಳಿಸಿಕೊಳ್ಳಲಿದೆ. ಈ ಪಾಲುದಾರಿಕೆ ಯ ಭಾಗವಾಗಿ ದೆಹಲಿ ಕ್ಯಾಪಿಟಲ್ಸ್ ನ ಅಧಿಕೃತ ಮ್ಯಾಚ್ ಜೆರ್ಸಿ ಮತ್ತು ಟ್ರೈನಿಂಗ್ ಜೆರ್ಸಿಯಲ್ಲಿ ಡಿಪಿ ವರ್ಲ್ಡ್ ನ ಲೋಗೋ ಪ್ರಮುಖವಾಗಿ ಕಾಣಿಸಿಕೊಳ್ಳ ಲಿದೆ.
ಡಿಪಿ ವರ್ಲ್ಡ್ ಸಬ್ ಕಾಂಟಿನೆಂಟ್ ನ ಲಾಜಿಸ್ಟಿಕ್ಸ್ ನ ಮುಖ್ಯ ವಾಣಿಜ್ಯ ಅಧಿಕಾರಿ ಅಶ್ವನಿ ನಾಥ್ ಅವರು ಈ ಪಾಲುದಾರಿಕೆ ಬಗ್ಗೆ ಮಾತನಾಡಿ, “ನಾವು ದೆಹಲಿ ಕ್ಯಾಪಿಟಲ್ಸ್ ನ ಮಹಿಳಾ ತಂಡದ ಟೈಟಲ್ ಪಾರ್ಟ್ನರ್ ಆಗುವ ಮೂಲಕ ನಮ್ಮ ಪಾಲುದಾರಿಕೆಯನ್ನು ವಿಸ್ತರಣೆ ಮಾಡಿಕೊಳ್ಳುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ಈ ಹಿಂದಿಗಿಂತಲೂ ಕಳೆದ ಹಲವು ವರ್ಷಗಳಲ್ಲಿ ಮಹಿಳಾ ಕ್ರಿಕೆಟ್ ಗೆ ಹೆಚ್ಚು ಹೆಚ್ಚು ಆಟಗಾರ್ತಿಯರು ಬರುತ್ತಿದ್ದಾರೆ ಮತ್ತು ಅಭಿಮಾನಿಗಳ ಸಂಖ್ಯೆಯಲ್ಲಿಯೂ ಹೆಚ್ಚಳವಾಗುತ್ತಿರುವ ಮೂಲಕ ಮಹಿಳಾ ಕ್ರಿಕೆಟ್ ನಲ್ಲಿ ಸಾಕಷ್ಟು ರೂಪಾಂತರಗಳಾಗಿವೆ. ಡಿಪಿ ವರ್ಲ್ಡ್ ನಲ್ಲಿ ಉದ್ಯೋಗಿಗಳಿಗೆ ಹೆಚ್ಚು ಅಗತ್ಯವಿರುವ ಕೌಶಲ್ಯ ಮತ್ತು ಪ್ರತಿಭೆಯನ್ನು ಹೆಚ್ಚಿಸಲು 2025 ರ ವೇಳೆಗೆ ಭಾರತದಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆಯನ್ನು ಶೇ.20 ಕ್ಕೆ ಹೆಚ್ಚಿಸಲು ನಾವು ಬದ್ಧರಾಗಿದ್ದೇವೆ.
ಈ ಬದ್ಧತೆಯು ಈಗ ದೆಹಲಿ ಕ್ಯಾಪಿಟಲ್ಸ್ ನೊಂದಿಗೆ ನಮ್ಮ ಪಾಲುದಾರಿಕೆಯನ್ನು ವಿಸ್ತರಣೆ ಮಾಡುತ್ತಿದೆ. ಏಕೆಂದರೆ, ನಾವು ಮುಂದಿನ ಪೀಳಿಗೆಗೆ ಉತ್ತಮ ಮತ್ತು ಹೆಚ್ಚು ಸಮಾನವಾದ ಪ್ರಪಂಚದ ಮೂಲಕ ಕ್ರಿಕೆಟ್ ಮೈದಾನದಲ್ಲಿ ಮತ್ತು ಹೊರಗೆ ಶಾಶ್ವತವಾದ ಒಂದು ಪರಂಪರೆಯನ್ನು ಹುಟ್ಟುಹಾಕುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ದೆಹಲಿ ಕ್ಯಾಪಿಟಲ್ಸ್ ಜೊತೆಗೆ ನಾವು ಕ್ರಿಕೆಟ್ ಮತ್ತು ಜಾಗತಿಕ ವ್ಯಾಪಾರ ಎರಡನ್ನೂ ಕ್ರಾಂತಿಕಾರಕವಾಗಿ ಮುಂದು ವರಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇವೆ ಮತ್ತು ಸಾಧ್ಯವಾದಷ್ಟೂ ಪ್ರತಿಯೊಬ್ಬರಿಗೂ ಅನುಕೂಲವಾಗುವ ರೀತಿಯಲ್ಲಿ ಬದಲಾವಣೆ ತರಲು ಪ್ರಯತ್ನಿಸುತ್ತಿದ್ದೇವೆ’’ ಎಂದು ತಿಳಿಸಿದರು.
ಈ ಹೊಸ ಪಾಲುದಾರಿಕೆ ಬಗ್ಗೆ ಮಾತನಾಡಿದ ದೆಹಲಿ ಕ್ಯಾಪಿಟಲ್ಸ್ ನ ಸಿಇಒ ಸುಖವಿಂದರ್ ಸಿಂಗ್ ಅವರು, “ನಮ್ಮ ಮಹಿಳಾ ತಂಡಕ್ಕೆ ಡಿಪಿ ವರ್ಲ್ಡ್ ಟೈಟಲ್ ಪಾಲುದಾರ ಸಂಸ್ಥೆಯಾಗುತ್ತಿರುವುದಕ್ಕೆ ನಮಗೆ ಅತೀವ ಸಂತಸವಾಗುತ್ತಿದೆ. ಮಹಿಳೆಯರನ್ನು ಕ್ರೀಡೆಯ ಕಡೆಗೆ ಆಸಕ್ತಿ ತೋರುವಂತೆ ಮಾಡುವ ಬದ್ಧತೆಯನ್ನು ಹೊಂದಿರುವ ಡಿಪಿ ವರ್ಲ್ಡ್ ನ ದೀರ್ಘಾವಧಿಯ ಬದ್ಧತೆಯು ಶ್ಲಾಘನೀಯವಾಗಿದೆ ಮತ್ತು ಈ ಪಾಲುದಾರಿಕೆಯ ಬಗ್ಗೆ ನಾವು ಹೆಚ್ಚು ಉತ್ಸುಕರಾಗಿದ್ದೇವೆ. ನಮ್ಮ ಐಪಿಎಲ್ ತಂಡದೊಂದಿಗೆ ಯಶಸ್ವಿ ಇನ್ನಿಂಗ್ಸ್ ನಂತರ ಈ ಸಹಯೋಗವು ಒಂದು ಸಹಜ ಪ್ರಕ್ರಿಯೆಯಾಗಿದೆ. ಎರಡೂ ತಂಡಗಳಿಗೆ ಇದೊಂದು ಮೈಲಿಗಲ್ಲಿನ ಕ್ಷಣವಾಗಿದೆ. ಈ ಪಾಲುದಾರಿಕೆ ಮೂಲಕ ದೆಹಲಿ ಕ್ಯಾಪಿಟಲ್ಸ್ ಮತ್ತು ಡಿಪಿ ವರ್ಲ್ಡ್ ಒಟ್ಟಾಗಿ ಕ್ರಿಕೆಟ್ ಋತುವನ್ನು ಆರಂಭಿಸುವುದನ್ನು ಎದುರು ನೋಡುತ್ತಿದ್ದೇವೆ’’ ಎಂದರು.