ಅತ್ಯಾಕರ್ಷಕ ಎಐ ಫೀಚರ್ ಗಳುಳ್ಳ ಎಐ ಟಿವಿಗಳ ಹೊಸ ಯುಗ ಆರಂಭಿಸಿದ ಸ್ಯಾಮ್‌ಸಂಗ್
ಬೆಂಗಳೂರು:ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಕಂಪನಿಯಾದ ಸ್ಯಾಮ್‌ಸಂಗ್, ಇಂದು ಬೆಂಗಳೂರಿನ ಸ್ಯಾಮ್‌ಸಂಗ್ ಒಪೆರಾ ಹೌಸ್‌ನಲ್ಲಿ ನಡೆದ ‘ಅನ್‌ಬಾಕ್ಸ್‌ & ಡಿಸ್ಕವರ್‌’ ಕಾರ್ಯಕ್ರಮದಲ್ಲಿ ತನ್ನ ಅಲ್ಟ್ರಾ ಪ್ರೀಮಿಯಂ ನಿಯೋ ಕ್ಯೂಎಲ್ಇಡಿ 8ಕೆ, ನಿಯೋ ಕ್ಯೂಎಲ್ಇಡಿ 4ಕೆ ಮತ್ತು ಓಎಲ್ಇಡಿ ಟಿವಿಗಳನ್ನು ಬಿಡುಗಡೆ ಮಾಡುವ ಮೂಲಕ ಎಐ ಟಿವಿಗಳ ಹೊಸ ಯುಗವನ್ನು ಪ್ರಾರಂಭಿಸಿದೆ.
ನಮ್ಮ 2024ರ ಶ್ರೇಣಿಯ ನಿಯೋ ಕ್ಯೂಎಲ್ಇಡಿ 8ಕೆ, ನಿಯೋ ಕ್ಯೂಎಲ್ಇಡಿ 4ಕೆ ಮತ್ತು ಓಎಲ್ಇಡಿ ಟಿವಿಗಳು ಪ್ರತೀ ಮನೆಯ ಮನರಂಜನೆಯ ಅನುಭವವನ್ನೇ ಅಪೂರ್ವಗೊಳಿಸಲಿದೆ ಮತ್ತು ಎಐ ಮೂಲಕ ಸುಸ್ಥಿರತೆ ಮತ್ತು ಹೆಚ್ಚಿನ ಸುರಕ್ಷತೆ ಒದಗಿಸುವ ಹೊಸ ಆವಿಷ್ಕಾರಗಳನ್ನು ನೀಡುತ್ತವೆ” ಎಂದು ಸ್ಯಾಮ್‌ಸಂಗ್ ನೈಋತ್ಯ ಏಷ್ಯಾದ ಅಧ್ಯಕ್ಷ ಮತ್ತು ಸಿಇಓ ಜೆಬಿ ಪಾರ್ಕ್ ಹೇಳಿದರು.
ನಮ್ಮ ಹೊಸ ಶ್ರೇಣಿಯ ಎಐ-ಚಾಲಿತ 8ಕೆ ನಿಯೋ ಕ್ಯೂಎಲ್ಇಡಿಗಳು, 4K ನಿಯೋ ಕ್ಯೂಎಲ್ಇಡಿಗಳು ಮತ್ತು ಓಎಲ್ಇಡಿ ಟಿವಿಗಳನ್ನು ಬಿಡುಗಡೆಯ ಮೂಲಕ ನಾವು ಭಾರತದಲ್ಲಿ ನಮ್ಮ ಮಾರುಕಟ್ಟೆ ನಾಯಕತ್ವವನ್ನು ವಿಸ್ತರಿಸುವ ವಿಶ್ವಾಸ ಹೊಂದಿದ್ದೇವೆ” ಎಂದು ಸ್ಯಾಮ್‌ಸಂಗ್ ಇಂಡಿಯಾದ ವಿಷುಯಲ್ ಡಿಸ್ಪ್ಲೇ ಬಿಸಿನೆಸ್ ನ ಹಿರಿಯ ಉಪಾಧ್ಯಕ್ಷ ಮೋಹನ್‌ದೀಪ್ ಸಿಂಗ್ ಹೇಳಿದ್ದಾರೆ.
ಸ್ಯಾಮ್‌ಸಂಗ್ ಭಾರತೀಯ ಗ್ರಾಹಕರಿಗೆ ಗೇಮಿಂಗ್, ಮನರಂಜನೆ, ಶಿಕ್ಷಣ ಮತ್ತು ಫಿಟ್‌ನೆಸ್‌ನಂತಹ ಹಲವಾರು ಸೇವೆಗಳನ್ನು ಒದಗಿಸಲು ಪ್ರಾದೇಶಿಕ ಗೊಳಿಸಿದ ಸ್ಮಾರ್ಟ್ ಸೌಲಭ್ಯಗಳನ್ನು ನೀಡುತ್ತದೆ. ಅವುಗಳನ್ನು ಈ ಕೆಳಗೆ ನೋಡಬಹುದು.
ಕ್ಲೌಡ್ ಗೇಮಿಂಗ್ ಸರ್ವೀಸ್ ಬಳಕೆದಾರರಿಗೆ ಎಎಎ ಆಟಗಳನ್ನು ಪ್ಲಗ್ ಆಂಡ್ ಪ್ಲೇ ಮೂಲಕ ಅನುಭವಿಸಲು ಅನುವು ಮಾಡಿಕೊಡುತ್ತದೆ. ಈ ಸಂದರ್ಭ ದಲ್ಲಿ ಯಾವುದೇ ಕನ್ಸೋಲ್ ಅಥವಾ ಪಿಸಿಯ ಅಗತ್ಯ ಇರುವುದಿಲ್ಲ. ಸ್ಯಾಮ್‌ಸಂಗ್ ಎಜುಕೇಶನ್ ಹಬ್ ಬಳಕೆದಾರರಿಗೆ ಲೈವ್ ತರಗತಿಗಳಿಗೆ ಬಿಗ್ ಸ್ಕ್ರೀನ್ ಮೂಲಕ ಹಾಜರಾಗಲು ಸಹಾಯ ಮಾಡುತ್ತದೆ. ಈ ಮೂಲಕ ನಿಮ್ಮ ಮಕ್ಕಳಿಗೆ ಕಲಿಕೆಯನ್ನು ಹೆಚ್ಚು ಸಂವಾದಾತ್ಮಕವಾಗಿಸುತ್ತದೆ ಮತ್ತು ತೀವ್ರ ಗೊಳಿಸುತ್ತದೆ.
ಸ್ಮಾರ್ಟ್ ಯೋಗ ಪ್ರಕ್ರಿಯೆಯನ್ನು ಎಐ- ಎನೇಬಲ್ಡ್ ಮ್ಯಾಟ್ ಮೂಲಕ ಆನಂದಿಸಬಹುದಾಗಿದೆ. ಈ ಮೂಲಕ ನೀವು ನೈಜ-ಸಮಯದಲ್ಲಿ ಆಸನಗಳ ಬಗ್ಗೆ ಸಲಹೆಗಳನ್ನು ಪಡೆಯುತ್ತೀರಿ. ಜೊತೆಗೆ ಭಂಗಿ ತಿದ್ದುಪಡಿ ಸಲಹೆಯನ್ನು ಕೂಡ ಪಡೆಯುತ್ತೀರಿ. ಹೆಚ್ಚುವರಿಯಾಗಿ, ಟಿವಿ ಕೀ ಕ್ಲೌಡ್ ಸೇವೆಯಯಿಂದ ಕ್ಲೌಡ್ ಮೂಲಕವೇ ಕಂಟೆಂಟ್ ನೇರ ಪ್ರಸಾರವನ್ನು ಪಡೆಯಬಹುದಾಗಿದೆ. ಹಾಗಾಗಿ ಗ್ರಾಹಕರಿಗೆ ಇನ್ನು ಮುಂದೆ ಸೆಟ್-ಟಾಪ್ ಬಾಕ್ಸ್ ಅಗತ್ಯ ಇರುವು ದಿಲ್ಲ. ಸ್ಯಾಮ್‌ಸಂಗ್ ಟಿವಿ ಪ್ಲಸ್ ಮೂಲಕ ಸುದ್ದಿ, ಚಲನಚಿತ್ರಗಳು, ಮನರಂಜನೆ ಮತ್ತು ಇತ್ಯಾದಿಗಳನ್ನು ತ್ವರಿತವಾಗಿ ಒದಗಿಸುವ 100+ ಚಾನಲ್‌ಗಳನ್ನು ಸಂಪೂರ್ಣ ಉಚಿತವಾಗಿ ಪಡೆಯಬಹುದು.
ಸ್ಯಾಮ್‌ಸಂಗ್‌ನ 2024ರ ಟಿವಿ ಶ್ರೇಣಿಯು ಬಳಕೆದಾರರ ಸ್ಮಾರ್ಟ್‌ಫೋನ್‌ಗಳೊಂದಿಗೆ ಅತ್ಯುತ್ತಮ ಏಕೀಕರಣ ಸಾಧಿಸಲಿದ್ದು, ಈ ವಿಚಾರದಲ್ಲಿ ಮತ್ತೊಂದು ಎತ್ತರವನ್ನು ಸಾಧಿಸಿದೆ. ಸ್ಮಾರ್ಟ್ ಮೊಬೈಲ್ ಕನೆಕ್ಟ್ ಫೀಚರ್ ಅನ್ನು ಸಕ್ರಿಯಗೊಳಿಸಲು ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್ ಅನ್ನು ಟಿವಿಯ ಬಳಿ ತಂದರೆ ಸಾಕು, ಅದು ಫೋನ್ ಅನ್ನು ಟಿವಿ ಮತ್ತು ಸಂಪರ್ಕಿತ ಗೃಹೋಪಯೋಗಿ ಉಪಕರಣಗಳಿಗೆ ಸಾರ್ವತ್ರಿಕ ರಿಮೋಟ್ ಆಗಿ ಪರಿವರ್ತನೆ ಹೊಂದುತ್ತದೆ.
ಹೊಸ ಎಐ ಟಿವಿಗಳು, ಅಪ್ಲಿಕೇಶನ್‌ಗಳು ಮತ್ತು ಪ್ಲಾಟ್‌ಫಾರ್ಮ್‌ಗಳ ಮೂಲಕ ಹೆಚ್ಚು ವೈಯಕ್ತೀಕರಿಸಿದ ಅನುಭವವನ್ನು ಒದಗಿಸುತ್ತವೆ. ಸ್ಯಾಮ್‌ಸಂಗ್ ನಾಕ್ಸ್ ಫೀಚರ್ ಮೂಲಕ ಪ್ರತಿ ಫೀಚರ್, ಅಪ್ಲಿಕೇಶನ್ ಮತ್ತು ಪ್ಲಾಟ್‌ಫಾರ್ಮ್ ಭದ್ರವಾದ ರಕ್ಷಣೆ ಪಡೆಯುತ್ತದೆ. ಎಲ್ಲಾ ಸೌಕರ್ಯಗಳು ಖಾಸಗಿಯಾಗಿರುತ್ತವೆ ಮತ್ತು ಸುರಕ್ಷಿತವಾಗಿರುತ್ತವೆ ಎಂಬ ಭರವಸೆ ಒದಗಿಸುತ್ತದೆ.
ಬೆಲೆ ಮತ್ತು ಪ್ರೀ ಆರ್ಡರ್ ಆಫರ್ಪ್ರೀ-ಆರ್ಡರ್ ಕೊಡುಗೆಯ ಭಾಗವಾಗಿ, ನಿಯೋ ಕ್ಯೂಎಲ್ಇಡಿ 8ಕೆ, ನಿಯೋ ಕ್ಯೂಎಲ್ಇಡಿ 4ಕೆ ಮತ್ತು ಗ್ಲೇರ್ ಫ್ರೀ ಓಎಲ್ಇಡಿ ಶ್ರೇಣಿಯನ್ನು ಖರೀದಿಸುವ ಗ್ರಾಹಕರು ರೂ. 79990 ಮೌಲ್ಯದ ಉಚಿತ ಸೌಂಡ್‌ಬಾರ್, ರೂ. 59990 ಮೌಲ್ಯದ ಫ್ರೀಸ್ಟೈಲ್, ರೂ.29990 ಮೌಲ್ಯದ ಮ್ಯೂಸಿಕ್ ಫ್ರೇಮ್ ಪಡೆಯಲಿದ್ದಾರೆ. ಈ ಆಫರ್ ಖರೀದಿಸುವ ಮಾಡೆಲ್ ಅನ್ನು ಅವಲಂಬಿಸಿರುತ್ತದೆ ಮತ್ತು ಏಪ್ರಿಲ್ 30, 2024 ರವರೆಗೆ ಲಭ್ಯವಿರುತ್ತದೆ. ಗ್ರಾಹಕರು ಮಾಡೆಲ್ ಅನ್ನು ಅವಲಂಬಿಸಿ 20% ವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು.* ಸ್ಯಾಮ್‌ಸಂಗ್ ನ ನಿಯೋ ಕ್ಯೂಎಲ್ಇಡಿ 8ಕೆ ಶ್ರೇಣಿಯು ಬೆಲೆ ರೂ.319990 ರಿಂದ ಪ್ರಾರಂಭವಾಗುತ್ತದೆ* ಸ್ಯಾಮ್‌ಸಂಗ್ ನ ನಿಯೋ ಕ್ಯೂಎಲ್ಇಡಿ 4ಕೆ ಶ್ರೇಣಿಯು ಬೆಲೆ ರೂ.139990 ರಿಂದ ಪ್ರಾರಂಭವಾಗುತ್ತದೆ* ಸ್ಯಾಮ್‌ಸಂಗ್ ನ ಓಎಲ್ಇಡಿ ಶ್ರೇಣಿಯು ಬೆಲೆ ರೂ.164990 ರಿಂದ ಪ್ರಾರಂಭವಾಗುತ್ತದೆ