4 ಲಕ್ಷ ಟಾಟಾ ಮ್ಯಾಜಿಕ್ ಮಾರಾಟ: ಹೊಸ ಮೈಲಿಗಲ್ಲು ಸ್ಥಾಪಿಸಿದ ಟಾಟಾ ಮೋಟರ್ಸ್
• ಈ ಅಭೂತಪೂರ್ವ ಸಾಧನೆ ವೇಳೆ ಮೊಟ್ಟ ಮೊದಲ ಮ್ಯಾಜಿಕ್ ಬೈ-ಫ್ಯುಯೆಲ್ ವ್ಯಾನ್ ಬಿಡುಗಡೆ• ಈ ಹೊಸ ಶ್ರೇಣಿಯನ್ನು ಕಟ್ಟಕಡೆಯ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಸ್ಮಾರ್ಟರ್ ಆಗಿಸಲು ಸಿಎನ್ ಜಿ ಮತ್ತು ಪೆಟ್ರೋಲ್ ನಿಂದ ಚಾಲಿತಗೊಳಿಸಲು ವಿನ್ಯಾಸಗೊಳಿಸಲಾಗಿದೆ
ಬೆಂಗಳೂರು:ಭಾರತದ ಅತಿ ದೊಡ್ಡ ವಾಣಿಜ್ಯ ವಾಹನಗಳ ತಯಾರಿಕಾ ಸಂಸ್ಥೆಯಾಗಿರುವ ಟಾಟಾ ಮೋಟರ್ಸ್ ಭಾರತದ ಅತ್ಯಂತ ಜನಪ್ರಿಯ ವ್ಯಾನ್ ಟಾಟಾ ಮ್ಯಾಜಿಕ್ ಅನ್ನು 4 ಲಕ್ಷ ಗ್ರಾಹಕರು ಖರೀದಿಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪನೆ ಮಾಡಿದೆ. ಈ ಒಂದು ಅಭೂತಪೂರ್ವವಾದ ಸಾಧನೆ ಯ ಸಂದರ್ಭದಲ್ಲಿ ಕಂಪನಿಯು ಮ್ಯಾಜಿಕ್ ನ ಹೊಸ ಶ್ರೇಣಿಯಾದ ಮ್ಯಾಜಿಕ್ ಬೈ-ಫ್ಯುಯೆಲ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಈ ಮೂಲಕ ತನ್ನ ಗ್ರಾಹಕರ ಅನುಕೂಲಗಳನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದೆ. ವಿಶ್ವಾಸಾರ್ಹತೆ, ಕಾರ್ಯದಕ್ಷತೆ ಮತ್ತು ಕೈಗೆಟುಕುವ ದರಕ್ಕೆ ಹೆಸರು ವಾಸಿಯಾಗಿರುವ ಟಾಟಾ ಮೋಟರ್ಸ್ ಅತ್ಯುತ್ತಮ ಸೇವೆಯನ್ನು ನೀಡುವ ಬದ್ಧತೆಯನ್ನು ಹೊಂದಿದೆ. 10 ಆಸನಗಳ ಟಾಟಾ ಮ್ಯಾಜಿಕ್ ಪ್ರಯಾಣಿಕರು ಮತ್ತು ಚಾಲಕರಿಗೆ ಹೇಳಿ ಮಾಡಿಸಿದ ವಾಹನವಾಗಿದೆ. ಸ್ಲೀಕ್ ಡಿಸೈನ್, ಸುರಕ್ಷತೆ ಮತ್ತು ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಅನುಭವವನ್ನು ನೀಡುವ ಟಾಟಾ ಮ್ಯಾಜಿಕ್ ಕಳೆದ ಹಲವು ವರ್ಷಗಳಿಂದ ಯಶಸ್ಸಿನ ಹಾದಿಯಲ್ಲಿ ಸಾಗಿದೆ.
ಇಕೋ ಸ್ವಿಚ್, ಗೇರ್ ಶಿಫ್ಟ್ ಅಡ್ವೈಸರ್ ಮತ್ತು ಚಾಲಕರಿಗೆ ಅನುಕೂಲದಾಯಕ ಅಂಶಗಳು ಸೇರಿದಂತೆ ಹಲವಾರು ಮೌಲ್ಯವರ್ಧಿತ ವೈಶಿಷ್ಟ್ಯತೆಗಳನ್ನು ಈ ಟಾಟಾ ಮ್ಯಾಜಿಕ್ ಹೊಂದಿದೆ. ಇದಲ್ಲದೇ, ಕೈಗೆಟುಕುವ ದರದಲ್ಲಿ ಈ ವಾಹನ ಲಭ್ಯವಿದೆ. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಪ್ರಯಾಣಕ್ಕೆ ಸೂಕ್ತವಾದ ವಾಹನವಾಗಿರುವ ಟಾಟಾ ಮ್ಯಾಜಿಕ್, ಕಟ್ಟಕಡೆಯ ಮೈಲಿಯವರೆಗೆ ಸಾರಿಗೆ ಸೌಲಭ್ಯ ಒದಗಿಸುವ ವಾಹನವಾಗಿದೆ. ಟಾಟಾ ಮ್ಯಾಜಿಕ್ –ಬೈ-ಫ್ಯುಯೆಲ್ ವಾಹನವು 694ಸಿಸಿ ಎಂಜಿನ್ ಮತ್ತು 60 ಲೀಟರ್ ಸಾಮರ್ಥ್ಯದ ಸಿಎನ್ ಜಿ ಟ್ಯಾಂಕ್ ಹಾಗೂ 5 ಲೀಟರ್ ಪೆಟ್ರೋಲ್ ಟ್ಯಾಂಕ್ ಅನ್ನು ಹೊಂದಿದೆ. ಒಂದು ಬಾರಿ ಸಿಎನ್ ಜಿ ಟ್ಯಾಂಕ್ ತುಂಬಿಸಿದರೆ 380 ಕಿಲೋಮೀಟರ್ ವರೆಗೆ ಸಾಗಬಹುದಾಗಿದೆ. ಸರಿಸಾಟಿಯಿಲ್ಲದ ಕಾರ್ಯದಕ್ಷತೆ ಮತ್ತು ಕಡಿಮೆ ನಿರ್ವಹಣೆ ವೆಚ್ಚದಿಂದ ಕೂಡಿರುವ ಈ ಮ್ಯಾಜಿಕ್ ವಾಹನಕ್ಕೆ 2 ವರ್ಷಗಳ ಅಥವಾ 72,000 ಕಿಲೋಮೀಟರ್ ಗಳ ವಾರಂಟಿಯನ್ನು ನೀಡಲಾಗುತ್ತಿದೆ.
ಈ ಹೊಸ ಮೈಲಿಗಲ್ಲು ಸ್ಥಾಪನೆ ಬಗ್ಗೆ ಮಾತನಾಡಿದ ಟಾಟಾ ಮೋಟರ್ಸ್ ವಾಣಿಜ್ಯ ವಾಹನಗಳ ವಿಭಾಗದ ಪ್ಯಾಸೆಂಜರ್ ಬ್ಯುಸಿನೆಸ್ ನ ಉಪಾಧ್ಯಕ್ಷ & ಮುಖ್ಯಸ್ಥ ಆನಂದ್ ಎಸ್ ಅವರು, “ನಮ್ಮ ವಿನೂತನವಾದ ಮ್ಯಾಜಿಕ್ ಬ್ರ್ಯಾಂಡ್ ಅನ್ನು 4 ಲಕ್ಷ ಸಂತುಷ್ಟ ಗ್ರಾಹಕರಿಗೆ ತಲುಪಿಸಿರುವುದಕ್ಕೆ ನಮಗೆ ಸಂತಸವಾಗುತ್ತಿದೆ. ವಿಶ್ವಾಸ, ಕಾರ್ಯದಕ್ಷತೆ ಮತ್ತು ಆರಾಮದಾಯಕವಾದ 4 ಲಕ್ಷ ಪ್ರಯಾಣವನ್ನು ಸಂಭ್ರಮಿಸುವ ಈ ಸಂದರ್ಭದಲ್ಲಿ ಮ್ಯಾಜಿಕ್ ಭಾರತದ ವೇಗವಾಗಿ ಬೆಳೆಯುತ್ತಿರುವ ಸಾರ್ವಜನಿಕ ಸಾರಿಗೆಯ ಹೃದಯಬಡಿತವಾಗುವುದನ್ನು ಮುಂದುವರಿಸಿದೆ. ಈ ಮೈಲಿಗಲ್ಲು ಸ್ಥಾಪಿಸಿರುವ ಸವಿನೆನಪಿಗಾಗಿ ನಾವು ಈ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಮ್ಯಾಜಿಕ್ ಬೈ-ಫ್ಯುಯೆಲ್ ವಾಹನವನ್ನು ಬಿಡುಗಡೆ ಮಾಡುತ್ತಿರುವುದಕ್ಕೆ ಸಂತೋಷ ವಾಗುತ್ತಿದೆ. ಇದು ಪೆಟ್ರೋಲ್ ನೊಂದಿಗೆ ಸಿಎನ್ ಜಿ ಚಾಲಿತ ವಾಹನವಾಗಿದೆ. ಸಾರಿಗೆ ಅಗತ್ಯತೆಗಳನ್ನು ಪೂರೈಸುವುದು ಮತ್ತು ನಮ್ಮ ಗ್ರಾಹಕರ ಲಾಭದ ಪ್ರಮಾಣ ಹಾಗೂ ಅನುಕೂಲವನ್ನು ಸುಧಾರಣೆ ಮಾಡುವುದಕ್ಕೆ ಪೂರಕವಾಗಿ ಈ ಹೊಸ ಶ್ರೇಣಿಯ ವಾಹನವನ್ನು ವಿನ್ಯಾಸಗೊಳಿಸಲಾಗಿದೆ. ನಮ್ಮ ಮೇಲೆ ಗ್ರಾಹಕರು ಇಟ್ಟಿರುವ ನಂಬಿಕೆ ಮತ್ತು ಪ್ರೋತ್ಸಾಹ ನೀಡುತ್ತಿರುವುದಕ್ಕೆ ನಾವು ಧನ್ಯವಾದಗಳನ್ನು ಹೇಳುತ್ತೇವೆ ಮತ್ತು ನಾವು ಅತ್ಯುತ್ಕೃಷ್ಟವಾದ ಸಾರಿಗೆ ಪರಿಹಾರಗಳನ್ನು ನೀಡುವ ನಿಟ್ಟಿನಲ್ಲಿ ನಮ್ಮನ್ನು ನಾವು ಅರ್ಪಣೆ ಮಾಡಿಕೊಳ್ಳುವುದನ್ನು ಮುಂದುವರಿಸುತ್ತೇವೆ’’ ಎಂದರು.
ಸಮಗ್ರ ಸಾರಿಗೆ ಪರಿಹಾರಗಳ ಪೂರೈಕೆದಾರ ಸಂಸ್ಥೆಯಾಗಿ ಟಾಟಾ ಮೋಟರ್ಸ್ ನ ವಾಣಿಜ್ಯ ವಾಹನಗಳು ಅತ್ಯಾಧುನಿಕ-ಸುಧಾರಿತ ವೈಶಿಷ್ಟ್ಯತೆ ಗಳೊಂದಿಗೆ ಗ್ರಾಹಕರ ಕೈಸೇರುತ್ತಿವೆ. ಸಮರ್ಥ ಪವರ್ ಟ್ರೇನ್ ಮತ್ತು ಪರಿಣಾಮಕಾರಿಯಾದ ಮೌಲ್ಯಾಧಾರಿತ ಅಂಶಗಳನ್ನೂ ಒಳಗೊಂಡಿವೆ. ಈ ವಾಹನಗಳ ಮಾಲೀಕರು ಅತ್ಯುತ್ತಮ ಇಂಧನ ಕಾರ್ಯದಕ್ಷತೆ, ಕಡಿಮೆ ಕಾರ್ಯಾಚರಣೆ ವೆಚ್ಚ, ಅತ್ಯುತ್ಕೃಷ್ಟ ಸೇವೆ, ರಿಯಲ್ –ಟೈಂ ಟ್ರ್ಯಾಕಿಂಗ್ ಮತ್ತು ಟಾಟಾ ಮೋಟರ್ಸ್ ಫ್ಲೀಟ್ ಎಡ್ಜ್ ನಿಂದ ಮೌಲ್ಯಮಾಪದ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ತನ್ನ ಸಂಪೂರ್ಣ ಸೇವಾ 2.0 ಉಪಕ್ರಮದ ಮೂಲಕ ವಾಹನದ ಸರಿಸಾಟಿಯಿಲ್ಲದ ನಿರ್ವಹಣಾ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.
ಇದರಲ್ಲಿ ಪ್ರಮುಖವಾಗಿ ಫ್ಲೀಟ್ ಮ್ಯಾನೇಜ್ಮೆಂಟ್ ಸಲೂಶನ್ಸ್, ವಾರ್ಷಿಕ ನಿರ್ವಹಣಾ ಗುತ್ತಿಗೆ ಹಾಗೂ ರಸ್ತೆ ಬದಿ ನೆರವಿನಂತಹ ಸೇವೆಗಳು ಒಳಗೊಂಡಿರು ತ್ತವೆ. ದೇಶಾದ್ಯಂತ 2,500+ ಟಚ್ ಪಾಯಿಂಟ್ ಗಳ ಸರ್ವೀಸ್ ನೆಟ್ವರ್ಕ್ ನಲ್ಲಿ ಈ ಸೇವೆಗಳನ್ನು ನುರಿತ ತಜ್ಞರಿಂದ ಪಡೆದುಕೊಳ್ಳಬಹುದಾಗಿದೆ. ಇದರ ಜೊತೆಗೆ ಟಾಟಾ ಜೆನ್ಯುನ್ ಪಾರ್ಟ್ಸ್ ಗಳನ್ನೂ ಗ್ರಾಹಕರು ಪಡೆದುಕೊಳ್ಳಲು ಅವಕಾಶವಿದೆ. ಈ ಮೂಲಕ ಟಾಟಾ ಮೋಟರ್ಸ್ ತನ್ನ ಗ್ರಾಹಕರಿಗೆ ಸರಿಸಾಟಿಯಿಲ್ಲದ ಗುಣಮಟ್ಟ ಮತ್ತು ಸೇವೆಯ ಬದ್ಧತೆಯನ್ನು ಖಾತರಿಪಡಿಸುತ್ತದೆ.