ಬೇಸಿಗೆಯ ರಜೆಯನ್ನು ಇನ್ನಷ್ಟು ಮಜವಾಗಿಸಲು ವಂಡರ್‌ಲಾ ವತಿಯಿಂದ “ಸಮ್ಮರ್‌ಲಾ ಫಿಯೆಸ್ಟಾ-2024” ಆಯೋಜನೆ: ಕೊಡುಗೆಗಳ ಭರಪೂರ
ಬೆಂಗಳೂರು:ಈ ಬೇಸಿಗೆಯ ಮಜವನ್ನು ಇನ್ನಷ್ಟು ಹೆಚ್ಚಿಸಲು ಭಾರತದ ಅತಿದೊಡ್ಡ ಅಮ್ಯೂಸ್‌ಮೆಂಟ್ ಪಾರ್ಕ್ ವಂಡರ್‌ಲಾ ಬೆಂಗಳೂರು ಪಾರ್ಕ್‌ನಲ್ಲಿ ‘ಸಮ್ಮರ್‌ಲಾ ಫಿಯೆಸ್ಟಾ’ ನಡೆಸುತ್ತಿದ್ದು, ಮೇ 31 ರವರೆಗೂ ಇರಲಿದೆ.
ಸಮ್ಮರ್‌ಲಾ ಫಿಯೆಸ್ಟಾದಲ್ಲಿ ಸಾಕಷ್ಟು ಕೊಡುಗೆಗಳು ನಿಮ್ಮನ್ನು ಕೈ ಬೀಸಿ ಕರೆಯುತ್ತಿದೆ, ಸಾಕಷ್ಟು ಮೋಜಿನ ಡ್ರೈ ಹಾಗೂ ವಾಟರ್‌ ಗೇಮ್‌ಗಳು, ಫೂಡ್‌-ಫೆಸ್ಟಿವಲ್‌, ಡಿಜೆ ಮ್ಯೂಸಿಕ್‌ ಸೇರಿದಂತ ಅನೇಕ ವಿಶೇಷತೆಗಳು ಈ ಸಮ್ಮರ್‌ಲಾದಲ್ಲಿ ಇರಲಿದೆ.
ಇದಲ್ಲದೆ, ಡೊಳ್ಳು ಕುಣಿತ, ಚಿಂಗಾರಿ ಮೇಳಗಳಂತಹ ವಿಶೇಷ ಸಾಂಸ್ಕೃತಿಕ ಪ್ರದರ್ಶನ ಹಾಗೂ ಮೆರವಣಿಗೆ ಇರಲಿವೆ. ವಾರಾಂತ್ಯದಲ್ಲಿ ನಿಮ್ಮನ್ನು ಇನ್ನಷ್ಟು ಉತ್ಸಾಹಿಗಳನ್ನಾಗಿ ಮಾಡಲು ಡಿಜೆ ಮ್ಯೂಸಿಕ್‌ ಸಹ ಆಯೋಜಿಸಲಾಗುತ್ತಿದೆ. ಇನ್ನು, ಭಾನುವಾರದಂದು ವಂಡರ್‌ಲಾ ರೆಸಾರ್ಟ್‌ನಲ್ಲಿ ಬೇಸಿಗೆಯ ಬ್ರಂಚ್‌ ಸಹ ಇರಲಿದೆ. ಈ ಎಲ್ಲಾ ಮನರಂಜನೆಗಳ ಮೇಲೂ ಸಾಕಷ್ಟು ರಿಯಾಯಿತಿ ಹಾಗೂ ಕೊಡುಗೆಗಳು ಇದ್ದು, ಆಸಕ್ತರು ಭಾಗಿಯಾಗಿ ಈ ಬೇಸಿಗೆ ರಜೆಯನ್ನು ಇನ್ನಷ್ಟು ಸಂತಸದಿಂದ ಕಳೆಯಬಹುದು.
ಈ ಎಲ್ಲಾ ಇತರ ಕೊಡುಗೆಗಳು ಆನ್‌ಲೈನ್ ಮತ್ತು ಆಫ್‌ಲೈನ್ ಬುಕಿಂಗ್‌ಗಳಲ್ಲಿ ಲಭ್ಯವಿರಲಿದೆ. ಪಾರ್ಕ್‌ನಲ್ಲಿ ಈಗ ಲಭ್ಯವಿರುವ ಹೊಸ ವಿಶೇಷ ಪಾನೀಯ ಕೌಂಟರ್‌ಗಳೊಂದಿಗೆ ಈ ಬೇಸಿಗೆಯ ಶಾಖವನ್ನು ತಣಿಸಲು ತಾಜಾ ಹಣ್ಣಿನ ಜ್ಯೂಸ್ ಗಳು, ಋತುವಿನ ಅತ್ಯುತ್ತಮ ಆಮ್ರಾಸ್‌, ತಂಪಾದ ಮಜ್ಜಿಗೆ ಮತ್ತು ಬೇಸಿಗೆಯ ಪಾನೀಯಗಳು ಲಭ್ಯವಿರಲಿದೆ.
ಕೊಡುಗೆಗಳ ವಿವರ ಇಲ್ಲಿದೆ:● ವಂಡರ್‌ಲಾಗೆ ಭೇಟಿ ನೀಡಲು ಬಯಸುವವರಿಗೆ   ಹೆಸರಿನಲ್ಲಿ ಶೇ. 10ರಷ್ಟು ರಿಯಾಯಿತಿ ಸಿಗಲಿದೆ. ಈ ಕೊಡುಗೆ ಪಡೆಯಲು ಮೂರು ದಿನಗಳ ಮುಂಚಿತವಾಗಿ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬುಕ್‌ ಮಾಡಿಕೊಳ್ಳಬೇಕು.● ಜನ್ಮದಿನದ ಆಫರ್‌, ವಿಶೇಷವಾಗಿ ಮೇ ತಿಂಗಳಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವವರಿಗೆ 1 ಟಿಕೆಟ್‌ ಖರೀದಿಸಿದರೆ ಮತ್ತೊಂದು ಟಿಕೆಟ್‌ ಉಚಿತವಾಗಿ ಸಿಗಲಿದೆ.● ಇನ್ನು, ವಿದ್ಯಾರ್ಥಿಗಳಿಗಾಗಿ ಹಾಲ್ ಟಿಕೆಟ್ ಆಫರ್ ಸಹ ಚಾಲ್ತಿಯಲ್ಲಿದೆ. 2023-2024ರ ಶೈಕ್ಷಣಿಕ ವರ್ಷದ 10ನೇ, 11ನೇ ಮತ್ತು 12ನೇ ಪರೀಕ್ಷೆ ಬರೆದ ವಿದ್ಯಾರ್ಥಿಗಳು ತಮ್ಮ ಮೂಲ ಪರೀಕ್ಷೆಯ ಹಾಲ್ ಟಿಕೆಟ್‌ಗಳನ್ನು ಪ್ರಸ್ತುತಪಡಿಸಿ ಪಾರ್ಕ್ ಪ್ರವೇಶ ಟಿಕೆಟ್‌ಗಳ ಮೇಲೆ ಶೇ. 35ರಷ್ಟು ರಿಯಾಯಿತಿಯನ್ನು ಪಡೆಯಬಹುದು.● ವಂಡರ್‌ಲಾ ಕಾಲೇಜು ವಿದ್ಯಾರ್ಥಿಗಳಿಗೆ (16-24 ವರ್ಷ ವಯಸ್ಸಿನವರು) ತಮ್ಮ ಕಾಲೇಜು ಐಡಿ ಕಾರ್ಡ್‌ಗಳನ್ನು ಪ್ರಸ್ತುತಪಡಿಸಿದರೆ ಶೇ. 25ರಷ್ಟು ರಿಯಾಯಿತಿ ಪಡೆಯಲಿದ್ದಾರೆ, ಜೊತೆಗೆ, ವಿದ್ಯಾರ್ಥಿಗಳು ಆಹಾರ ಆಯ್ಕೆಗಳನ್ನು ಒಳಗೊಂಡಿರುವ ಕಾಂಬೊ ಪ್ಯಾಕೇಜ್‌ಗಳನ್ನು ಸಹ ಪಡೆಯಬಹುದು. ಆರಂಭಿಕ ಅರ್ಲಿ ಬರ್ಡ್‌ ಕೊಡುಗೆಯನ್ನು ಹೊರತುಪಡಿಸಿ, ಎಲ್ಲಾ ಇತರ ಕೊಡುಗೆಗಳು ಆನ್‌ಲೈನ್ ಮತ್ತು ಆಫ್‌ಲೈನ್ ಬುಕಿಂಗ್‌ಗಳಿಗೆ ಮಾನ್ಯ ವಾಗಿರುತ್ತವೆ.
ಅತಿಥಿಗಳು ತಮ್ಮ ವಂಡರ್ಲಾ ಸಮ್ಮರ್ಲಾ ಫಿಯೆಸ್ಟಾ ಭಾಗವಾಗಿ ಮೇ 31 ರವರೆಗೆ ಪ್ರತಿ ಶನಿವಾರ ನಡೆಯುವ ವಂಡರ್ಲಾ ವಿಶೇಷ ಪೂಲ್ ಪಾರ್ಟಿ ಗಳೊಂದಿಗೆ ಭಾಗವಹಿಸಬಹುದು.
ಈ ಕುರಿತು ಮಾತನಾಡಿದ ವಂಡರ್‌ಲಾ ಹಾಲಿಡೇಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ. ಚಿಟ್ಟಿಲಪ್ಪಿಳ್ಳಿ, ಬೇಸಿಗೆ ರಜೆಯನ್ನು ಇನ್ನಷ್ಟು ಉತ್ಸಾಹ ಭರಿತವನ್ನಾಗಿದಲು ವಂಡರ್‌ಲಾ “ಸಮ್ಮರ್ಲಾ ಫಿಯೆಸ್ಟಾ’ ಆಯೋಜಿಸಿದೆ, ಈ ಸಮ್ಮರ್ಲಾದಲ್ಲಿ ಇಡೀ ಕುಟುಂಬಗಳು, ಕಾಲೇಜು ಸ್ನೇಹಿತರು, ಮಕ್ಕಳು ಎಲ್ಲರೂ ತಮ್ಮ ಪ್ರೀತಿಪಾತ್ರರೊಂದಿಗೆ ಆಗಮಿಸಿ, ಆನಂದಿಸಬಹುದು.
ಸಮ್ಮರ್‌ಲಾ ಭಾಗವಾಗಿ ಫೂಡ್‌ಫೆಸ್ಟಿವಲ್‌, ಸಾಂಸ್ಕೃತಿಕ ಮೆರವಣಿಗೆ, ಡಿಜೆ ಮ್ಯೂಸಿಕ್‌ ಸೇರಿದಂತೆ ಇನ್ನೂ ಅನೇಕ ಮನರಂಜನೆಗಳು ಇರಲಿವೆ. ಈ ಎಲ್ಲಾ ಮನರಂಜನೆಯೊಂದಿಗೆ ನಿಮ್ಮ ಸವಿನೆನಪನ್ನು ಅಚ್ಚಳಿಯದಂತೆ ಮಾಡುವುದೇ ನಮ್ಮ ವಂಡರ್‌ಲಾದ ಪ್ರಮುಖ ಉದ್ದೇಶ ಎಂದು ಹೇಳಿದರು.
ವಂಡರ್‌ಲಾ ಆನ್‌ಲೈನ್ ಪೋರ್ಟಲ್ ಮೂಲಕ ಅಥವಾ ನೇರವಾಗಿ ಪಾರ್ಕ್ ಕೌಂಟರ್‌ಗಳಲ್ಲಿ ಟಿಕೆಟ್‌ಗಳನ್ನು ಮುಂಗಡವಾಗಿ ಬುಕ್ ಮಾಡುವ ಮೂಲಕ ಸಮ್ಮರ್ಲಾವನ್ನು ಆನಂದಿಸಿ. ಹೆಚ್ಚಿನ ಮಾಹಿತಿ ಮತ್ತು ಬುಕಿಂಗ್‌ಗಳಿಗಾಗಿ, .. ಗೆ ಭೇಟಿ ನೀಡಿ ಅಥವಾ +91 80372 30333, +91 80350 73966 ಅನ್ನು ಸಂಪರ್ಕಿಸಿ.