ದುಡಿಯುವ ತಾಯಂದಿರ ಸ್ಫೂರ್ತಿಯನ್ನು ಬಿಂಬಿಸುವ ಬೆಂಗಳೂರಿನ ಅಮೆಜಾನ್ `ಐ ಹ್ಯಾವ್ ಸ್ಪೇಸ್’ ಪಾಲುದಾರರಾದ ರಾಧಾ
ರಾಧಾ ಅಮೆಜಾನ್ ಐ.ಎಚ್.ಎಸ್. ಕಾರ್ಯಕ್ರಮ ಬಳಸಿಕೊಂಡು ಹೆಚ್ಚುವರಿ ಆದಾಯ ಗಳಿಸುತ್ತಿರುವುದಲ್ಲದೆ ತಮ್ಮ ಸಣ್ಣ ಉದ್ಯಮವನ್ನು ಯಶಸ್ವಿ ಯಾಗಿ ನಡೆಸುತ್ತಿದ್ದಾರೆ.
ಬೆಂಗಳೂರು:ತಾಯಂದಿರು ಕುಟುಂಬಗಳ ಬೆನ್ನೆಲುಬಾಗಿದ್ದು ಮನೆ ಹಾಗೂ ಕೆಲಸವನ್ನು ಅತ್ಯಂತ ಸುಲಲಿತ ಮತ್ತು ಸದೃಢತೆಯಿಂದ ಪ್ರಯತ್ನರಹಿತ ವಾಗಿ ಸಮತೋಲನ ಮಾಡುತ್ತಾರೆ. ಬೆಂಗಳೂರಿನ 52 ವರ್ಷದ ತಾಯಿ ರಾಧಾ ಕೆ., ತಮ್ಮ ಹಣಕಾಸು ಸಂಕಷ್ಟಗಳಿಂದ ತಮ್ಮ ಪ್ರಾಥಮಿಕ ಶಿಕ್ಷಣ ಪೂರೈಸಲು ಸಾಧ್ಯವಾಗಿರಲಿಲ್ಲ. ಹಲವು ಅಡೆತಡೆಗಳ ನಡುವೆಯೂ ಆಕೆ ತನ್ನ ವೈಯಕ್ತಿಕ ಸವಾಲುಗಳನ್ನು ಕಠಿಣ ನಿರ್ಧಾರದೊಂದಿಗೆ ಎದುರಿಸಿದ್ದಾರೆ ಮತ್ತು ಕೆಲಸ ಮಾಡುತ್ತಿರುವ ತಾಯಿಯಾಗಿ ಯಶಸ್ಸು ಸಾಧಿಸಿದ್ದಾರೆ. ಈ ತಾಯಂದಿರ ದಿನಕ್ಕೆ ನಾವು ಆಕೆಯ ಗಮನಾರ್ಹ ಪ್ರಯಾಣವನ್ನು ಮತ್ತು ಹೇಗೆ ಅವರು ಅಮೆಜಾನ್ ನ ಐ ಹ್ಯಾವ್ ಸ್ಪೇಸ್(ಐ.ಎಚ್.ಎಸ್.) ಕಾರ್ಯಕ್ರಮವನ್ನು ಬಳಸಿಕೊಂಡಿದ್ದಾರೆ ಎನ್ನುವುದನ್ನು ಸಂಭ್ರಮಿಸುತ್ತೇವೆ.ರಾಧಾ ತಮ್ಮ ಸಿರಿಧಾನ್ಯ ಮಳಿಗೆ, `ಶ್ರೀ ಕರೆತಿಮ್ಮರಾಯಸ್ವಾಮಿ ಫ್ಲೋರ್ ಮಿಲ್ ಅನ್ನು ಜುಲೈ 2019ರಲ್ಲಿ ಪ್ರಾರಂಭಿಸಿದರು ಮತ್ತು ಅಮೆಜಾನ್ ನ ಐ.ಎಚ್.ಎಸ್. ಕಾರ್ಯಕ್ರಮಕ್ಕೆ ಜೂನ್ 2021ರಲ್ಲಿ ಸೇರಿಕೊಂಡು ಹೆಚ್ಚುವರಿ ಆದಾಯ ಗಳಿಸಲು ಶಕ್ತರಾದರು.
ರಾಧಾ ಅಮೆಜಾನ್ ನ `ಐ ಹ್ಯಾವ್ ಸ್ಪೇಸ್ ಪ್ರೋಗ್ರಾಮ್’ ಕುರಿತು ತನ್ನ ಮಗನಿಂದ ತಿಳಿದರು, ಅವರು ಮೂರು ವರ್ಷಗಳಿಂದ ಅಮೆಜಾನ್ ಡೆಲಿವರಿ ಅಸೋಸಿಯೇಟ್ ಆಗಿದ್ದಾರೆ. ಅವರು ಈ ಕಾರ್ಯಕ್ರಮಕ್ಕೆ 2021ರಲ್ಲಿ ತಮ್ಮ ಸೇರ್ಪಡೆ ಮಾಡಿಕೊಂಡರು ಮತ್ತು ಅಂದಿನಿಂದ ದಕ್ಷತೆಯಿಂದ ಅವರ ಮಳಿಗೆಯನ್ನುನಿರ್ವಹಿಸುತ್ತಿದ್ದು ತಮ್ಮ ಮನೆಕೆಲಸದ ಜವಾಬ್ದಾರಿಗಳನ್ನು ನಿರ್ವಹಿಸಿಕೊಂಡೂ ಐ.ಎಚ್.ಎಸ್. ಪಾಲುದಾರರಾಗಿ ಹೊಸ ಜವಾಬ್ದಾರಿ ಯನ್ನು ನಿಭಾಯಿಸುತ್ತಿದ್ದಾರೆ. ಅವರ ತಾಳ್ಮೆ, ಸಮಯ ನಿರ್ವಹಣೆ ಕೌಶಲ್ಯಗಳು ಮತ್ತು ಮನೆ ಹಾಗೂ ಕೆಲಸದ ನಡುವೆ ತಡೆರಹಿತವಾಗಿ ಸಾಮರಸ್ಯ ಸಾಧಿಸುವುದು ಅವರ ಬದ್ಧತೆಯನ್ನು ಎತ್ತಿ ತೋರಿಸುತ್ತದೆ ಮತ್ತು ಹಲವರಿಗೆ ಸ್ಫೂರ್ತಿಯಾಗಿದೆ.
“ನನ್ನ ಮಗನ ಅಪರಿಮಿತ ಬೆಣಬಲ ಮತ್ತು ಅಮೆಜಾನ್ ಒದಗಿಸಿದ ಅವಕಾಶದಿಂದ ನಾನು ಹಲವು ಕೆಲಸಗಳನ್ನು ಮಾಡಲು, ನನ್ನ ಉದ್ಯಮ ವಿಸ್ತರಿಸ ಲು ಮತ್ತು ನನ್ನ ಕುಟುಂಬಕ್ಕೆ ಹಣಕಾಸು ಭದ್ರತೆ ಪಡೆಯಲು ಸಾಧ್ಯವಾಯಿತು. ಐ ಹ್ಯಾವ್ ಸ್ಪೇಸ್ ಕಾರ್ಯಕ್ರಮದ ಅನುಕೂಲಗಳು ವಿಶೇಷವಾಗಿ ಸಕಾಲಿಕ ಪಾವತಿಗಳು ನನಗೆ ಹೆಚ್ಚುವರಿ ಆದಾಯದ ಮೂಲ ನೀಡಿದ್ದು ಅದು ಯಶಸ್ವಿಯಾಗಲು ನನ್ನ ನಿರ್ಧಾರಕ್ಕೆ ಉತ್ತೇಜನ ನೀಡಿದೆ” ಎಂದು ರಾಧಾ ಕೆ. ಹೇಳಿದರು.
ತಮ್ಮ ಕುಟುಂಬ ಹಾಗೂ ಮುಖ್ಯವಾಗಿ ಆಕೆಯ ಮಗನ ಬೆಂಬಲದಿಂದ ರಾಧಾ ಹಣಕಾಸು ಸ್ವಾತಂತ್ರ್ಯದ ಪ್ರಯಾಣದಲ್ಲಿ ಮುನ್ನಡೆದಿದ್ದು ಅವರ ಕುಟುಂಬದ ಆದಾಯ ಸದೃಢಗೊಳಿಸಿದ್ದು ಸಬಲೀಕರಣದ ಭಾವನೆ ಹೊಂದಿದ್ದಾರೆ. ಅಮೆಜಾನ್ ಲಾಜಿಸ್ಟಿಕ್ಸ್ ಇಂಡಿಯಾದ ನಿರ್ದೇಶಕ ಡಾ.ಕರುಣಾ ಶಂಕರ್ ಪಾಂಡೆ, “ಅಮೆಜಾನ್ ನಲ್ಲಿ ನಾವು ವೈವಿಧ್ಯತೆ, ಸಮಾನತೆ ಮತ್ತು ಒಳಗೊಳ್ಳುವಿಕೆ(ಡಿಇ ಅಂಡ್ ಐ) ಅನ್ನು ಪೋಷಿಸಲು ಬದ್ಧರಾಗಿದ್ದು ರಾಧಾ ಅವರಂತಹ ಉದ್ಯೋಗಸ್ಥ ಮಹಿಳೆಯರನ್ನು ಒಳಗೊಂಡು ವೈವಿಧ್ಯಮಯ ಹಿನ್ನೆಲೆಗಳ ಪಾಲುದಾರರಿಗೆ ಸಬಲೀಕರಿಸುತ್ತಿದ್ದೇವೆ. ಅವರ ಗಮನಾರ್ಹ ಸದೃಢತೆ ಮತ್ತು ಉದ್ಯಮಶೀಲತೆಯ ಕೌಶಲ್ಯಗಳು ನಿಜಕ್ಕೂ ಸ್ಫೂರ್ತಿಯಾಗಿವೆ. ರಾಧಾ ಅವರಂಥವರು ಐ ಹ್ಯಾವ್ ಸ್ಪೇಸ್ ಕಾರ್ಯಕ್ರಮದಂತಹ ಉಪಕ್ರಮಗಳು ನಮಗೆ ಹೆಮ್ಮೆ ತರುತ್ತವೆ” ಎಂದರು.
`ಐ ಹ್ಯಾವ್ ಸ್ಪೇಸ್’ ಕಾರ್ಯಕ್ರಮದ ಮೂಲಕ ಅಮೆಜಾನ್ ಇಂಡಿಯಾ ಸ್ಥಳೀಯ ಮಳಿಗೆಗಳು ಮತ್ತು ಉದ್ಯಮ ಮಾಲೀಕರು ತಮ್ಮ ಮಳಿಗೆಯ ಸುತ್ತಲಿನ 2-4 ಕಿಲೋಮೀಟರ್ ವ್ಯಾಪ್ತಿಯಲ್ಲಿ ಉತ್ಪನ್ನಗಳನ್ನು ಗ್ರಾಹಕರಿಗೆ ಪೂರೈಸಲು ಸನ್ನದ್ಧವಾಗಿಸಿ ಅವರಿಗೆ ಹೆಚ್ಚುವರಿ ಆದಾಯ ತಂದುಕೊಡುತ್ತದೆ. 2015ರಲ್ಲಿ ಪ್ರಾರಂಭವಾದ ಈ ಕಾರ್ಯಕ್ರಮವು 28,000 ನೆರೆಹೊರೆಯ ಮತ್ತು ಕಿರಾಣಿ ಪಾಲುದಾರರನ್ನು 450+ ಪಟ್ಟಣಗಳು ಮತ್ತು ನಗರಗಳನ್ನು ಭಾರತದಾದ್ಯಂತ ತನ್ನ ಜಾಲದಲ್ಲಿ ಹೊಂದಿದೆ.
`ಐ ಹ್ಯಾವ್ ಸ್ಪೇಸ್’ ಪಾಲುದಾರರಾಗಲು ಬಯಸುವವರು ಇಲ್ಲಿ ಅರ್ಜಿ ಸಲ್ಲಿಸಬಹುದು: ../