 : ಬೈಕ್‌ನಲ್ಲಿ ಹೋಗುತ್ತಿದ್ದಾಗಲೇ ಡೆಲಿವರಿ ಬಾಯ್‌ನ ಮೊಬೈಲ್‌ ದೋಚಿದ ಕಳ್ಳರು; ವಿಡಿಯೊ ಸೆರೆ
ಬೆಂಗಳೂರು:ರಸ್ತೆಯಲ್ಲಿ ಹೋಗುವಾಗ ಮೊಬೈಲ್‌ನಲ್ಲಿ ಮಾತನಾಡಿಕೊಂಡು ಹೋಗುವ ಜನರು ಎಚ್ಚರಿಕೆ ವಹಿಸಬೇಕಾಗಿದೆ. ಯಾಕೆಂದರೆ, ರಾಜಧಾನಿಯಲ್ಲಿ ಇತ್ತೀಚೆಗೆ ಮೊಬೈಲ್‌ ಕಳ್ಳರ ( ) ಹಾವಳಿ ಹೆಚ್ಚಾಗಿದೆ. ಈ ನಡುವೆ ನಗರದ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ಡೆಲಿವರಿ ಬಾಯ್‌ ಕೈಯಿಂದ ಮೊಬೈಲ್‌ ದೋಚಿ ಕಳ್ಳರು ಪರಾರಿಯಾಗಿರುವ ಘಟನೆ ನಡೆದಿದೆ. ಮೊಬೈಲ್‌ ಕಸಿಯುವ ವೇಳೆ ಬೈಕ್‌ನಿಂದ ಡೆಲಿವರಿ ಬಾಯ್‌ ಆಯತಪ್ಪಿ ರಸ್ತೆಗೆ ಬಿದ್ದಿದ್ದು, ಈ ಸಮಯದಲ್ಲಿ ಹಿಂದಿನಿಂದ ಯಾವುದೇ ವಾಹನ ಬಾರದ ಕಾರಣ ಡೆಲಿವರಿ ಬಾಯ್‌ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಸೆ.27ರಂದು ರಾತ್ರಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು,ಕಿಡಿಗೇಡಿಗಳ ಕೃತ್ಯ ಹಿಂದೆ ಬರುತ್ತಿದ್ದ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಎಚ್‌ಎಸ್‌ಆರ್‌ ಲೇಔಟ್‌ನ ರಸ್ತೆಯಲ್ಲಿ ಫೋನ್ ಹಿಡಿದು ಮಾತನಾಡುತ್ತಾ ಡೆಲಿವರಿ ಬಾಯ್ ಬೈಕ್‌ನಲ್ಲಿ ಹೋಗುತ್ತಿದ್ದ. ಈ ವೇಳೆ ಹಿಂದಿನಿಂದ ಬೈಕ್‌ನಲ್ಲಿ ಬಂದ ಇಬ್ಬರು ಖದೀಮರು ಮೊಬೈಲ್ ದೋಚಿ ಪರಾರಿಯಾಗಿದ್ದಾರೆ.
##                .           .    27th ,  ../HZiO9h3Rkk
ಸಾಮಾಜಿಕ ಜಾಲತಾಣಲ್ಲಿ ಈ ವಿಡಿಯೊ ವೈರಲ್‌ ಆದ ಹಿನ್ನೆಲೆ ಎಕ್ಸ್‌ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಅವರು, ಮೊಬೈಲ್‌ ಕಳ್ಳರ ವಿರುದ್ಧ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | : ಮೆಟ್ರೋದಲ್ಲಿ ‘ಆಜ್ ಕಿ ರಾತ್’ ಹಾಡಿಗೆ ಮೈಚಳಿ ಬಿಟ್ಟು ನಟಿಸಿದ ಮಹಿಳೆ; ವಿಡಿಯೊ ಇದೆ
अमेठी : घर के अंदर युवक के साथ की गई मारपीट➡मारपीट का वीडियो सोशल मीडिया पर वायरल➡घर के अंदर 3-4 लोगों द्वारा की गई पिटाई➡युवक को पीटता देख बीच-बचाव करने पहुंची महिलाएं➡4 दिन पूर्व का बताया जा रहा है वायरल वीडियो➡मुंशीगंज क्षेत्र के टेरी का बताया जा रहा वीडियो.…../8tcfjVHPl8
ಅಮೇಥಿ:ಪ್ರೀತಿಗಾಗಿ ಜನ ಎಂತೆಂಥ ದುಸ್ಸಾಹಸಗಳನ್ನು ಮಾಡುತ್ತಾರೆ. ತಮ್ಮ ಪ್ರೇಮಿಯನ್ನು ನೋಡಲು ಎಂತಹ ಅಪಾಯವನ್ನೂ ಎದುರಿಸಲು ತಯಾರಾಗಿರುತ್ತಾರೆ ಎಂಬುದನ್ನು ನೀವು ಕೇಳಿರಬಹುದು. ಅಂಥದ್ದೇ ಒಂದು ಘಟನೆ ಅಮೇಥಿ ಜಿಲ್ಲೆಯಲ್ಲಿ ನಡೆದಿದೆ. ಯುವಕನೊಬ್ಬ ತನ್ನ ವಿವಾಹಿತ ಪ್ರೇಮಿಯ ಮನೆಗೆ ಭೇಟಿ ನೀಡಿದ್ದು, ಆತ ಬಂದಿರುವ ವಿಚಾರ ತಿಳಿದ ನಂತರ, ಆಕೆಯ ಕುಟುಂಬ ಸದಸ್ಯರು ಕೋಪಗೊಂಡು ಯುವಕನ ಮೇಲೆ ದೊಣ್ಣೆಗಳಿಂದ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ( ) ಆಗಿದೆ. ಆದರೆ ಎರಡೂ ಕಡೆಯಿಂದ ಯಾವುದೇ ಔಪಚಾರಿಕ ದೂರು ಸ್ವೀಕರಿಸಲಾಗಿಲ್ಲ. ಹಾಗಾಗಿ ಆರೋಪಿಗಳ ವಿರುದ್ಧ ಇನ್ನೂ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮುನ್ಶಿಗಂಜ್ ಪೊಲೀಸ್ ಠಾಣೆ ಪ್ರದೇಶದ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದ್ದು,  ಸೋಶಿಯಲ್ ಮೀಡಿಯಾದಲ್ಲಿ  ಸಿಕ್ಕಾಪಟ್ಟೆ ವೈರಲ್‌ ಆಗಿದೆ.  ಪ್ರೇಯಸಿಯ ಕುಟುಂಬಸ್ಥರು ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಜನರು ಅವನನ್ನು ಹೊಡೆಯುವುದನ್ನು ತಡೆಯಲು ಮಹಿಳೆ ಕೂಡ ಪ್ರಯತ್ನಿಸಿದ್ದಾಳೆ. ದಾಳಿಯ ನಂತರ ಯುವಕ ತೀವ್ರವಾಗಿ ಗಾಯಗೊಂಡಿದ್ದಾನೆ.
ವರದಿ ಪ್ರಕಾರ, ಯುವಕ ಮಹಿಳೆಯೊಂದಿಗೆ ಬಹಳ ಸಮಯದಿಂದ ಅಕ್ರಮ ಸಂಬಂಧ ಹೊಂದಿದ್ದ. ಅವನು ಇದ್ದಕ್ಕಿದ್ದಂತೆ ಅವಳನ್ನು ಅವಳ ಮನೆಯಲ್ಲೇ ಭೇಟಿ ಮಾಡಲು ನಿರ್ಧರಿಸಿದ. ಇದು ತಿಳಿದಾಗ ಅವಳ ಕುಟುಂಬದವರು ಕೋಪಗೊಂಡಿದ್ದಾರೆ. ಮಹಿಳೆಗೆ ಈಗಾಗಲೇ ಮದುವೆಯಾಗಿದ್ದರೂ ಕೂಡ ಆಕೆಯನ್ನು ಸೇರಲು ಯುವಕ ಅವಳ ಮನೆಗೆ ಬಂದಿದ್ದ.
ಇದನ್ನೂ ಓದಿ:ಈ ಊರಿನ ಜನ ಮನೆಯಲ್ಲಿ ಅಡುಗೆಯನ್ನೇ ಮಾಡುವುದಿಲ್ಲವಂತೆ! ಏಕೆ ಈ ಸಂಪ್ರದಾಯ?
ಈ ಘಟನೆಯ ಬಗ್ಗೆ ಪೊಲೀಸರಿಗೆ ಇನ್ನೂ ಯಾವುದೇ ಔಪಚಾರಿಕ ದೂರು ಬಂದಿಲ್ಲ. ಆದರೆ, ಸಾರ್ವಜನಿಕ ಶಾಂತಿಗೆ ಭಂಗ ತರುವ ನೆಪದಲ್ಲಿ ಪೊಲೀಸರು ಆರೋಪಿಗಳ ವಿರುದ್ಧ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.  ಅಮೇಥಿ ಪೊಲೀಸ್ ಕಚೇರಿಯ ಪ್ರಕಾರ, ಮುನ್ಶಿಗಂಜ್ ಪೊಲೀಸರಿಗೆ ಘಟನೆಯ ಬಗ್ಗೆ ತಿಳಿದಿದೆ, ಆದರೆ ಯಾವುದೇ ದೂರು ದಾಖಲಾಗಿಲ್ಲ. ಈ ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ ಮತ್ತು ಶಾಂತಿ ಕಾಪಾಡಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.