ರೇಣುಕಾಸ್ವಾಮಿ ಕೊಲೆ ಪ್ರಕರಣ: ತನಿಖಾ ತಂಡಕ್ಕೆ ಇನ್ಸ್‌ಪೆಕ್ಟರ್ ಗಿರೀಶ್ ಮತ್ತೆ ಸೇರ್ಪಡೆ
ಬೆಂಗಳೂರು:ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್ ಅರೆಸ್ಟ್ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇನ್ಸ್‌ಪೆಕ್ಟರ್ ಗಿರೀಶ್ ನಾಯ್ಕ್ ತನಿಖಾ ತಂಡಕ್ಕೆ ಮತ್ತೆ ಸೇರ್ಪಡೆಯಾಗಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಗಿರೀಶ್ ನಾಯ್ಕ್ ತನಿಖಾಧಿಕಾರಿಯಾಗಿದ್ದರು. ಬಳಿಕ ಇತ್ತೀಚಿಗೆ ಗಿರೀಶ್ ನಾಯ್ಕ್ ಅವರಿಗೆ ವರ್ಗಾವಣೆಯಾಗಿತ್ತು. ಆರೋಪಿ ದರ್ಶನ್ ಬಂಧನದಲ್ಲಿ ಗಿರೀಶ್ ನಾಯ್ಕ್ ಪ್ರಮುಖ ಪಾತ್ರ ವಹಿಸಿದ್ದರು.
ಎಸಿಪಿ ಚಂದನ್ ಮತ್ತು ಗಿರೀಶ್ ನಾಯ್ಕ್ ಅವರೇ ಮೈಸೂರಿನಿಂದ ನಟ ದರ್ಶನ್ ಅವರನ್ನು ಕರೆತಂದಿದ್ದರು. ಚುನಾವಣೆ ವೇಳೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಗಿರೀಶ್ ನಾಯ್ಕ್ ವರ್ಗಾವಣೆಯಾಗಿದ್ದರು.
ನಂತರ ಎಸಿಪಿ ಚಂದನ್ ರನ್ನ ತನಿಕಾಧಿಕಾರಿಯಾನ್ನಾಗಿ ನೇಮಕ ಮಾಡಲಾಗಿತ್ತು. ಚುನಾವಣೆ ಮುಗಿದ ಬಳಿಕ ಮತ್ತೆ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ಮರುವರ್ಗ ಆಗಿದ್ದಾರೆ.
ಆರೋಪಿಗಳ ಹೆಚ್ಚಿನ ವಿಚಾರಣೆ, ತನಿಖೆ ಹಿನ್ನೆಲೆಯಲ್ಲಿ ಗಿರೀಶ್ ನಾಯ್ಕ್ ರನ್ನ ಸಹಾಯಕ‌ ತನಿಖಾಧಿಕಾರಿಯಾಗಿ ನಿಯೋಜನೆ ಮಾಡಲಾಗಿದೆ. ದರ್ಶನ್ ಹಾಗೂ ಗ್ಯಾಂಗ್​ನ ವಿಚಾರಣೆ ಮುಂದುವರಿದಿದೆ.