 : ಭಾರತೀಯ ಅಂಚೆ ಇಲಾಖೆಯ ಅಪಘಾತ ವಿಮಾ ಪರಿಹಾರ ವಿತರಣೆ
ಚಿಕ್ಕಬಳ್ಳಾಪುರ: ಇರಿಗೆನಹಳ್ಳಿ ಗ್ರಾಮ, ದೇವನಹಳ್ಳಿ ತಾಲೂಕು ಐಪಿಪಿಬಿ ರವರು ಚಿಕ್ಕಬಳ್ಳಾಪುರ ಐಬಿಟಿನ ಶಾಖೆಯಲ್ಲಿ ಟಾಟಾ ಗುಂಪು ಅಪಘಾತ ವಿಮೆ ಪಾಲಸಿಯನ್ನು ಮಾಡಿಸಿರುತ್ತಾರೆ.
ಭಾರತೀಯ ಅಂಚೆ ಇಲಾಖೆ, ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಚಿಕ್ಕಬಳ್ಳಾಪುರ ಶಾಖೆಯಲ್ಲಿ ವೆಂಕಟೇಶ್ ನವರು ೨೦೨೪ ಮೇ ೬ ರಂದು ಅಪಘಾತದಲ್ಲಿ ಮೃತರಾಗಿರುತ್ತಾರೆ.
ಈ ಗುಂಪು ಅಪಘಾತ ವಿಮೆಯ ೧೦ ಲಕ್ಷ ವಿಮಾ ಮೊತ್ತವನ್ನು ನಾಮಿನಿಯಾದ ಶ್ರೀ ಗಂಗಾಧರ್ ಅವರಿಗೆ ಕೋಲಾರ ವಿಭಾಗದ ಹಿರಿಯ ಅಂಚೆ ಅಧಿಕ್ಷಕರಾದ ವಿ.ಎಸ್.ಎಲ್ ನರಸಿಂಹರಾವ್ ಅವರು, ಶಿಶು ಅಭಿವೃದ್ಧಿ ಯೋಜನಾಧಿ ಕಾರಿ ರಮೇಶ್, ಐಪಿಬಿಪಿ ರೀಜನಲ್ ಮ್ಯಾನೇಜರ್ ಆದ ವಿ.ಪಿ. ಸುರೇಶ್ ರವರುಗಳ ಸಮ್ಮುಖದಲ್ಲಿ ಇಂದು ಚಿಕ್ಕಬಳ್ಳಾಪುರ ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಐಪಿಬಿಪಿ ಬ್ರಾಂಚ್ ಮ್ಯಾನೇಜರ್ ಬಾಲಸುಬ್ರಮಣ್ಯಂ, ಅಂಚೆ ನಿರೀಕ್ಷಕ ಶಶಿಕುಮಾರ್, ಪೋಸ್ಟ್ ಮಾಸ್ಟರ್ ಚಂದ್ರಶೇಖರ್, ಸಿಬ್ಬಂದಿ ಸತೀಶ್, ಶಶಿ ಕುಮಾರ್, ಸಂತೋಷ್ ಅಬ್ದುಲ್ಲಾ ಮತ್ತು ರಮೇಶ್ ಹಾಜರಿದ್ದರು.