ತಾನು ಕೆಲಸ ಮಾಡುತ್ತಿದ್ದ ಯುವತಿ ಜಿಮ್‌ನಲ್ಲಿ ಆತ್ಮಹತ್ಯೆಗೆ ಶರಣು
ಬೆಂಗಳೂರು:ಪೋಷಕರ ಬಲವಂತಕ್ಕೆ ಮದುವೆಯಾಗಲು ಒಪ್ಪದ ಯುವತಿಯೊಬ್ಬಳು ತಾನು ಕೆಲಸ ಮಾಡುತ್ತಿದ್ದ ಜಿಮ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಬೆಂಗಳೂರಿನ ಬಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
22 ವರ್ಷದ ಶ್ರಾವಣಿ ಆತ್ಮಹತ್ಯೆಗೆ ಶರಣಾದ ಯುವತಿ. ಮಲ್ಲನ ಗೌಡ ಹಾಗೂ ಜ್ಯೋತಿ ದಂಪತಿಗಳ ಪುತ್ರಿಯಾದ ಶ್ರಾವಣಿ ದಾವಣಗೆರೆ ಮೂಲದವರು. ಬೆಂಗಳೂರಿನ ದಾಸರಳ್ಳಿಯ ಎಂಟನೇ ಮೈಲಿನಲ್ಲಿ ಶ್ರಾವಣಿ ವಾಸವಾಗಿದ್ದರು. ಗೋಲ್ಡ್‌ ಜಿಮ್‌ನಲ್ಲಿ ಅವರು ರಿಸೆಪ್ಶನಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು.
ಇತ್ತೀಚೆಗೆ ಶ್ರಾವಣಿಗೆ ಪೋಷಕರು ಮದುವೆ ಮಾಡಲು ನಿರ್ಧರಿಸಿದ್ದರು. ಆದರೆ ಶ್ರಾವಣಿಗೆ ಈ ಮದುವೆ ಇಷ್ಟವಿರಲಿಲ್ಲ. ಅವರು ಶಂಕರ ಎಂಬಾಂತನನ್ನು ಪ್ರೀತಿಸುತ್ತಿದ್ದರು ಎಂದು ತಿಳಿದು ಬಂದಿದೆ. ಹೀಗಾಗಿ ಶ್ರಾವಣಿ ಮದುವೆಗೆ ನಿರಾಕರಿಸಿದ್ದರು.
ಶ್ರಾವಣಿಯನ್ನು ಮದುವೆಗೆ ಒಪ್ಪಿಸಲು ತಂದೆ-ತಾಯಿ ದಾವಣಗೆರೆಯಿಂದ ಬೆಂಗಳೂರಿಗೆ ಆಗಮಿಸಿದ್ದರು. ಮೂರು ದಿನಗಳಿಂದ ತಾಯಿ ಜ್ಯೋತಿ ಶ್ರಾವಣಿ ಯನ್ನು ಮದುವೆಗೆ ಒಪ್ಪಿಸಲು ಪ್ರಯತ್ನಿಸುತ್ತಲೇ ಇದ್ದರು. ಅಲ್ಲದೆ ಮದುವೆಗೆ ಎಲ್ಲಾ ತಯಾರಿ ಕೂಡ ಮಾಡಿಕೊಂಡಿದ್ದರು.
ಇದರಿಂದ ಮನನೊಂದ ಆಕೆ ವಿಷ ಸೇವಿಸಿದ್ದಾರೆ. ಬಳಿಕ ತಾನು ಕೆಲಸ ಮಾಡುತ್ತಿದ್ದ ಜಿಮ್‌ಗೆ ಆಗಮಿಸಿದ್ದಾರೆ. ಈ ವೇಳೆ ತನ್ನ ಪ್ರೀಯತಮ ಶಂಕರ್‌ಗೆ ಕರೆ ಕೂಡ ಮಾಡಿದ್ದಾರೆ. ಈ ದೃಶ್ಯ ಜಿಮ್ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಶುಲ್ಲಕ ಕಾರಣಕ್ಕೆ ಕೈಗೆ ಬಂದ ಮಗಳು ತಮ್ಮನ್ನು ಅಗಲಿರುವುದಕ್ಕೆ ಪೋಷಕರಿಗೆ ಆಕಾಶವೇ ಕಳಚಿ ಬಿದ್ದಂತಾಗಿದೆ.
ಶ್ರಾವಣಿ ರೀಲ್ಸ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದರು.