ಕಿಡ್ನಿ ವೈಫಲ್ಯ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆ ಹೊಂದಿದ್ದ 74 ವರ್ಷದ ವ್ಯಕ್ತಿಗೆ ಯಶಸ್ವಿ ಶಸ್ತ್ರಚಿಕಿತ್ಸೆ
ಬೆಂಗಳೂರು:ಕಿಡ್ನಿ ವೈಫಲ್ಯಕ್ಕೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾದ ಬಳಿಕ ಎದೆಯ ಗೂಡಿನಲ್ಲಿ ಶ್ವಾಸಕೋಶಕ್ಕೆ ಹೊಂದಿಕೊಂಡಂತೆ ಇದ್ದ ದೊಡ್ಡ ಟ್ಯೂಮರ್‌ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆ ಹೊಂದಿದ್ದ 74 ವರ್ಷದ ವೃದ್ಧರಿಗೆ ಫೋರ್ಟಿಸ್‌ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿಯಾಗಿ ಅನೇಕ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ.
ಮಿನಿಮಲಿ ಇನ್ವೈಸಿವ್‌ ವಾಸ್ಕುಲರ್‌ ಇಂಟರ್‌ವೆನ್ಷನಲ್‌ ರೇಡಿಯೋಲಾಜಿಸ್ಟ್‌ ಡಾ. ರೂಪಾ ಶೇಷಾದ್ರಿ, ಶ್ವಾಸಕೋಶ ತಜ್ಷ ಡಾ. ಸುದರ್ಶನ್‌, ಹೃದಯ ತಜ್ಞರು, ನೆಫ್ರಾಲಜಿಸ್ಟ್‌ ಸೇರಿದಂತೆ ಅನೇಕ ವೈದ್ಯರ ಸಹಕಾರದೊಂದಿಗೆ ಚಿಕಿತ್ಸೆ ನೀಡಲಾಗಿದೆ.74 ವರ್ಷದ ವ್ಯಕ್ತಿಯು ಕಿಡ್ನಿ ವೈಫಲ್ಯದಿಂದ ಹಾಸಿಗೆ ಹಿಡಿದಿದ್ದರು, ಆಹಾರ ಸೇವಿಸಲೂ ಸಾಧ್ಯವಾಗದೆ, ಕ್ರಮೇಣ ಮಾತನಾಡುವ ಸಾಮರ್ಥ್ಯವನ್ನು ಕಳೆದುಕೊಂಡರು. ಕೂಡಲೇ ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದ ಇವರನ್ನು ವಿವಿಧ ತಪಾಸಣೆಗೆ ಒಳಪಡಿಸಲಾಯಿತು. ಈ ವೇಳೆ ಇವರ ಹೃದಯದ ಎಡಭಾಗದಲ್ಲಿ ರಕ್ತದಿಂದ ತುಂಬಿದ ದೊಡ್ಡದಾದ ಗಡ್ಡೆ (ಟ್ಯೂಮರ್‌) ಇರುವುದು ಪತ್ತೆಯಾಯಿತು. ಕಿಡ್ನಿ ಸಮಸ್ಯೆಯಿಂದಾಗಿ ಅವರ ಕ್ರಿಯೇಟೈನ್ ಅಧಿಕವಾಗಿದ್ದರಿಂದ ಕಾಂಟ್ರಾಸ್ಟ್ ಸ್ಕ್ಯಾನ್ ಮಾಡಲಾಗಲಿಲ್ಲ. ಹೀಗಾಗಿ  ಆಂಜಿಯೋಗ್ರಾಮ್ ಮಾಡುವ ಟ್ಯೂಮರ್‌ ಇರುವುದು ಖಚಿತವಾಯಿತು. ಇದನ್ನು ಹೊಡೆಯುವುದರಿಂದ ಸಮಸ್ಯೆಯೇ ಹೆಚ್ಚಾದ ಕಾರಣ, ಮಹಾಪಧಮನಿಯ ಕಮಾನು ಮತ್ತು ಪಕ್ಕದ ಅವರೋಹಣ ಎದೆಗೂಡಿನಲ್ಲಿ ಥೊರಾಸಿಕ್ ಎಂಡೋವಾಸ್ಕುಲರ್ ಅರೋಟಿಕ್‌ ರಿಪೇರ್‌() ವಿಧಾನದ ಮೂಲಕ ಸ್ಟೆಂಟ್ ಕಸಿಯನ್ನು ಯಶಸ್ವಿಯಾಗಿ ನಡೆಸಲಾಯಿತು. ಇದರ ಜೊತೆಗೆ ಮೂತ್ರಪಿಂಡ ಸೋಂಕು ನಿವಾರಣಾ ಚಿಕಿತ್ಸೆ ಸೇರಿದಂತೆ ಅನೇಕ ಚಿಕಿತ್ಸೆಯನ್ನು ಮುತವರ್ಜಿಯಿಂದ ಯಶಸ್ವಿಯಾಗಿ ನಡೆಸಿದ್ದು, ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇದೀಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಮಾತನಾಡಲು ಸಹ ಪ್ರಯತ್ನಿಸುತ್ತಿದ್ದಾರೆ.