ಅಕೋ ಬೆಂಗಳೂರಿನಲ್ಲಿ ಅಕೋ ಡ್ರೈವ್ ಸೇವಾ ಕೇಂದ್ರ ಪ್ರಾರಂಭ
– ಮೊದಲ ಎರಡು ಕೇಂದ್ರಗಳು ಬೆಂಗಳೂರಿನಲ್ಲಿ– ಮುಂದಿನ ಮೂರು ವರ್ಷಗಳಲ್ಲಿ 100 ಸೇವಾ ಕೇಂದ್ರಗಳ ಜಾಲ ರಚನೆಗೆ ಯೋಜನೆ ಸಿದ್ಧವಾಗಿದೆ
ಬೆಂಗಳೂರು:ವಿಮಾ ಕ್ಷೇತ್ರದಲ್ಲಿ ತನ್ನ ನೇರವಾಗಿ-ಗ್ರಾಹಕರಿಗೆ ಕೊಡುಗೆಗಳೊಂದಿಗೆ ಅಳಿಸಲಾಗದ ಗುರುತನ್ನು ಸೃಷ್ಟಿಸಿದ ನಂತರ, ಅಕೋ ತನ್ನ ಅತ್ಯಾಧುನಿಕ ಅಕೋ ಡ್ರೈವ್ ಸೇವಾ ಕೇಂದ್ರವನ್ನು ಪ್ರಾರಂಭಿಸುವ ಮೂಲಕ ಕಾರು ದುರಸ್ತಿ ಮತ್ತು ಸೇವಾ ಕ್ಷೇತ್ರಕ್ಕೂ ಮುನ್ನುಗ್ಗುತ್ತಿದೆ. ಈ ಹೊಸ ಪ್ರೆಅಯತ್ನದ ಮೂಲಕ ಅಕೋ ತನ್ನ ಗ್ರಾಹಕರಿಗೆ ಆದ್ಯ ಗಮನವನ್ನು ನೀಡುತ್ತದೆ ಮತ್ತು ವಾಹನದ ಕುರಿತಂತೆ ಅವರ ಎಲ್ಲ ಅಗತ್ಯಗಳಿಗೆ ಸಂಪೂರ್ಣ ಪರಿಹಾರವನ್ನು ಒದಗಿಸುತ್ತದೆ.
ಈ ಹೊಸ ಸೇವಾ ಕೇಂದ್ರಗಳ ಪ್ರಾರಂಭದೊಂದಿಗೆ ಅಕೋ, ಹೊಸ ಕಾರು ಖರೀದಿಸುವ ಹಂತದಿಂದ ಪ್ರಾರಂಭಿಸಿ ವಿಮೆಯನ್ನು ಪಡೆದುಕೊಳ್ಳುವುದು, ಸೇವೆಗಳನ್ನು ಪ್ರವೇಶಿಸುವುದು ಮತ್ತು ಅಪಘಾತ ದುರಸ್ತಿ, ಅಂತಿಮ ಮಾರಾಟದವರೆಗೆ ಗ್ರಾಹಕರಿಗೆ ಸಮಗ್ರವಾಗಿ ಮಾರ್ಗದರ್ಶನ ನೀಡುವ ಒಂದು ವ್ಯವಸ್ಥೆಯನ್ನು ಸೃಷ್ಟಿಸಿದೆ. ಆ ಮೂಲಕ ಗ್ರಾಹಕರಿಗೆ ಒಂದು ಸಮಗ್ರ ಅನುಭವವನ್ನು ನೀಡುತ್ತದೆ. ಈ ನೂತನ ಉಪಕ್ರಮದಿಂದ ಅಕೋ, ಅಪಘಾತ ಕ್ಕೀಡಾಗಿ ವಿಮೆಯ ಕ್ಲೇಮುಗಳಿಗಾಗಿ ತನ್ನಲ್ಲಿ ಬರುವ ವಾಹನಗಳನ್ನು ಡ್ರೈವ್ ಸರ್ವೀಸ್ ಸೆಂಟರ್ ಗೆ ನೇರವಾಗಿ ಕಳುಹಿಸಬಹುದಾಗಿರುತ್ತದೆ.
ಅಕೋ ಡ್ರೈವ್, ಬೆಂಗಳೂರಿನಲ್ಲಿ ಎರಡು ಸೇವಾ ಕೇಂದ್ರಗಳನ್ನು ಪ್ರಾರಂಭಿಸಿದೆ – ಕುಡ್ಲು ಗೇಟ್‌ನಲ್ಲಿ ಅದರ ಪ್ರಮುಖ ಕೇಂದ್ರ ಮತ್ತು ಥಣಿಸಂದ್ರದಲ್ಲಿ ಅದರ ಮೊದಲ ಫ್ರ್ಯಾಂಚೈಸಿ ಕೇಂದ್ರ. ಮುಂದಿನ ಆರು ತಿಂಗಳಲ್ಲಿ ಕಂಪನಿಯು ದೆಹಲಿ, ಮುಂಬೈ, ಪುಣೆ, ಹೈದರಾಬಾದ್, ಅಹಮದಾಬಾದ್ ಮತ್ತು ಚೆನ್ನೈನಲ್ಲಿ ಹೆಚ್ಚುವರಿ ಕೇಂದ್ರಗಳನ್ನು ಪ್ರಾರಂಭಿಸಲು ಯೋಜಿಸಿದೆ. ಮುಂದಿನ ಮೂರು ವರ್ಷಗಳಲ್ಲಿ ನೆಟ್‌ವರ್ಕ್ ಅನ್ನು 100+ ಸೇವಾ ಕೇಂದ್ರಗಳಿಗೆ ಬೆಳೆಸಲು ಅಕೋ, ಫ್ರಾಂಚೈಸಿ ಪಾಲುದಾರರನ್ನು ಹುಡುಕುತ್ತದೆ.
ಸೌಮಿತ್ರ ರಾಜ್, ವೈಸ್ ಪ್ರೆಸಿಡೆಂಟ್, ಸ್ಟ್ರಾಟೆಜಿಕ್ ಪಾರ್ಟ್‌ನರ್‌ಶಿಪ್ಸ್, ಅಕೋ: “ನಾವು ಪ್ರಮುಖ ಸವಾಲುಗಳನ್ನು ನಿಭಾಯಿಸುವ ಮೂಲಕ ಆಟೋ ಮೋಟಿವ್ ಸೇವಾ ಕೇಂದ್ರಕ್ಕೊಂದು ಹೊಸ ವ್ಯಾಖ್ಯಾನ ನೀಡುತ್ತಿದ್ದೇವೆ. ಅಕೋ ಡ್ರೈವ್ ಸೇವಾ ಕೇಂದ್ರದ ಪ್ರಾರಂಭ, ಒಂದು ಪ್ರಮುಖ ಮೈಲಿಗಲ್ಲು. ಸರಿಸಾಟಿಯಿಲ್ಲದ ರೀಟೇಲ್ ಅನುಭವವನ್ನು ನೀಡುವ ನಮ್ಮ ಬದ್ಧತೆ, ಅತ್ಯಾಧುನಿಕ ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳುವುದು ಮತ್ತು ಆಳವಾದ ಉದ್ಯಮ ಪಾಲುದಾರಿಕೆಗಳನ್ನು ಉತ್ತೇಜಿಸುವುದು, ಆಟೋಮೊಬೈಲ್‌ಗಳಿಗೆ ಬೇಕಾಗುವ ಎಲ್ಲವೂ ಒಂದೇ ಕಡೆ ಸಿಗುವಂತೆ ಮಾಡುವುದು ನಮ್ಮ ದೂರದೃಷ್ಟಿಯ ಬಗ್ಗೆ ಒತ್ತಿಹೇಳುತ್ತವೆ.”
ಅಕೋ ಡ್ರೈವ್ ಸೇವಾ ಕೇಂದ್ರ, ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮೂಲಸೌಕರ್ಯ ಮತ್ತು ತಂತ್ರಜ್ಞಾನಗಳನ್ನು ಒದಗಿಸುತ್ತದೆ. ಇಲ್ಲಿ ಉನ್ನತ ದರ್ಜೆಯ ಉಪಕರಣಗಳು ಮತ್ತು ಅತ್ಯಂತ ನುರಿತ ಸಿಬ್ಬಂದಿ ಇರುವುದರಿಂದ ವಾಹನಗಳಿಗೆ ಉತ್ತಮ ಸೇವೆ ಮತ್ತು ದುರಸ್ತಿ ಖಂದಿತವಾಗಿಯೂ ದೊರೆಯುತ್ತವೆ. ಅಕೋ ಡ್ರೈವ್ ಸೇವಾ ಕೇಂದ್ರದಲ್ಲಿ ಸ್ಥಿರತೆ ಮತ್ತು ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಎಲ್ಲ ಸಿಬ್ಬಂದಿಗೂ ಅಕೋ ನ ಪ್ರಮಾಣಿತ ಕಾರ್ಯಾಚರಣ ಕಾರ್ಯವಿಧಾನಗಳ ( ಗಳು) ಪ್ರಕಾರ ತರಬೇತಿ ನೀಡಲಾಗುತ್ತದೆ. ರಿಪೇರಿಯಾದ ನಂತರ ಬಹುಕಾಲ ಯಾವುದೇ ಸಮಸ್ಯೆ ಬಾರದಂತೆ ಮತ್ತು ವಿಶ್ವಾಸಾರ್ಹ ಸೇವೆ ನೀಡಲು ಸೇವಾ ಕೇಂದ್ರವು ಅಸಲಿ ಓಇಎಂ ಬಿಡಿ ಭಾಗಗಳನ್ನೇ ಬಳಸುತ್ತದೆ.
ಅಸಂಘಟಿತವಾದ ಆಟೋಮೋಟಿವ್ ಮಾರಾಟದ ನಂತರದ ಕ್ಷೇತ್ರಕ್ಕೆ ಅಕೋ ಕಾಲಿಟ್ಟಿರುವುದರಿಂದ ಗ್ರಾಹಕರಿಗೆ ಅತ್ಯುತ್ತಮ ದರ್ಜೆಯ ವಾಹನ ಸೇವಾ ಅನುಭವ ಲಭಿಸುತ್ತದೆ. ಇದರಿಂದಾಗಿ ಆಟೋಮೋಟಿವ್ ವಲಯದಲ್ಲಿ ಸಮಗ್ರ ಸೇವಾ ಪೂರೈಕೆದಾರರಾಗಿ ಅಕೋ ಗೆ ಒಂದು ಉನ್ನತ ಸ್ಥಾನ ಖಚಿತವಾ ಗುತ್ತದೆ.
ಎಂಬೆಡೆಡ್ ವಿಮಾ ಉತ್ಪನ್ನಗಳಲ್ಲಿ ಅಕೋ ಅತಿದೊಡ್ಡ ಮಾರುಕಟ್ಟೆ ಷೇರುಗಳನ್ನು ಹೊಂದಿದೆ. ಪ್ರಾರಂಭವಾದ ಎರಡು ವರ್ಷಗಳಲ್ಲಿಯೇ, ಅಕೋ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಉತ್ಪನ್ನ 200+ ನವ ಪೀಳಿಗೆಯ, ಜನ-ಮೊದಲು ಎನ್ನುವ ಧ್ಯೇಯದ ಸ್ವಿಗ್ಗಿ, ರೇಜರ್ ಪೇ, ಮತ್ತು ಸಿ.ಆರ್.ಇ.ಡಿ. ಸೇರಿದಂತೆ ಕಂಪನಿಗಳ ಜೊತೆ ಕೈಜೋಡಿಸಿದೆ. ಸುಮಾರು 8+ ಲಕ್ಷ ಜೀವಗಳನ್ನು ವಿಮೆ ಮಾಡಿದೆ. 9 ವರ್ಷಗಳಲ್ಲಿ ಕಂಪನಿಯು 78+ ಮಿಲಿಯನ್ ಗ್ರಾಹಕರಿಗೆ ವಿಮಾ ಪಾಲಿಸಿಗಳನ್ನು ವಿತರಿಸಿದೆ ಮತ್ತು 1+ ಬಿಲಿಯನ್ ವಿಮಾ ಪಾಲಿಸಿಗಳನ್ನು ನೀಡಿದೆ.