ಬೆಳಗಾವಿ ನೂತನ‌ ಜಿಲ್ಲಾಧಿಕಾರಿ ಆಗಿ ಮೊಹಮ್ಮದ್ ರೋಷನ್ ನೇಮಕ
ಬೆಳಗಾವಿ:ಎರಡು ವರ್ಷ ಬೆಳಗಾವಿ ಜಿಲ್ಲಾಧಿಕಾರಿ ಆಗಿದ್ದ ನಿತೇಶ್‌ ಪಾಟೀಲ್‌ ಅವರನ್ನು ಸಣ್ಣ ಉದ್ದಿಮೆಗಳ ನಿರ್ದೇಶಕರಾಗಿ ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಇನ್ನು ನೂತನ‌ ಜಿಲ್ಲಾಧಿಕಾರಿ ಆಗಿ ಮೊಹಮ್ಮದ್ ರೋಷನ್ ಆಗಮಿಸಲಿದ್ದಾರೆ.
ಮೊಹಮ್ಮದ್ ರೋಷನ್ ಹೆಸ್ಕಾಂ ಎಂಡಿ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಮಹ್ಮದ್ ರೋಷನ್ ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬೇಕು ಹಾಗೂ ಒಳ್ಳೆಯ ಆಡಳಿತದ ಮೂಲಕ ಜನಸಾಮಾನ್ಯರ ಕಷ್ಟ-ಸುಖಕ್ಕೆ ಸ್ಪಂದಿಸುವ ಆಶಾಭಾವನೆಯಿಂದ ಕೇಂದ್ರ ಲೋಕಸೇವಾ ಆಯೋಗ ಪರೀಕ್ಷೆ ಬರೆದು ಯಶಸ್ಸು ಕಂಡವರು.
ಆಡಳಿತದಲ್ಲಿ ಸುಧಾರಣೆ ತರುವ ಮೂಲಕ ಜನಸಾಮಾನ್ಯರ ನೋವು ನಲಿವುಗಳಿಗೆ ಸ್ಪಂದಿಸುವ ಮಹತ್ವಾಕಾಂಕ್ಷೆ ಹೊಂದಿದವರು. ಅಜ್ಜ, ತಂದೆ, ತಾಯಿ ಸರ್ಕಾರಿ ಸೇವೆಯಲ್ಲಿದ್ದವರೇ. ಪ್ರಸ್ತುತ ಪತ್ನಿ, ಚಿಕ್ಕಪ್ಪ ಕೂಡ ಐಎಎಸ್ ಆಫೀಸರ್. ಹೀಗೆ ಕುಟುಂಬ ಸದಸ್ಯರೆಲ್ಲಾ ಒಂದಲ್ಲಾ ಒಂದು ಉನ್ನತ ಹುದ್ದೆ ಅಲಂಕರಿಸಿದ್ದಾರೆ.
ಮೊಹಮ್ಮದ್ ರೋಶನ್ ಅವರು ಹೈದರಾಬಾದ್ ಮೂಲದವರಾಗಿದ್ದು, ಇವರ ತಂದೆ-ತಾಯಿ ಇಬ್ಬರೂ ವೈದ್ಯರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹೈದರಾಬಾದ್‌ನಲ್ಲಿಯೇ ಮುಗಿಸಿದರು. ನಂತರ ಪದವಿಯಲ್ಲಿ ಇಂಜಿನಿಯರಿಂಗ್ ಹಾಗೂ ಎಂಬಿಎನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಕುಟುಂಬದವರೆಲ್ಲಾ ಸಿವಿಲ್ ಸರ್ವೀಸ್‌ನಲ್ಲಿ ಇದ್ದುದರಿಂದ ತಾನು ಕೂಡ ಒಮ್ಮೆ ಪ್ರಯತ್ನಿಸೋಣವೆಂದು ಇಂಜಿನಿಯರಿಂಗ್ 4ನೇ ವರ್ಷದಲ್ಲಿದ್ದಾಗ ಪರೀಕ್ಷೆಗೆ ಸಿದ್ಧತೆ ಶುರು ಮಾಡಿಕೊಂಡ ಅವರು ಪ್ರಥಮ ಪ್ರಯತ್ನದಲ್ಲಿ ಪ್ರಿಲಿಮ್ಸ್‌ನಲ್ಲಿ ಯಶಸ್ವಿಯಾದರೂ ಮುಖ್ಯ ಪರೀಕ್ಷೆಯಲ್ಲಿ ಆಗಲಿಲ್ಲ.