ನರಸೋಜಿರಾವ್ ಸಿಂಧೆ 114 ನೇ ಜಯಂತೋತ್ಸವ ಆಚರಣೆ
ಗೊಡಚಿ :ತೊರಗಲ್ಲ ಮಹಾರಾಜ ನರಸೋಜಿರಾವ ಶಿಂಧೆಯವರ 114ನೇ ಜಯಂತೋತ್ಸವನ್ನು ಗೊಡಚಿಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ಆಚರಿಸ ಲಾಯಿತು.
ಚಂದರಗಿಯ ಕ್ರೀಡಾ ಶಾಲೆಯಲ್ಲಿ ನಿರ್ಮಿಸಿರುವ ನರಸೋಜಿರಾವ್ ಶಿಂಧೆಯವರ ಪುತ್ಥಳಿಗೆ ಸಂಜಯ ಸಿಂಹ ಶಿಂಧೆ ಮಹಾರಾಜರು ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಶಾಲೆಯ ಸಿಬ್ಬಂದಿ ಸೇರಿ ಮಹಾರಾಜರ ಅಭಿಮಾನಿಗಳು ಉಪಸ್ಥಿತರಿದ್ದರು.
