130 ತಾಣಗಳಿಗೆ ವಿಸ್ತರಿಸುತ್ತಿರುವ ವಿಮಾನಯಾನ ಸೇವೆಗೆ ಪೂರಕವಾಗಿ, ಸಿನಿಮಾ ಪ್ರಿಯರಿಗೆ ʼಸಿನೆಮ್ಯಾಟಿಕ್‌ ಇನ್‌-ಫ್ಲೈಟ್‌ʼ ಅನುಭವ ಒದಗಿಸಲಿರುವ ಏರ್‌ಏಷ್ಯಾ
• ಸದ್ಯಕ್ಕೆ ಭಾರತದಿಂದ ಮಲೇಷ್ಯಾ ಮತ್ತು ಥೈಲ್ಯಾಂಡ್‌ಗೆ 22 ನೇರ ವಿಮಾನ ಸೇವೆ ನಿರ್ವಹಿಸುತ್ತಿರುವ ಏರ್‌ಏಷ್ಯಾ, ಇನ್ನೂ ನಾಲ್ಕು ಸೇವೆಗಳನ್ನು ಶೀಘ್ರದಲ್ಲೇ ಪ್ರಾರಂಭಿಸಲಿದೆ• ಭಾರತದಲ್ಲಿನ 12 ನಗರಗಳಾದ್ಯಂತ ಇರುವ 130 ಚಿತ್ರಮಂದಿರಗಳಲ್ಲಿ ವಿನೂತನ ಬಗೆಯ ʼಸಿನಿಮ್ಯಾಟಿಕ್‌ ಇನ್‌-ಫ್ಲೈಟ್‌ʼ ಅನುಭವ ಒದಗಿಸಲಿದ್ದು, ಸಿನಿಮಾ ಪ್ರಿಯರು ಏರ್‌ ಏಷ್ಯಾದ ವಿಮಾನ ಸಂಪರ್ಕ ಸೇವೆ ಇರುವ 130 ತಾಣಗಳ ಪೈಕಿ ಯಾವುದೇ ಒಂದು ತಾಣಕ್ಕೆ ಪ್ರಯಾಣ ಸೌಲಭ್ಯ ಗೆಲ್ಲುವ ಅವಕಾಶ ಪಡಯಲಿದ್ದಾರೆ
ಬೆಂಗಳೂರು:ನಿರಂತರವಾಗಿ 15 ವರ್ಷಗಳ ಕಾಲ ವಿಶ್ವದ ಅತ್ಯುತ್ತಮ ಅಗ್ಗದ ವಿಮಾನಯಾನ ಸಂಸ್ಥೆಯಾಗಿರುವ ಏರ್‌ಏಷ್ಯಾ, ಏಷ್ಯಾ ಮತ್ತು ಆಸ್ಟ್ರೇಲಿಯಾ ಮತ್ತಿತರ ಸುಂದರ ತಾಣಗಳನ್ನು ಅನ್ವೇಷಿಸಲು ಭಾರತದಿಂದ ಪ್ರಯಾಣಿಕರನ್ನು ಆಹ್ವಾನಿಸುತ್ತಿದೆ. ಸಂಸ್ಥೆಯು ಶೀಘ್ರದಲ್ಲೇ ಮಲೇಷ್ಯಾ ಮತ್ತು ಥಾಯ್ಲೆಂಡ್ ಮೂಲಕ ಭಾರತದಲ್ಲಿನ 16 ನಗರಗಳಿಗೆ ವಿಶ್ವದ 130 ಸ್ಥಳಗಳ ಸಂಪರ್ಕ ಕಲ್ಪಿಸಲಿದೆ.
ಸಂಸ್ಥೆಯ ಸೇವಾ ವಿಸ್ತರಣೆ ಯೋಜನೆಗೆ ಪೂರಕವಾಗಿ, ದೇಶದಾದ್ಯಂತ ಇರುವ ಆಯ್ದ ಚಿತ್ರ ಮಂದಿರಗಳಲ್ಲಿ ಚಲನಚಿತ್ರ-ವೀಕ್ಷಕರಿಗೆ ವಿನೂತನ ಬಗೆಯ ಅನುಭವ ಕಲ್ಪಿಸಲು ತನ್ನ ವೈವಿಧ್ಯಮಯ ಮತ್ತು ವಿಶಿಷ್ಟ ಸ್ಥಳಗಳನ್ನು ಪ್ರದರ್ಶಿಸಲು “ಸಿನಿಮ್ಯಾಟಿಕ್ ಇನ್-ಫ್ಲೈಟ್” ( -) ಅನುಭವವನ್ನು ಏರ್‌ಏಷ್ಯಾ ಒದಗಿಸಲಿದೆ.
ಚಲನಚಿತ್ರ ಮಂದಿರಗಳ ಜೊತೆಗಿನ ಈ ಸಹಯೋಗದ ಫಲವಾಗಿ ಮುಂದಿನ ಆರು ತಿಂಗಳಲ್ಲಿ 12 ನಗರಗಳಲ್ಲಿನ 130ಕ್ಕೂ ಹೆಚ್ಚು ಚಿತ್ರಮಂದಿರಗಳ ಮೂಲಕ ಏರ್‌ಏಷ್ಯಾ ವಿಮಾನಯಾನ ಸಂಸ್ಥೆಯು ಹೆಚ್ಚಿನ ಸಂಖ್ಯೆಯಲ್ಲಿ ವಿಮಾನ ಪ್ರಯಾಣಿಕರನ್ನು ಸಂಪರ್ಕಿಸಲಿದೆ. ಈ ಉಪಕ್ರಮದ ಭಾಗವಾಗಿ, ಚಲನಚಿತ್ರ-ವೀಕ್ಷಕರು ಏರ್‌ ಏಷ್ಯಾದ ವಿಮಾನಯಾನ ಸಂಪರ್ಕ ಇರುವ ತಾಣಗಳ ಪೈಕಿ ಯಾವುದಾದರೂ ನಗರಕ್ಕೆ ತೆರಳುವುದನ್ನು ಗೆಲ್ಲುವ ಅವಕಾಶ ಪಡೆಯಲಿದ್ದಾರೆ. ಈ ಅವಧಿಯಲ್ಲಿ, ಏರ್‌ಏಷ್ಯಾ ಪ್ರವಾಸಿಗರನ್ನು ಸೆಳೆಯುವ ನಗರಗಳು, ಪ್ರಶಾಂತ ಕಡಲತೀರಗಳು, ಐತಿಹಾಸಿಕ ಹೆಗ್ಗುರುತುಗಳು ಮತ್ತು ರೋಮಾಂಚಕ ಸ್ಥಳೀಯ ಸಂಸ್ಕೃತಿಗಳನ್ನು ವ್ಯಾಪಿಸಿರುವ ಏಷ್ಯಾ, ಆಸ್ಟ್ರೇಲಿಯಾ ಮತ್ತಿತರ ಸ್ಥಳಗಳನ್ನು ಪರಿಚಯಿಸುವ ಪ್ರವಾಸಿ ಮಾಹಿತಿ ಸೃಷ್ಟಿಸುವ 130ಕ್ಕೂ ಹೆಚ್ಚು ಸ್ಥಳೀಯರ ಜೊತೆಗೂ ಏರ್ಏಷ್ಯಾ ಸಹಯೋಗ ಹೊಂದಿರಲಿದೆ.
ಕೋವಿಡ್‌ ಪಿಡುಗಿನ ನಂತರದ ಪ್ರವಾಸೋದ್ಯಮದ ಚೇತರಿಕೆಗೆ ಬೆಂಬಲ ನೀಡುವ ಉದ್ದೇಶಕ್ಕೆ, ಏರ್‌ಏಷ್ಯಾ 2024 ರಲ್ಲಿ ಭಾರತಕ್ಕೆ ಹೊಸ ವಿಮಾನ ಮಾರ್ಗಗಳನ್ನು ವಿಸ್ತರಿಸಿದ್ದು, ಕಂಪನಿಯ ಏಷ್ಯಾದಲ್ಲಿನ ಎರಡು ಪ್ರಮುಖ ಕೇಂದ್ರಗಳಾದ ಮಲೇಷ್ಯಾದ ಕ್ವಾಲಾಲಂಪುರ ಮತ್ತು ಥಾಯ್ಲೆಂಡ್‌ನ ಬ್ಯಾಂಕಾಕ್‌ಗೆ ನೇರ ಸಂಪರ್ಕವನ್ನು ಕಲ್ಪಿಸಿದೆ. ಇದು ವಿಶ್ವದಾದ್ಯಂತ 130 ಸ್ಥಳಗಳಿಗೆ ಮಹಾದ್ವಾರವಾಗಿ ಕಾರ್ಯನಿರ್ವಹಿಸಲಿದೆ. ಬೆಂಗಳೂರು, ಅಹಮದಾಬಾದ್, ವಿಶಾಖಪಟ್ಟಣ, ತಿರುವನಂತಪುರಂ, ಚೆನ್ನೈ, ತಿರುಚಿನಾಪಳ್ಳಿ ಮತ್ತು ಹೈದರಾಬಾದ್ ಸೇರಿದಂತೆ ವಿವಿಧ ನಗರಗಳಿಗೆ ವ್ಯಾಪಕ ಸೇವಾ ಜಾಲ ಒದಗಿಸಲಿದೆ. ಮುಂಬರುವ ವಾರಗಳಲ್ಲಿ ಗುವಾಹಟಿ, ಕೋಯಿಕೋಡ್ ಮತ್ತು ಲಖನೌದಿಂದ ಕ್ವಾಲಾಲಂಪುರಕ್ಕೆ ಮತ್ತು ತಿರುಚಿನಾಪಳ್ಳಿಯಿಂದ ಬ್ಯಾಂಕಾಕ್‌ಗೆ ಹೊಸ ವಿಮಾನ ಸೇವೆ ಪ್ರಾರಂಭಿಸಲಿದೆ.