ಡೆಂಘೀ ನಿಯಂತ್ರಣ ಮುಂಜಾಗ್ರತ ಸಭೆ
ಕೊಲ್ಹಾರ:ಡೆಂಘೀ ನಿಯಂತ್ರಣ ಕುರಿತು ಮುಂಜಾಗ್ರತ ಕ್ರಮವಾಗಿ ತಹಶೀಲ್ದಾರ ಎಸ್.ಎಸ್ ನಾಯಕಲಮಠ ಹಾಗೂ ತಾಲೂಕ ಪಂಚಾಯತಕಾರ್ಯ ನಿರ್ವಾಹಕ ಅಧಿಕಾರಿ ಸುನೀಲ್ ಮದ್ದೀನ ನೇತೃತ್ವದಲ್ಲಿ ಸೋಮವಾರ ಪಟ್ಟಣ ಪಂಚಾಯತ ಕಾರ್ಯಾಲಯದಲ್ಲಿ ತಾಲೂಕ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ಜರುಗಿತು.
ಡೆಂಘೀ ನಿಯಂತ್ರಣದ ಕುರಿತು ಮುಂಜಾಗ್ರತವಾಗಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸ ಲಾಯಿತು. ತಹಸೀಲ್ದಾರ ಎಸ್.ಎಸ್ ನಾಯಕ ಲಮಠ ಹಾಗೂ ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಸುನೀಲ್ ಮದ್ದೀನ ಮಾತನಾಡಿ ಕೊಲ್ಹಾರ ಪಟ್ಟಣ ಸಹಿತ ತಾಲೂಕ ವ್ಯಾಪ್ತಿ ಯಲ್ಲಿನ ಪ್ರತಿ ಗ್ರಾಮಗಳಲ್ಲಿ ಫಾಗಿಂಗ್ ಮಾಡುವುದು, ಬೇಕಾಬಿಟ್ಟಿಯಾಗಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸುವುದು, ಡೆಂಘೀ ನಿಯಂತ್ರಣ ಕುರಿತು ಗ್ರಾಮಗಳಲ್ಲಿ ಡಂಗೂರದ ಮೂಲಕ ಹಾಗೂ ಘನತ್ಯಾಜ್ಯ ವಿಲೇವಾರಿ ವಾಹನದ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು, ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಡೆಂಗ್ಯೂ ತಡೆಗಟ್ಟಲು ವಿವಿಧ ಕ್ರಮ ಕೈಗೊಳ್ಳ ಬೇಕು ಹಾಗೂ ಪ್ರತಿ ಶುಕ್ರವಾರ ಮತ್ತು ಶನಿವಾರ ವಿಶೇಷ ಅಭಿಯಾನವನ್ನು ಹಮ್ಮಿ ಕೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ನಿರ್ಮಲಾ ಸುರಪೂರ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶ್ರೀಮತಿ ಲಕ್ಷ್ಮೀ ತೆಲ್ಲೂರ, ಪ.ಪಂ ಮುಖ್ಯಾದಿಕಾರಿ ಉಮೇಶ ಚಲವಾದಿ, ಆರೋಗ್ಯ ನಿರೀಕ್ಷಕ ಆರ್.ಎಮ್ ಚಿಂಚೂಳ್ಳಿ ಹಾಗೂ ತಾಲೂಕ ಮಟ್ಟದ ವಿವಿಧ ಇಲಾಖೆಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.