ಟೆಂಡರ್ ಅವ್ಯವಹಾರದಿಂದ ನಮ್ಮ ಆಡಳಿತದ ಬಗ್ಗೆ ಕೆಟ್ಟ ಹೆಸರು: ಗಜಾನನ ವೈದ್ಯ
ಶಿರಸಿ:ಉತ್ತರ ಕನ್ನಡ ಜಿಲ್ಲೆಯ ಪ್ರತಿಷ್ಟಿತ ಸಹಕಾರಿ ಯಲ್ಲಾಪುರ ಟಿಎಸ್ ಎಸ್ ನಲ್ಲಿ ನಡೆದ ಟೆಂಡರ್ ಅವ್ಯವಹಾರದ ಬಗ್ಗೆ ನಮ್ಮ ಆಡಳಿತದ ಬಗ್ಗೆ ಕೆಟ್ಟ ಹೆಸರು ಬರುವಂತೆ ಮಾಡುತ್ತಿದ್ದಾರೆ. ನಾವು ನಮ್ಮ ಮೇಲಿನವರ ಗಮನಕ್ಕೆ ಇದನ್ನು ತಂದಿದ್ದೇವೆ ಎಂದು ಸಂಸ್ಥೆಯ ಅಧ್ಯಕ್ಷ ಗಜಾನನ ವೈದ್ಯ ಹೇಳಿದರು.
ಅವರು ಸಂಸ್ಥೆಯ ಆವಾರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಎಲ್ಲದಕ್ಕೂ ಹೊಣೆ ಯಲ್ಲಾಪುರದ ಎಪಿಎಂಸಿ ಯೇ ಆಗಿದೆ ಎಂದು ಹೇಳಿದರು.