ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮುಂದುವರೆಯಲಿ: ಅಹಿಂದ ವಕೀಲರ ಒಕ್ಕೂಟ ಆಗ್ರಹ
ತುಮಕೂರು:ಅಹಿಂದ ಚಿಂತನೆಯುಳ್ಳ ಅಹಿಂದ ವರ್ಗಗಳ ನಾಯಕ ಸಿದ್ದರಾಮಯ್ಯ ರಾಜ್ಯ ಕಂಡ ಅತ್ಯಂತ ಪ್ರಭಾವಿ ಮತ್ತು ಕ್ರಿಯಾಶೀಲ ಅಹಿಂದ ನಾಯಕರಾಗಿದ್ದು, ಮುಖ್ಯಮಂತ್ರಿಯಾಗಿ 5 ವರ್ಷಗಳ ಕಾಲ ಅವರೇ ಮುಂದುವರೆಯಲಿ ಎಂದು ಜಿಲ್ಲಾ ಅಹಿಂದ ವಕೀಲರ ಒಕ್ಕೂಟ ಆಗ್ರಹಿಸಿದೆ.
ರಾಜ್ಯ ವಿಧಾನಸಭೆಯಲ್ಲಿ ಅತಿ ಹೆಚ್ಚು ಬಹು ಮತ ಪಡೆದಿದ್ದು, ಅವರ ದೂರ ದೃಷ್ಟಿ ಮತ್ತು ಪ್ರಗತಿ ಪರ ಚಿಂತನಗಳು ಈ ರಾಜ್ಯದ ಅಭಿವೃದ್ಧಿಗೆ ಹಾಗೂ ಧಮನಕ್ಕೊಳಗಾದ ಹಲವಾರು ಅತಿ ಸೂಕ್ಷ್ಮ ಅಲ್ಪಾಸಂಖ್ಯಾ ಜನಾಂಗಗಳ ಪರವಾಗಿ ತಮ್ಮ ಅಭಿವೃದ್ಧಿ ಪರ ಚಿಂತನೆಯೊಂದಿಗೆ ಸರ್ಕಾರವನ್ನು ಮುನ್ನಡೆ ಸುತ್ತಿರುವುದನ್ನು ಕಂಡ ಪಟ್ಟಭದ್ರ ಹಿತಾಸಕ್ತರು ಸಿದ್ದರಾಮಯ್ಯ ನಾಯಕತ್ವವನ್ನು ಸಹಿಸದೇ ರಾಜಕೀಯ ಷಡ್ಯಂತ್ರದಿಂದ ಇಲ್ಲಸಲ್ಲದ ಆರೋಪ ಗಳನ್ನು ಮಾಡುತ್ತಿರುವುದನ್ನು ಅಹಿಂದ ವರ್ಗ ಖಂಡಿಸುತ್ತದೆ.
ಈ ರಾಜ್ಯದಲ್ಲಿ ಪರಿಪೂರ್ಣ ಪ್ರಗತಿ ಹಾಗೂ ಅಹಿಂದ ವರ್ಗಗಳ ಏಳಿಗೆಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮುಂದುವರೆಯ ಬೇಕು. ಹಾಗೂ ಮುಂದಿನ ದಿನಗಳಲ್ಲಿ ಅವರ ವಿರುದ್ಧ ಪಿತೂರಿ ಮಾಡುವವರ ವಿರುದ್ದ ಬಹಿಷ್ಕಾರ ಹಾಗೂ ಮುಷ್ಕರ ಮೂಲಕ ಪಟ್ಟಭದ್ರ ಹಿತಾಸಕ್ತರ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಅಹಿಂದ ವಕೀಲರ ಒಕ್ಕೂಟದ ಪದಾಧಿಕಾರಿಗಳು ತಿಳಿಸಿದ್ದಾರೆ.