ಮಾಲ್ ನಿರ್ಮಾಣಕ್ಕೆ ವಿರೋಧ: ಹಾಸ್ಯಾಸ್ಪದ
ತುಮಕೂರು:ಸರಕಾರ ಮತ್ತು ಜಿಲ್ಲಾಡಳಿತದಿಂದ ಜೆ.ಸಿ.ರಸ್ತೆಯಲ್ಲಿರುವ ಹಳೆಯ ಸಿದ್ದಿವಿನಾಯಕ ಹೂವು,ಹಣ್ಣು ಮತ್ತು ತರಕಾರಿ ಮಾರುಕಟ್ಟೆ ಪ್ರದೇಶದಲ್ಲಿ ಮಾಲ್ ನಿರ್ಮಾಣ ಮಾಡಲು ಶಂಕು ಸ್ಥಾಪನೆ ಮಾಡಿರುವುದು ಬಿಜೆಪಿ ಇಬ್ಬರು ಶಾಸಕರು ವಿರೋಧಿಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ನಗರಪಾಲಿಕೆ ವಿರೋಧಪಕ್ಷದ ಮಾಜಿ ನಾಯಕ ಜೆ.ಕುಮಾರ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,೨೦೧೯ರಲ್ಲಿ ಸ್ಮಾರ್ಟ್‌ಸಿಟಿಯಿಂದ ಈ ಯೋಜನೆ ರೂಪಿಸಿದ ಸಂದರ್ಭದಲ್ಲಿ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಪಕ್ಷವೇ ಅಧಿಕಾರದಲ್ಲಿತ್ತು. ಇಂದು ವಿರೋಧ ಮಾಡುತ್ತಿರುವ ಶಾಸಕರೇ ಅಂದು ಸಹ ಶಾಸಕರಾಗಿದ್ದರು. ಅಂದೇ ಯೋಜನೆಯನ್ನು ರದ್ದು ಪಡಿಸಬಹುದಿತ್ತು.ಆದರೆ ಅಂದು ಸರಕಾರ ರೂಪಿಸುವ ಎಲ್ಲಾ ಯೋಜನೆಗಳನ್ನು ಒಪ್ಪಿಕೊಂಡು, ಈಗ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ ಎಂಬ ಕಾರಣಕ್ಕೆ ವಿರೋಧಿಸು ತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.