ಅಪ್ಪ ಪ್ರಶಸ್ತಿ ಪ್ರದಾನ ಆ.4ಕ್ಕೆ
ತುಮಕೂರು:ನಗರದ ಕನ್ನಡ ಭವನದಲ್ಲಿ ಆ.4ಕ್ಕೆ “ಅಪ್ಪ ಪ್ರಶಸ್ತಿ” ಪ್ರದಾನ ಹಾಗೂ ರಾಜ್ಯಮಟ್ಟದ “ಮುಂಗಾರು ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ.
ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡುವರು. ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಶಾಸಕ ನಂಜಯ್ಯನಮಠ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಕ.ಸಾ.ಪ.ನಿಕಟಪೂರ್ವ ಅಧ್ಯಕ್ಷೆ ಬಾ.ಹ.ರಮಾಕುಮಾರಿ,ಜಿಲ್ಲಾಕ.ಸ.ಪ.ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಮೈಸೂರು ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಡಿ.ಅಶೋಕ್ ಕುಮಾರ್ ಹಾಗೂ ಹಿರಿಯ ಲೇಖಕ ಅಮ್ಮಸಂದ್ರ ಸುರೇಶ್ ಅಗಮಿ ಸುವರು. ಸಮಾರಂಭದ ಅಧ್ಯಕ್ಷತೆಯನ್ನು ಸಾಹಿತಿ ಹಾಗೂ ಸಂಘಟಕ ಟಿ.ಸತೀಶ್ ಜವರೇಗೌಡ ವಹಿಸಲಿದ್ದಾರೆ.
ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ನಂತರ ಕವಿಗೋಷ್ಠಿಯನ್ನು ಆಯೋಜಿಸಲಾಗಿದೆ. ಈ ಗೋಷ್ಠಿಯ ಅಧ್ಯಕ್ಷತೆಯನ್ನು ಕವಯತ್ರಿ ಹಾಗೂ ಕರ್ನಾಟಕ ನಾಟಕ ಅಕಾಡೆಮಿಯ ಸಹ ಸದಸ್ಯೆ ಮಮತಾ ಅರಸೀಕೆರೆ ವಹಿಸಲಿದ್ದು,ಹಿರಿಯ ಕವಯತ್ರಿ ಡಾ.ಶೈಲಾನಾಗರಾಜು ಚಾಲನೆ ನೀಡುವರು.
ಬರಹಗಾರ ಮಲ್ಲಿಕಾರ್ಜುನ ಆರಾಧ್ಯ ಹಾಗೂ ಸಾಮಾಜಿಕ ಹೋರಾಟಗಾರ ನರುಗನಹಳ್ಳಿ ಕೆಂಪೇಗೌಡ ಮುಖ್ಯ ಅತಿಥಿಗಳಾಗಿರುತ್ತಾರೆ. ೪೦ ಮಂದಿ ಕವಿಗಳು ಕಾವ್ಯವಾಚನ ಮಾಡಲಿದ್ದಾರೆ ಎಂದು “ಅಪ್ಪ ಪ್ರಶಸ್ತಿ”ಸಮಿತಿಯ ಸಂಚಾಲಕ ಹಡವನಹಳ್ಳಿ ವೀರಣ್ಣಗೌಡ ತಿಳಿಸಿದ್ದಾರೆ.