ಉಳ್ಳವರು ಸರಕಾರಿ ಶಾಲೆಗಳಿಗೆ ಸಹಾಯ ಮಾಡಬೇಕು
ತುಮಕೂರು:ಉಳ್ಳವರು ಸರಕಾರಿ ಶಾಲೆಗಳಿಗೆ ಸಹಾಯ ಮಾಡಬೇಕು ಎಂದು‌ ಮಾಜಿ ಸಂಸದ ಜಿ.ಎಸ್.ಬಸವರಾಜು ಕರೆ ನೀಡಿದ್ದಾರೆ.
ನಗರದ ಎಂಪ್ರೆಸ್ ಕೆಪಿಎಸ್ ಶಾಲೆಯ ಪ್ರತಿಭಾನ್ವಿತ ಮಕ್ಕಳಿಗೆ ಪ್ಯೂಚರ್‌ಜೆನ್ ಸ್ಕಾರ್ಸ್ ಸಂಸ್ಥೆ ಕ್ಯಾಲಿಫೋರ್ನಿಯಾ, ಅಮೇರಿಕ ಇವರು ಆಯೋಜಿಸಿದ್ದ ಪ್ರತಿಭಾಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಭಾರತದಿಂದ ಅಮೇರಿಕಾಕ್ಕೆ ಹೋದ ಲಕ್ಷಾಂತರ ಜನರು ಅಲ್ಲಿ ಚೆನ್ನಾ ಗಿಯೇ ಬದುಕುತಿದ್ದಾರೆ. ಅಮೇರಿಕಾ ಎಂಬುದು ಭಾರತೀಯರ ಬುದ್ದಿವಂತಿಕೆ,ಅಮೇರಿಕಾದ ಸಂಪತ್ತು ಎನ್ನುವಂತ್ತಾಗಿದೆ ರ‍್ಯಾ0ಕ್ ನಜೀರ್ ಅವರ ಕುಟುಂಬದಂತೆ ತನ್ನ ತಾಯ್ನಡಿಗೆ ಕೈಲಾದ ಸಹಾಯ ಮಾಡಿದರೆ, ಇಲ್ಲಿನ ಮಕ್ಕಳ ಭವಿಷ್ಯ ಸಹ ಉಜ್ವಲಗೊಳ್ಳಲಿದೆ ಎಂದರು.
ಎಂಪ್ರೆಸ್ ಕೆಪಿಎಸ್ ಶಾಲೆಯ ಪ್ರಾಂಶುಪಾಲ ಮಲ್ಲಯ್ಯ ಮಾತನಾಡಿ,ಅಮೇರಿಕಾದ ಒಂದು ಸಂಸ್ಥೆ ನಮ್ಮ ಶಾಲೆಯನ್ನು ಗುರುತಿಸಿ,ಇಲ್ಲಿನ ಬಡ,ಮದ್ಯಮ ವರ್ಗದ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ನೆರವು ನೀಡುತ್ತಿರುವುದು ಹೆಮ್ಮೆಯ ವಿಚಾರ. ಬಡವರು, ಹಿಂದುಳಿದ ವರ್ಗದವರ ಮಕ್ಕಳೇ ಓದುತ್ತಿರುವ ಈ ಶಾಲೆಯ ಅಭಿವೃದ್ದಿಗಾಗಿ ಪ್ಯೂಚರ್ ಜ್ಹೆನ್ ಸಂಸ್ಥೆಯಿAದ ಹೆಚ್ಚಿನ ನೆರವು ನಿರೀಕ್ಷಿಸುವುದಾಗಿ ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಶಾಸಕ ಡಾ.ರಫೀಕ್ ಅಹಮದ್, ನಜೀರ್ ಅಹಮದ್ ಅವರ ಮೊಮ್ಮಗಳಾದ ನೈಲಾ ಅಹಮದ್ ನೇತೃತ್ವದ ಪ್ಯೂಚರ್‌ಜೆನ್ ಸ್ಕಾರ‍್ಸ್ ಸಂಸ್ಥೆ ಅಮೇರಿಕ ಮತ್ತು ಅಫ್ರಿಕಾದ ಬಡ ಮತ್ತು ಗ್ರಾಮೀಣ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಸಹಾಯ ನೀಡುತ್ತಾ ಸಮಾಜಸೇವೆ ಮಾಡುತ್ತಾ ಬಂದಿದೆ. ಎಂಪ್ರೆಸ್ ಕೆಪಿಎಸ್ ಶಾಲೆಯ ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆ ಹಾಗೂ ಪಿಯು ಸೇರಿ ಒಟ್ಟು 30 ಪ್ರತಿಭಾನ್ವಿತರನ್ನು ಗುರುತಿಸಿ, ಅವರಿಗೆ ನಗದು ಪುರಸ್ಕಾರ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಜನರಿಗೆ ಸಹಾಯ ದೊರೆಯಲಿದೆ ಎಂದರು. ಪ್ರೋತ್ಸಾಹ ಧನ ವಿತರಿಸಿ ಹೀನಾ ಕೌಸರ್ ಮಾತನಾಡಿದರು.
ಎಂಪ್ರೆಸ್ ಕೆಪಿಎಸ್ ಶಾಲೆಯ ಎಲ್ಲಾ ವಿಭಾಗಗಳ ಆಯ್ದ 30 ಮಕ್ಕಳಿಗೆ ನೆನಪಿನ ಕಾಣಿಕೆ ಜತೆಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಮುನೀರ್ ಅಹ್ಮದ್, ಎಂಪ್ರೆಸ್ ಕೆಪಿಎಸ್ ಶಾಲೆಯ ಎಲ್ಲಾ ವಿಭಾಗಗಳ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರುಗಳು ಉಪಸ್ಥಿತರಿದ್ದರು.