ಫಾಸ್ಟ್‌ಟ್ಯಾಗ್‌ ನಿಯಮಗಳಲ್ಲಿ ಇಂದಿನಿಂದ ಬದಲಾವಣೆ
ಬೆಂಗಳೂರು:ಫಾಸ್ಟ್‌ಟ್ಯಾಗ್‌ ನಿಯಮಗಳಲ್ಲಿ ಇಂದಿನಿಂದ ಹೊಸ ಬದಲಾವಣೆಗಳಾಗುತ್ತಿದ್ದು, ಟೋಲ್‌ ಪಾವತಿಗೆ ಪ್ರಕ್ರಿಯೆಯನ್ನು ಮತ್ತಷ್ಟು ಸರಳ ಗೊಳಿಸುವ ಹಾಗೂ ವಾಹನ ದಟ್ಟಣೆ ತಗ್ಗಿಸಲುವ ನಿಟ್ಟಿನಲ್ಲಿ ಕೆವೈಸಿ ಕಡ್ಡಾಯ ಮಾಡಲಾಗಿದೆ.
ನಾಲ್ಕು ಚಕ್ರ ಹಾಗೂ ಅದಕ್ಕಿಂತ ಮೇಲ್ಪಟ್ಟ ಸಾಮರ್ಥ್ಯದ ಎಲ್ಲಾ ವಾಹನಗಳು ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಇಂದಿನಿಂದ ಈ ಪ್ರಕ್ರಿಯೆ ಆರಂಭವಾಗಲಿದೆ. ಫಾಸ್ಟ್‌ಟ್ಯಾಗ್‌ ವಿತರಿಸುವ ಕಂಪನಿಗಳು ಈ ವರ್ಷ ಅಕ್ಟೋಬರ್‌ 31 ರೊಳಗೆ ತನ್ನ 3 ರಿಂದ 5 ವರ್ಷದ ಎಲ್ಲಾ ಗ್ರಾಹಕರಿಗೂ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಗಡುವು ನೀಡಲಾಗಿದೆ.
ಪ್ರಮುಖ ಹೊಸ ನಿಯಮಗಳು ಏನು?
ಫಾಸ್ಟ್‌ಟ್ಯಾಗ್‌ ಕಂಪನಿಗಳು ಆದೇಶಗಳಿಗೆ ಬದ್ಧವಾಗಿರಬೇಕು
ಫಾಸ್ಟ್‌ಟ್ಯಾಗ್‌ ಕಂಪನಿಗಳು ಆದೇಶಗಳಿಗೆ ಬದ್ಧವಾಗಿರಬೇಕು. ಪ್ರಮುಖವಾಗಿ ಮೂರರಿಂದ ಐದು ವರ್ಷ ಫಾಸ್ಟ್‌ಟ್ಯಾಗ್‌ಗಳಿಗೆ ಕೆವೈಸಿ ಅಪ್‌ಡೇಟ್ ಮಾಡ ಬೇಕು. ಐದು ವರ್ಷಕ್ಕಿಂತ ಹಳೆ ಫಾಸ್ಟ್‌ಟ್ಯಾಗ್‌ ಇದ್ದರೆ ಅದನ್ನು ಸಂಪೂರ್ಣ ಬದಲಾಯಿಸಬೇಕು. ಈ ಕಾರ್ಯವನ್ನು ಅಕ್ಟೋಬರ್ 31 ರೊಳಗೆ ಪೂರ್ಣ ಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಕಂಪನಿಗಳಿಗೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಸೂಚಿಸಿದೆ. ಇತ್ತ ವಾಹನ ಮಾಲೀಕರು ಕೆವೈಸಿಯನ್ನು ಅಕ್ಟೋಬರ್ 31 ರೊಳಗೆ ಪೂರ್ಣಗೊಳಿಸಿಕೊಳ್ಳಬೇಕಿದೆ. ಇಲ್ಲವಾದರೆ ದಂಡ ಬೀಳುವ ಅಥವಾ ಫಾಸ್ಟ್‌ಟ್ಯಾಗ್‌ ನಿಷ್ಕ್ರಿಯವಾಗುವ ಸಾಧ್ಯತೆ ಇದೆ.
ಫಾಸ್ಟ್‌ಟ್ಯಾಗ್‌ ಕೆವೈಸಿ ಮಾಡಿಸಲು ಬೇಕಾಗುವ ದಾಖಲೆಗಳು?
ಟೋಲ್ ಶುಲ್ಕ ಪ್ರತಿ ವರ್ಷ ಹೆಚ್ಚಾಗುತ್ತದೆ. ಇದರಂತೆ ಏಪ್ರಿಲ್ 1ರಿಂದ ಪರಿಷ್ಕೃತ ಶುಲ್ಕ ಜಾರಿಯಾಗಬೇಕಿತ್ತು. ಈ ಬಾರಿ ಮೂರು ತಿಂಗಳು ತಡವಾಗಿ ಕಳೆದ ತಿಂಗಳು ಬಹುತೇಕ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಹೆಚ್ಚಳ ಮಾಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಆದೇಶ ಮಾಡಿದೆ. ಜೂನ್‌ನಿಂದ ಎಲ್ಲಾ ಟೋಲ್‌ಗಳ ಶುಲ್ಕ ಶೇ.5 ರಷ್ಟು ಹೆಚ್ಚಳವಾಗಿದೆ.