ನಾಳೆ ಮಳೆಹಾನಿ ಪ್ರದೇಶಗಳಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಭೇಟಿ
ಶಿವಮೊಗ್ಗ:ಬೇಳೂರು ಗೋಪಾಲಕೃಷ್ಣ ಅವರು ಬುಧವಾರ ಇಡೀ ದಿನ ಸಾಗರ ನಗರದ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.
ಮಳೆಯಿಂದ ಬಿದ್ದ ಮನೆಗಳನ್ನು ವೀಕ್ಷಣೆ ಮಾಡಲಿದ್ದಾರೆ.
ವಿದೇಶಕ್ಕೆ ತೆರಳಿದ್ದ ಶಾಸಕ ಬೇಳೂರು ಗೋಪಾಲಕೃಷ್ಣ ಬೆಂಗಳೂರಿಗೆ ಮರಳಿದ್ದು, ಮಧ್ಯರಾತ್ರಿ ಸಾಗರಕ್ಕೆ ಆಗಮಿಸಲಿದ್ದಾರೆ. ನಾಳೆ ಬೆಳಿಗ್ಗೆ 8 ಗಂಟೆಯಿಂದಲೇ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.
ಸಾಗರದ ಗಾಂಧಿನಗರ, ಜನ್ನತ್ ನಗರ, ಎ.ಕೆ ಕಾಲೋನಿ, ಎಸ್ ಎನ್ ನಗರಗಳಲ್ಲಿ ಮಳೆಯಿಂದಾಗಿ ಹಾನಿಗೊಂಡಿರುವ ಮನೆಗಳನ್ನು ವೀಕ್ಷಣೆ ಮಾಡಲಿದ್ದಾರೆ.
ಈ ಬಳಿಕ ಅಣಲೇಕೊಪ್ಪದ ಸ್ತ್ರೀ ಶಕ್ತಿ ಭವನದಲ್ಲಿ ಸಾಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿರುವ ಪತ್ರಿಕಾ ದಿನಾಚಕರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದಾದ ಬಳಿಕ ಮಧ್ಯಾಹ್ನ ಮತ್ತೆ ತಮ್ಮ ಮಳೆಹಾನಿ ಪ್ರದೇಶಗಳಿಗೆ ಭೇಟಿ ಮುಂದುವರೆಸಲಿರುವ ಅವರು, ಚಂದ್ರಮಾವಿನ ಕೊಪ್ಪಲು, ಜೆಪಿ ನಗರ, ಸುಭಾಷ್ ನಗರ, ಅರಮನೆಕೇರಿ, ಎಲ್ ಬಿ ನಗರ, ರೈಲ್ವೆ ಸ್ಟೇಷನ್ ರಸ್ತೆ, ಸೊರಬ ರಸ್ತೆ ಹಾಗೂ ಮಾರಿಕಾಂಬ ರಸ್ತೆಗಳಲ್ಲಿ ಮಳೆಯಿಂದ ಹಾನಿಗೊಂಡ ಮನೆಗಳನ್ನು ವೀಕ್ಷಿಸಿ, ಸಂತ್ರಸ್ತರಿಗೆ ಸಾಂತ್ವಾನ ಹೇಳಿ, ಪರಿಹಾರ ನೀಡಲಿದ್ದಾರೆ.