ಸಿದ್ದರಾಮಯ್ಯ ಅವರು ವೈಯಕ್ತಿಕವಾಗಿ ಹೋರಾಟ ಮಾಡಬೇಕೇ ಹೊರತು, ಸಿಎಂ ಆಗಿಯಲ್ಲ
ಬೆಂಗಳೂರು:ಮುಡಾ ಹಗರಣ ಸಿದ್ದರಾಮಯ್ಯ ವಿರುದ್ಧ ವೈಯಕ್ತಿಕ ಆರೋಪವಾಗಿದ್ದು ಅವರು ಒಬ್ಬ ವ್ಯಕ್ತಿಯಾಗಿ ಹೋರಾಡಬೇಕೇ ಹೊರತು ಸಿಎಂ ಆಗಿ ಅಲ್ಲ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್‌ ಸಿಂಗ್​ ಕಿಡಿಕಾರಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿನಡೆದಿದೆ ಎನ್ನಲಾದ ಹಗರಣದ ಆರೋಪಕ್ಕೆ ಸಂಬಂಧಿಸಿದಂತೆ ಇದೀಗ ಸಿಎಂ ಸಿದ್ದರಾಮಯ್ಯವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ ಕೊಟ್ಟಿದ್ದಾರೆ.
ಈ ವಿಚಾರವಾಗಿ ಸದ್ಯ ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಯಾಗಿದೆ.
ಮುಡಾ ಹಗರಣ ಸಿದ್ದರಾಮಯ್ಯ ಸೇರಿದಂತೆ ಅವರ ಪತ್ನಿ ಮತ್ತು ಕುಟುಂಬದ ವಿರುದ್ಧದ ಸಂಪೂರ್ಣವಾಗಿ ವೈಯಕ್ತಿಕ ಆರೋಪವಾಗಿದೆ. ಇದು ಅವರ ಒಡೆತನದ ಖಾಸಗಿ ಭೂಮಿಗೆ ಸಂಬಂಧಿಸಿರುವುದು. ಹಾಗಾಗಿ ಅವರು ವೈಯಕ್ತಿಕವಾಗಿ ಹೋರಾಟ ಮಾಡಬೇಕೇ ಹೊರತು, ರಾಜ್ಯ ಸರ್ಕಾರದ ಮುಖ್ಯಮಂತ್ರಿ ಆಗಿ ಅಲ್ಲ. ಇದರ ವ್ಯತ್ಯಾಸ ಸಿಎಂ ಅವರಿಗೆ ತಿಳಿದಿದೆ ಎಂದು ನನಗೆ ಖಾತ್ರಿಯಿದೆ ಎಂದು ಹೇಳಿದ್ದಾರೆ.
ಪ್ರಾಸಿಕ್ಯೂಷನ್ ಅನುಮತಿ ಕೋರಿ ರಾಜಭವನದ ಕದ ತಟ್ಟಿದ್ದರು. ಇವರ ದೂರು ಪರಿಗಣಿಸಿದ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಇಂದು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಅನುಮತಿ ಬೆನ್ನಲ್ಲೇ ದೂರುದಾರ ಅಬ್ರಾಹಿಂ ರಾಜ್ಯಪಾಲರನ್ನ ಭೇಟಿ ಆಗಿದ್ದಾರೆ.