: ಕಡೆಯ ಶ್ರಾವಣ ಶನಿವಾರ ಶನಿದೇವರಿಗೆ ವಿಶೇಷ ಪೂಜೆ
ಗುಬ್ಬಿ:ಪಟ್ಟಣದ  ಕೆಇಬಿ ಮುಂಭಾಗ ಎನ್ ಹೆಚ್ 206 ರಲ್ಲಿ ಪ್ರತಿಷ್ಠಾಪನೆಗೊಂಡಿರುವ ಶ್ರೀ ಶನೇಶ್ವರ ಸ್ವಾಮಿಯವರ ದೇವಾಲಯದಲ್ಲಿ ಶ್ರಾವಣ ಮಾಸದ ಕೊನೆಯ ಶನಿವಾರ ದೇವಾಲಯವು ತಳಿರು ತೋರಣ ಹೂಗಳಿಂದ ಅಲಂಕೃತಗೊಂಡು ಪೂಜಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು.