 : ಕೆಲಸ ಸಿಕ್ಕಿಲ್ಲ ಅಂತ ಬಿಎಂಟಿಸಿ ಕಂಡಕ್ಟರ್​ಗೆ ಚಾಕುವಿನಿಂದ ಇರಿದ ಸೈಕೋ ಪ್ರಯಾಣಿಕ!
ಬೆಂಗಳೂರು: ತನಗೆ ಇಂಟರ್‌ವ್ಯೂನಲ್ಲಿ ಕೆಲಸ ಸಿಕ್ಕಿಲ್ಲ ಎಂದು ಹತಾಶನಾದ ಸೈಕೋ ಪ್ರಯಾಣಿಕನೊಬ್ಬ ತನಗೆ ಯಾವ ರೀತಿಯಲ್ಲೂ ಸಂಬಂಧವೇ ಇಲ್ಲದ ಬಿಎಂಟಿಸಿ ಕಂಡಕ್ಟರ್‌ ( ) ಒಬ್ಬರಿಗೆ ಸಿಕ್ಕಸಿಕ್ಕಂತೆ ಚಾಕುವಿನಿಂದ (,  ) ಇರಿದಿದ್ದಾನೆ. ತೀವ್ರವಾಗಿ ಗಾಯಗೊಂಡ ಕಂಡಕ್ಟರ್‌ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಘಟನೆ ಬೆಂಗಳೂರಿನ ( ) ವೈಟ್​ಫೀಲ್ಡ್ ಬಳಿಯ  ಬಸ್ ಸ್ಟಾಪ್ ಬಳಿ ನಡೆದಿದೆ. ನಿನ್ನೆ ಸಂಜೆ ವೈಟ್ ಫೀಲ್ಡ್ ಬಳಿಯ ಐಟಿಪಿಎಲ್ ಬಸ್ ಸ್ಟಾಪ್ ನಲ್ಲಿ - 57-F0015 ವೋಲ್ವೋ ಬಸ್ ಕಂಡಕ್ಟರ್ ಯೋಗೇಶ್​ಗೆ ಅಪರಿಚಿತ ವ್ಯಕ್ತಿ ಎರಡ್ಮೂರು ಬಾರಿ ಚಾಕುವಿನಿಂದ ಇರಿದಿದ್ದಾನೆ. ಪ್ರಯಾಣಿಕರು ತುಂಬಿದ್ದ ಬಸ್ ‌ನಲ್ಲಿ ಈ ದುಷ್ಕೃತ್ಯ ನಡೆದಿದೆ.
ಕಂಡಕ್ಟರ್ ಯೋಗೇಶ್​ಗೆ ಎರಡು ಮೂರು ಬಾರಿ ಚಾಕುವಿನಿಂದ ಇರಿದ ಬಳಿಕ ಬಸ್​ನಲ್ಲಿದ್ದ ಸುತ್ತಿಗೆ ತೆಗೆದುಕೊಂಡು ಗಾಜು ಪುಡಿಗಟ್ಟಿ ಹುಚ್ಚನಂತೆ ವರ್ತಿಸಿದ್ದಾನೆ. ಇದನ್ನು ನೋಡಿದ ಸಹ ಪ್ರಯಾಣಿಕರು ಕಿರುಚಾಡಿಕೊಂಡು ಬಸ್ಸಿನಿಂದ ಕೆಳಗೆ ಇಳಿದು ಓಡಿ ಹೋಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ವೈಟ್​ಫೀಲ್ಡ್ ಠಾಣೆ ಪೊಲೀಸರು ಧಾವಿಸಿದ್ದು, ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.
ಚಾಕು ಇರಿತಕ್ಕೆ ಒಳಗಾಗಿರುವ ಕಂಡಕ್ಟರ್​ ಯೋಗೇಶ್​ ಅವರನ್ನು ವೈದೇಹಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಚಾಕು ಇರಿದ ಪ್ರಯಾಣಿಕ ಇಂದು ಬೆಳಿಗ್ಗೆ ಖಾಸಗಿ ಕಂಪನಿಗೆ ಇಂಟರ್‌ವ್ಯೂಗೆ ಹೋಗಿದ್ದನಂತೆ. ಈ ವೇಳೆ ಆತನಿಗೆ ಕೆಲಸ ಸಿಕ್ಕಿಲ್ಲ. ಅದಕ್ಕಾಗಿ ಹತಾಶನಾದ ಆತ, ನಾನು ಹೊರಗೆ ಇರುವುದಿಲ್ಲ. ಜೈಲಿಗೆ ಹೋಗುತ್ತೇನೆ ಎಂದು ಈ ರೀತಿ ಮಾಡಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: : ಮಂತ್ರಾಲಯಕ್ಕೆ ಹೋದವರ ಮನೆಗೆ ಕನ್ನ ಹಾಕಿದ್ದವ, ಮಂಜುನಾಥನ ದರ್ಶನಕ್ಕೆ ಹೋಗಿ ಸಿಕ್ಕಿಬಿದ್ದ!