ಸೆ.11: ‘ವಿವೇಕಧಾರಾ’ ಕೃತಿ ಲೋಕಾರ್ಪಣೆ
ತುಮಕೂರು :ಐತಿಹಾಸಿಕ ಚಿಕಾಗೋ () ಪ್ರಥಮ ವಿಶ್ವಧರ್ಮ ಸಮ್ಮೇಳನದ ಸವಿಸ್ಮರಣೆಗಾಗಿ ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದಲ್ಲಿ ಇದೇ ಸೆ.11ರಂದು ಬುಧವಾರ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ.
2004ರಲ್ಲಿ ಸ್ಪೇನ್‌ದೇಶದ ಬಾರ್ಸಿಲೋನಾದಲ್ಲಿ ನೆರವೇರಿದ ನಾಲ್ಕನೇ ವಿಶ್ವಧರ್ಮ ಸಮ್ಮೇಳನ( ) ದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಗದಗಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಮುಖ್ಯಸ್ಥರಾದ ಸ್ವಾಮಿ ನಿರ್ಭಯಾನಂದ ಸರಸ್ವತೀ (  ) ರವರ ದಿವ್ಯ ನೇತೃತ್ವದಲ್ಲಿ ಕಾರ್ಯಕ್ರಮವು ಸಂಜೆ 6 ಗಂಟೆಗೆ ಆಶ್ರಮದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಆಯೋಜನೆಗೊಂಡಿದೆ.
ಗ್ರಂಥ ಲೋಕಾರ್ಪಣ: ತುಮಕೂರು ಆಶ್ರಮದ ಮುಖ್ಯಸ್ಥರಾದ ಸ್ವಾಮಿ ವೀರೇಶಾನಂದ ಸರಸ್ವತೀ(  ) ರವರು ಬರೆದಿರುವ, ಸ್ವಾಮಿ ವಿವೇಕಾನಂದರ ತತ್ತ್ವಾದರ್ಶಗಳನ್ನಾಧರಿಸಿದ, ವಿಭಿನ್ನ ಆಯಾಮಗಳನ್ನು ಪರಿಚಯಿಸುವ ಲೇಖನಗಳ ಗುಚ್ಛವಾದ ‘ವಿವೇಕಧಾರಾ’ ಕೃತಿ( ) ಯನ್ನು ಪೂಜ್ಯ ಸ್ವಾಮಿ ನಿರ್ಭಯಾನಂದರು ಲೋಕಾರ್ಪಣೆಗೈದು ದಿಕ್ಸೂಚಿ ಭಾಷಣ ಮಾಡುವರು.
ಸಾಧಕರಿಗೆ ಪುರಸ್ಕಾರತಮ್ಮ ಸಾಹಿತ್ಯ ಕೃಷಿಯ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಅದ್ವಿತೀಯ ಸಾಧನೆಗೈದ ಅಕ್ಷರ ಪರಾಶರ ನಾಡೋಜ ಡಾ|| ಟಿ.ವಿ.ವೆಂಕಟಾಚಲ ಶಾಸ್ತ್ರಿ, ಅಧ್ಯಾತ್ಮ ಚಿಂತಕಿ ತಾಯಿ ಲಲಿತಾಶಾಸ್ತ್ರಿ, ಧ್ಯೇಯನಿಷ್ಠ ರಾಷ್ಟ್ರ ಚಿಂತಕ ಡಾ|| ಬಾಬು ಕೃಷ್ಣಮೂರ್ತಿ ಮತ್ತು ಜನಪರ ಸೇವಾರತ್ನ ಶ್ರೀ ಹರಿಪ್ರಕಾಶ್ ಕೋಣೇಮನೆ ಇವರುಗಳನ್ನು ಆಶ್ರಮದ ವತಿಯಿಂದ ಸತ್ಕರಿಸಲಾಗುವುದು.