ಇಂದು ಎಣ್ಣೆ ಮಾರಾಟಕ್ಕೆ ನಿಷೇಧ…. ವಾಹನ ಸಂಚಾರ, ನಿಲುಗಡೆಗೂ ಬದಲಿ ವ್ಯವಸ್ಥೆ…ಕಾರಣ?
ಬೆಂಗಳೂರು:ವೀಕೆಂಡ್‌ ಪಾರ್ಟಿ ನೆಪದಲ್ಲಿ ಕುಡಿತದ ದಾಸರಾಗಿರುವ ಪುಂಡು ಪೋಕರಿಗಳಿಗೆ ಇಂದು ನಿರಾಶೆ ದಿನ. ಕಾರಣ, ಭಾನುವಾರ ಕೇಂದ್ರ ಬೆಂಗಳೂರು ಹಾಗೂ ಪೂರ್ವ ಬೆಂಗಳೂರಿನಲ್ಲಿ ಎಣ್ಣೆ ಮಾರಾಟಕ್ಕೆ ನಿಷೇಧ ಹೇರಲಾ ಗಿದ್ದು, ಪಾರ್ಟಿ ಮಾಡುವಂತಿಲ್ಲ.
ಶಿವಾಜಿನಗರದಲ್ಲಿ ಸೈಂಟ್‌ ಮೇರೀಸ್‌ ಬೆಸಿಲಿಯಾ ಫೀಸ್ಟ್‌ ದಿನದಂದು ಹಾಗೂ ವಾರ್ಷಿಕ ಹಬ್ಬ ಆಚರಣೆ ನಿಮಿತ್ತ ಈ ನಿರ್ಧಾರಕ್ಕೆ ಬರಲಾಗಿದೆ.
ಶಿವಾಜಿನಗರದಲ್ಲಿ ಸೈಂಟ್‌ ಮೇರೀಸ್‌ ಬೆಸಿಲಿಯಾ ಫೀಸ್ಟ್‌ ದಿನ ಭಕ್ತಾದಿಗಳು ಬೇರೆ ಬೇರೆ ಭಾಷೆಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಆರೋಗ್ಯ ಮಠದಿಂದ ಭಾರೀ ಮಟ್ಟದಲ್ಲಿ ಮೆರವಣಿಗೆ ಹೊರಡಲಿದೆ.
ಸ್ಥಳೀಯ ಸಂಚಾರಿ ಪೊಲೀಸರು ಕೂಡ ಸರಾಗ ಸಂಚಾರಕ್ಕೆ ಅನುವು ಮಾಡಿಕೊಳ್ಳಲು ಹಬ್ಬದ ಆಚರಣೆ ವೇಳೆ ಕೆಲವೊಂದು ನಿರ್ಧಾರ ಕೈಗೊಂಡಿವೆ.
ಶಿವಾಜಿನಗರದ ಅಕ್ಕಪಕ್ಕದ ಪ್ರದೇಶಗಳಾದ ಕಮರ್ಶಿಯಲ್‌ ಸ್ಟ್ರೀಟುಗಳು, ಭಾರತೀನಗರ ಪೊಲೀಸ್‌ ಠಾಣೆಗಳು, ಆರೋಗ್ಯ ಮಠ ಚಾರಿಯಟ್‌ ಮುಂತಾದೆಡೆ ಎಣ್ಣೆಶಾಪುಗಳು, ಬಾರುಗಳು, ಲಿಕ್ಕರ್‌ ಔಟ್‌ ಲೆಟ್‌ ಗಳು ಇಂದು ಬಂದ್‌ ಇರಲಿವೆ.
ಸೈಂಟ್‌ ಮೇರಿಸ್‌ ಚರ್ಚ್‌ ನಿಂದ ಎಂ.ಕೆ.ಸ್ಟ್ರೀಟು, ಬ್ರಾಡ್‌ ವೇ, ರಸೆಲ್‌ ಮಾರುಕಟ್ಟೆ ಹಾಗೂ ನೋರೋನ್ಹಾ ರಸ್ತೆ ಮೂಲಕ ಮೆರವಣಿಗೆ ಸಾಗಲಿದೆ. ಈ ವೇಳೆ, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಲಿದ್ದು, ಈ ಪ್ರದೇಶಗಳಲ್ಲಿ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.
ಸಂಚಾರ ನಿಷೇಧಬ್ರಾಡ್‌ ವೇ ಯಿಂದ ರಸೆಲ್‌ ಮಾರುಕಟ್ಟೆ, ಧರ್ಮರಾಜ ಕೊಯಿಲ್‌ ಸ್ಟ್ರೀಟ್‌ ನಿಂದ ರಸೆಲ್‌ ಮಾರ್ಕೆಟ್‌ ಹಾಗೂ ಬಿ.ಆರ್‌.ವಿ ಸರ್ಕಲ್‌ ನಿಂದ ಶಿವಾಜಿ ನಗರ ಬಸ್‌ ನಿಲ್ದಾಣದ ವರೆಗೂ ವಾಹನ ಸಂಚಾರಕ್ಕೆ ಅನುವು ಮಾಡಿಕೊಡ ಲಾಗಿದೆ. ಬದಲಿ ವ್ಯವಸ್ಥೆಯಾಗಿ, ಕ್ವೀನ್ಸ್‌ ರಸ್ತೆ, ಇನ್‌ ಫೆಂಟ್ರಿ ರಸ್ತೆ ಹಾಗೂ ತಿಮ್ಮಯ್ಯ ರಸ್ತೆ ಮುಂತಾದ ಕಡೆಗಳಲ್ಲೂ ಸಂಚಾರಕ್ಕೆ ವ್ಯವಸ್ಥೆ ಇದೆ.
ವಾಹನ ನಿಲುಗಡೆನಿಮ್ಮ ಸ್ವಂತ ಕಾರನ್ನು ನಿಲುಗಡೆ ಮಾಡಬೇಕಾದಲ್ಲಿ, ಕಾಮರಾಜ್‌ ರಸ್ತೆ ಅಕ್ಕಪಕ್ಕ ವ್ಯವಸ್ಥೆ ಇದೆ. ಸಫಿನಾ ಪ್ಲಾಜಾ, ಜಸ್ಮಾ ಭವನ್‌ ರಸ್ತೆ, ಆರ್‌ಬಿಎಎಸ್‌ಎಂಎಸ್‌ ಮೈದಾನ, ಡಿಕನ್‌ ಸನ್‌ ರಸ್ತೆ ಬಳಿಯ ಅನಾಥಾಲಯ ಬಳಿ ನಿಲುಗಡೆ ಮಾಡಬಹುದು.